SPECIAL STORY : ಸೂರ್ಯಕಾಂತಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ : ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಬಾರಿ ಅವ್ಯವಹಾರ: ರೈತರ ಆಕ್ರೋಶ!

You are currently viewing SPECIAL STORY : ಸೂರ್ಯಕಾಂತಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ : ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಬಾರಿ ಅವ್ಯವಹಾರ: ರೈತರ ಆಕ್ರೋಶ!

SPECIAL STORY : ಸೂರ್ಯಕಾಂತಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ : ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಬಾರಿ ಅವ್ಯವಹಾರ: ರೈತರ ಆಕ್ರೋಶ!

ಪ್ರಜಾವೀಕ್ಷಣೆ ವಿಶೇಷ ಸುದ್ದಿ : 

ಕುಕನೂರು : ರೈತರ ಅನುಕೂಲತೆಂದು ಸರ್ಕಾರವು ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದರೆ ಅಲ್ಲಿಯೂ ಸಹ ರೈತರಿಗೆ ಬಾರಿ ಮೋಸವಾಗುತ್ತಿದ್ದು ಕೇವಲ ಎರಡು ದಿನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ರೂಪಾಯಿ ಮೌಲ್ಯದ ಅವ್ಯವಹಾರ ಆಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು ಖರೀದಿ ಕೇಂದ್ರದ ನಿರ್ವಾಹಕರ ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.

ತಾಲೂಕಿನ ಮಂಡಲಗಿರಿ ಗ್ರಾಮದ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಲ್ಲಿ ಪ್ರಾರಂಭಿಸಲಾಗಿರುವ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದದ್ದು ತಡವಾಗಿ ಬೆಳಕಿಗೆ ಬಂದಿದ್ದು ರೈತರೇ ಪ್ರತಿಭಟನೆ ಮಾಡಿ ತಮಗಾದ ಅನ್ಯಾಯವನ್ನು ಸರಿಪಡಿಸಿಕೊಂಡಿದ್ದು ಇದೀಗ ತಪ್ಪಿತಸ್ಥರಿಗೆ ಯಾವ ಶಿಕ್ಷೆ ಕಾದಿದೆ ಎಂಬುದು ಮಾತ್ರ ರೈತರು ಮತ್ತು ಸಾರ್ವಜನಿಕರಲ್ಲಿ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಘಟನೆ ನಡೆದದ್ದೇನು ಗೋತ್ತಾ…?

ಇತ್ತೀಚಿಗಷ್ಟೇ ಗ್ರಾಮದ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಲ್ಲಿ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು ಕೇಂದ್ರದಲ್ಲಿ ಖರೀದಿ ಮಾಡುತ್ತಿದ್ದ ಸೂರ್ಯಕಾಂತಿ ಬೀಜಕ್ಕೆ ವೇಸ್ಟೇಜ್ ಎನ್ನುವಂತೆ ಪ್ರತಿ ಕ್ವಿಂಟಲ್ ಗೆ 2 ಕೆಜಿ ಹೆಚ್ಚುರಿಯಾಗಿ ತೆಗೆದುಕೊಳ್ಳಬೇಕೆಂಬ ಕರಾರು ಇದ್ದರೂ ಸಹ ಇಲ್ಲಿ ಕಾರ್ಯನಿರ್ವಹಿಸುವ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿ ಕ್ವಿಂಟಾಲಿಗೆ 3 ಕೆಜಿ ಹೆಚ್ಚುರಿಯಾಗಿ ಸೂರ್ಯಕಾಂತಿ ತೆಗೆದುಕೊಂಡಿದ್ದು ಅಂದರೆ ಪ್ರತಿ ಕ್ವಿಂಟಲ್ ಗೆ 102 ಕೆಜಿ ಬದಲಾಗಿ 105 ಕೆಜಿ ತೆಗೆದುಕೊಂಡಿದ್ದು ರೈತರಿಗೆ ಮಹಾ ಮೋಸ ಮಾಡಲಾಗಿದೆ ಎಂದು ರೈತ ವರ್ಗದವರು ಆರೋಪಿಸಿರುತ್ತಾರೆ. ಹೆಚ್ಚುರಿಯಾಗಿ ತೆಗೆದುಕೊಂಡು 3 ಕೆ.ಜಿಯನ್ನು ಪ್ರತ್ಯೇಕಿಸಿ ಅದನ್ನು ಸಹ ಬೇರೆ ಚಿಲಕೆ ಹಾಕಿ ನಂತರ ಯಾರದು ಬೇರೆ ರೈತರ ಹೆಸರಿನಲ್ಲಿ ಖರೀದಿ ಮಾಡಿಕೊಂಡಂತೆ ದಾಖಲಾತಿಯನ್ನು ನಿರ್ಮಿಸಿ ಅವರ ಹೆಸರಿಗೆ ಹಣ ವರ್ಗಾವಣೆ ಮಾಡಿರುವುದು ರೈತರ ಗಮನಕ್ಕೆ ಬಂದಿದ್ದು ರೈತರು ಖರೀದಿ ಕೇಂದ್ರವಾದ ಮಂಡಲಗಿರಿ ಗ್ರಾಮದ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ನಂತರ ಎಚ್ಚೆತ್ತುಕೊಂಡ ಕೆ ಓ ಎಫ್ ಜಿಲ್ಲಾ ಆಡಳಿತ ಅಧಿಕಾರಿ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಆಗಮಿಸಿ ರೈತರ ಮನವೊಲಿಸಿ ಅವರಿಂದ ಹೆಚ್ಚುವರಿಯಾಗಿ ತೆಗೆದುಕೊಂಡು ಸೂರ್ಯಕಾಂತಿಯ ಮೊತ್ತದ ಹಣವನ್ನು ಅವರಿಗೆ ಮರಳಿ ಕೊಡಿಸಿರುತ್ತಾರೆ.

ಹಮಾಲಿ ಹಾಗೂ ನೋಂದಣಿಗೂ ಶುಲ್ಕ ಹಾಕಿದ ಅಧಿಕಾರಿಗಳು..!!

ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರದಲ್ಲಿ ಹಮಾಲಿ ಹಾಗೂ ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ ಆದರೆ ರೈತರಿಂದ ಪ್ರತಿ ಕ್ವಿಂಟಲ್ ಗೆ ಹಮಾಲಿ ಎಂದು ನೂರು ರೂಪಾಯಿ ಹಾಗೂ ಪ್ರತಿ ರೈತರ ನೋಂದಣಿಗೆ 200 ರೂಪಾಯಿಗಳನ್ನು ಅಕ್ರಮವಾಗಿ ಕರಗಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಪಡೆದುಕೊಂಡಿದ್ದು ರೈತರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಅದನ್ನೆಲ್ಲ ಮರಳಿಸಿ ರೈತರ ಕ್ಷಮೆ ಯಾಚಿಸಿರುತ್ತಾರೆ. ಇದನ್ನೆಲ್ಲಾ ಕಣ್ಣಾರೆ ಕಂಡ ಕೆಓಎಫ್ ಜಿಲ್ಲಾ ಆಡಳಿತ ಅಧಿಕಾರಿ ಹಾಗೂ ಮಂಡಲಗಿರಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರು ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಸಂದರ್ಭದಲ್ಲಿ ಕೆಓಎಫ್ ಜಿಲ್ಲಾ ಆಡಳಿತ ಅಧಿಕಾರಿ ಮಧುಕರ ರೆಡ್ಡಿ, ಮಂಡಲಗಿರಿ , ಇಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ರೈತ ಮುಖಂಡರು ಉಪಸ್ಥಿತರಿದ್ದರು.

“ಹಗಲು ರಾತ್ರಿ ಎನ್ನದೆ ತಮ್ಮ ಕೃಷಿ ಜಮೀನಿನಲ್ಲಿ ಕಷ್ಟಪಟ್ಟು ಅನ್ನದಾತ ಎನಿಸಿಕೊಂಡಿರುವ ರೈತರ ಬೆಳೆಯ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲೂ ಸಹ ಈ ರೀತಿಯ ಅನ್ಯಾಯವಾಗುತ್ತಿರುವುದು ನಿಜಕ್ಕೂ ಕ್ಷಮಿಸಲಾಗದಂತಹ ಘಟನೆಯಾಗಿದ್ದು ಮೇಲಾಧಿಕಾರಿಗಳು ತಕ್ಷಣವೇ ತಪ್ಪಿತಸ್ಥರು ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಇದೇ ವಿಷಯವಾಗಿ ರೈತ ಸಂಘಟನೆಗಳು, ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು”

ವೆಂಕಟೇಶ ಈಳಿಗೆರ
ಗ್ರಾಮದ ಪ್ರಮುಖ ಹಾಗೂ ರೈತ ಮುಖಂಡ

“ನಮ್ಮ ಸಹಕಾರ ಸಂಘದಲ್ಲಿಯೇ ರೈತರಿಗೆ ಈ ರೀತಿಯ ಅನ್ಯಾಯವಾಗಿರುವುದು ನಿಜಕ್ಕೂ ನಾವು ತಲೆ ತಗ್ಗಿಸುವಂತಹ ಸಂಗತಿಯಾಗಿದ್ದು ಒಂದು ವಾರದ ಒಳಗೆ ಈ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು”

ಹನುಮರೆಡ್ಡಿ
ಅಧ್ಯಕ್ಷರು ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಮಂಡಲಗಿರಿ

Leave a Reply

error: Content is protected !!