You are currently viewing LOCAL NEWS : ಕಲಾವಿದ ಕಲೆಯನ್ನು ಗೌರವದಿಂದ ಕಂಡರೆ, ಕಲೆ ಗೌರವದಿಂದ ಕಾಣುವಂತೆ ಮಾಡುತ್ತದೆ : ರಾಜಣ್ಣ ಜೇವರ್ಗಿ

LOCAL NEWS : ಕಲಾವಿದ ಕಲೆಯನ್ನು ಗೌರವದಿಂದ ಕಂಡರೆ, ಕಲೆ ಗೌರವದಿಂದ ಕಾಣುವಂತೆ ಮಾಡುತ್ತದೆ : ರಾಜಣ್ಣ ಜೇವರ್ಗಿ

LOCAL NEWS : ಕಲಾವಿದ ಕಲೆಯನ್ನು ಗೌರವದಿಂದ ಕಂಡರೆ, ಕಲೆ ನಮ್ಮನ್ನು ಗೌರವದಿಂದ ಕಾಣುವಂತೆ ಮಾಡುತ್ತದೆ : ರಾಜಣ್ಣ ಜೇವರ್ಗಿ

ಕುಕುನೂರು :  ‘ಉತ್ತರ ಕರ್ನಾಟಕವು ವೃತ್ತಿ ರಂಗಭೂಮಿಗೆ ವಿಶೇಷ ನೆಲೆಯನ್ನು ನೀಡಿದ್ದು, ಇಲ್ಲಿ 27ಕ್ಕೂ ಹೆಚ್ಚು ಕಂಪನಿಗಳು ಇಲ್ಲಿ ಆಶ್ರಯವನ್ನು ಪಡೆದಿವೆ. ಹಣಕೊಟ್ಟು ನೋಡುವ ಪ್ರೇಕ್ಷಕನಿಗೆ ಮನ ತಣಿಸುವ, ಸಮಾಜಕ್ಕೆ ಉತ್ತಮ ಸಂದೇಶವನ್ನು ಹೊಂದಿರುವ, ಕುಟುಂಬ ಸಹಿತ ವೀಕ್ಷಿಸುವಂತಹ ನಾಟಕಗಳ ಪ್ರದರ್ಶನವಾದಲ್ಲಿ ಖಂಡಿತವಾಗಿ ಪ್ರೇಕ್ಷಕರಿಂದ ಪ್ರೋತ್ಸಾಹ ದೊರೆಯುತ್ತದೆ’ ಎಂದು ನಾಟಕ ರಚನೆಕಾರ, ನಿರ್ದೇಶಕ, ಕಲಾವಿದ ರಾಜಣ್ಣ ಜೇವರ್ಗಿ ಅಭಿಪ್ರಾಯ ಪಟ್ಟರು.

ನಿನ್ನೆ ಪಟ್ಟಣದ ಪೊಲೀಸ್ ಠಾಣೆ ರಸ್ತೆಯಲ್ಲಿ ಆಯೋಜಿಸಿರುವ ಬಿಎಸ್ಆರ್ ನಾಟಕ ಸಂಘ ಗುಬ್ಬಿ ಅವರ ರಂಗಭೂಮಿ ವೇದಿಕೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿವರ್ಷದಂತೆ ಇವತ್ತು ಸಹ ಶ್ರೀ ಗುದ್ನೇಶ್ವರ ಜಾತ್ರೆಯ ಅಂಗವಾಗಿ ನಾಟಕ ಪ್ರದರ್ಶನ ಆಯೋಜಿಸಲಾಗಿದ್ದು, ರಂಗಭೂಮಿ ಏಳಿಗೆಗೆ ವೃತ್ತಿ ರಂಗಭೂಮಿ, ಆಧುನಿಕ ರಂಗಭೂಮಿ ಸೇರಿದಂತೆ ಹಲವಾರು ಪ್ರಭೇದದ ರಂಗಭೂಮಿ ಕಲಾವಿದರು ಸಹಕರಿಸಬೇಕು, ಸರ್ಕಾರವು ಸಹ ರಂಗಭೂಮಿ ಉಳಿವಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ತಂದಿದ್ದು, 25 ವರ್ಷಗಳ ಸೇವೆ ಸಲ್ಲಿಸಿರುವ ನಾಟಕ ಕಂಪನಿಗಳಿಗೆ 10 ಲಕ್ಷ, ಹತ್ತರಿಂದ ಹದಿನೈದು ವರ್ಷಗಳವರೆಗೆ ಸೇವೆ ಸಲ್ಲಿಸಿರುವ ನಾಟಕ ಕಂಪನಿಗೆ 7 ರಿಂದ 8 ಲಕ್ಷ ಹಾಗೂ ನೂತನ ನಾಟಕ ಕಂಪನಿಗಳಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ನೀಡುತ್ತಿದೆ. ಸರ್ಕಾರದಿಂದ ವೃತ್ತಿ ರಂಗಭೂಮಿ ಅಭಿವೃದ್ಧಿಗಾಗಿ ಎರಡು ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ ಎಂದರು.

ಬಿಎಸ್ಆರ್ ನಾಟಕ ಸಂಘ ಗುಬ್ಬಿ ಅವರಿಂದ ಕುಕನೂರು ಪಟ್ಟಣದಲ್ಲಿ ಆಯೋಜಿಸಿರುವ “ಪಟ್ಟಿ ಅಂಗಡಿ ಪಾರು” ಎಂಬ ನಾಟಕ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಈ ನಾಟಕದಲ್ಲಿ ಅಶ್ಲೀಲ ಸಂಭಾಷಣೆ ಹಾಗೂ ಅಶ್ಲೀಲ ದೃಶ್ಯಗಳಿಗೆ ಆಸ್ಪದವಿಲ್ಲ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಕೇವಲ ಪಡ್ಡೆ ಹುಡುಗರನ್ನು ಕೇಂದ್ರೀಕರಿಸುವ ಬದಲು ಕುಟುಂಬದ ಎಲ್ಲಾ ಸದಸ್ಯರು ಕುಳಿತುಕೊಂಡು ನೋಡುವಂತಹ ನಾಟಕ ಪ್ರದರ್ಶನವಾಗುತ್ತಿದ್ದು, ವಿಶೇಷವಾಗಿ ಮಹಿಳಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ರಂಗಭೂಮಿ ಕಲಾವಿದರ ಮೇಲೆ ಹಲವಾರು ಆರೋಪಗಳು ಬರುತ್ತಿದ್ದು, ಹಾಗಾಗಿ ಕಲಾವಿದ ಕಲೆಯನ್ನು ಗೌರವದಿಂದ ಕಂಡರೆ, ಕಲೆ ನಮ್ಮನ್ನು ಗೌರವದಿಂದ ಕಾಣುವಂತೆ ಮಾಡುತ್ತದೆ ಎಂದರು.

ಈ ವೇಳೆಯಲ್ಲಿ ಪ್ರಮುಖರಾದ ವಿನಾಯಕ ಬೆನ್ನಳ್ಳಿ, ಬಿಎಸ್ಆರ್ ನಾಟಕ ಸಂಘದ ಮಾಲೀಕರಾದ ಸುಜಾತ ಗುಬ್ಬಿ, ಕಲಾವಿದರಾದ ಮರಿಬಸಪ್ಪ, ಧನರಾಜ್ ಬುಗುಡಿ ಕರ್, ಮಾರುತಿ ಶೆಟ್ಟಿ, ಅನ್ನಪೂರ್ಣ ಧಾರವಾಡ, ನೀಲ ಜೇವರ್ಗಿ, ಕವಿತಾ ವಿಜಯಪುರ, ಶರಣು ಶೆಟ್ಟಿ, ಬಸವರಾಜ, ಅವಿನಾಶ್ ಅಕ್ಕಲಕೋಟೆ, ಪೃಥ್ವಿರಾಜ್ ಬದಾಮಿ, ಸುಭಾಷ್ ಬೆಟಿಗೇರಿ, ಸಿದ್ದರಾಮ ತತ್ರಾಣಿ, ರಘು ಮುಧೋಳ ಹಾಗೂ ಮತ್ತು ಕಡಕೋಳ ಪಾಲ್ಗೊಂಡಿದ್ದರು.

Leave a Reply

error: Content is protected !!