ಮುದಗಲ್ಲ :- ಪುರಸಭೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 69ನೇ ಮಹಾ ಪರಿನಿರ್ವಾಣ ದಿನಾಚರಣೆ

ಮುದಗಲ್ಲ ವರದಿ..
ಪುರಸಭೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 69ನೇ ಮಹಾ ಪರಿನಿರ್ವಾಣ ದಿನಾಚರಣೆ..

ಮುದಗಲ್ಲ :- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುದಗಲ್ಲ ಪುರಸಭೆ ವತಿಯಿಂದ  ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಕ್ಕೆ ಪುರಸಭೆ ಮ್ಯಾನೇಜರ್ ಸುರೇಶ  ಕಂದಾಯ ವಿಭಾಗದ ಅಧಿಕಾರಿ ಅಂತೋಣೀ , ಯಲ್ಲಮ್ಮ, ನೈಮಲ್ಯ ವಿಭಾಗದ ಆರೀಪ್ ಹುನ್ನಿಸಾ ಬೇಗಂ , ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷರಾದ  ಶರಣಪ್ಪ ಕಟ್ಟಿಮನಿ, ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಅಧ್ಯಕ್ಷರಾದ ಬಸವರಾಜ ಬಂಕದಮನೆ ,ನಂದಪ್ಪ ಕತ್ತಿ ,ಸೇರಿದಂತೆ ಗಣ್ಯರು ಮಾಲಾರ್ಪಣೆ ಮಾಡಿ ಕ್ಯಾಡಲ್ ಹಚ್ಚುವ ಮೂಲಕ ಗೌರವ ನಮನ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ  ಮಾತನಾಡಿ, ʼಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಇಡೀ ಜೀವನ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜೊತೆಗೆ ವಿಶ್ವದ ಉತ್ಕೃಷ್ಟ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಮಾನತೆ ಒದಗಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ನಾಯಕರು ಸದಾ ಸ್ಮರಣೀಯರುʼ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ಚನ್ನಮ್ಮ ದಳವಾಯಿ ಹಿರೇಮಠ,ರಂಗನಾಥ ತಳವಾರ, ಜಿಲಾನಿ ಪಾಶ,ಕುಪ್ಪಣ್ಣ, ಹಾಗೂ ದೀಪ,ರೇಣುಕಾ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
 ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!