You are currently viewing LOCAL NEWS : ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ : ಹನಮಂತಪ್ಪ ಬನ್ನಿಕೊಪ್ಪ

LOCAL NEWS : ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ : ಹನಮಂತಪ್ಪ ಬನ್ನಿಕೊಪ್ಪ

LOCAL NEWS : ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ : ಹನಮಂತಪ್ಪ ಬನ್ನಿಕೊಪ್ಪ

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು : ‘ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಮಸಬಹಂಚಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮಂತಪ್ಪ ಬನ್ನಿಕೊಪ್ಪ ಹೇಳಿದರು.

ಇಂದು ತಾಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಲಬುರ್ಗಾ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ “ಕುಕನೂರು ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡದ ಅವರು, ಮಕ್ಕಳಲ್ಲಿ ಅಡಗಿಕೊಂಡಿರುವ ಪ್ರತಿಭೆ ಯನ್ನು ಗುರುತಿಸಿ ಪೋಷಿಸಿ ಬೆಳೆಸಬೇಕಾಗಿದ್ದು ಪ್ರತಿಯೊಬ್ಬರ ಶಿಕ್ಷಕರ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಅನಾವರಣಕ್ಕಾಗಿಯೇ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದರು.

ಶಾಲಾ ಸುಧಾರಣಾ ಸಮಿತಿ ಎಸ್ ಡಿಎಂಸಿ ಅಧ್ಯಕ್ಷ ನಿಂಗಪ್ಪ ಗೋಡೆಕರ ಮಾತನಾಡಿ, ‘ಪ್ರತಿಭಾಕಾರಂಜಿ ಹಾಗೂ ಕಲೋತ್ಸವದಿಂದ ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣಗೊಳ್ಳುತ್ತಿದ್ದೆ ಜೊತೆಗೆ ಸಂಸ್ಕೃತಿ ಹಾಗೂ ಎಲ್ಲಾ ರೀತಿಯ ಕಲೆಗಳ ಪರಿಚಯ ಮತ್ತು ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಗ್ರಾಮದ ಪ್ರಮುಖರಾದ ಪ್ರಭು ಆಚಾರ್, sdmc ಉಪಾಧ್ಯಕ್ಷೆ ಮಂಜುಳಾ ಲಂಬಾಣಿ, ಹನುಮಂತಪ್ಪ ಪೂಜಾರ್, ಗ್ರಾ. ಪಂ. ಸದಸ್ಯರು, ಮಸಬ್ ಹಂಚಿನಾಳ, ರವಿ ಬಜೇಂತ್ರಿ, ಬಿ ಆರ್ ಪಿ ನೋಡಲ್ ಅಧಿಕಾರಿ ಶಿವಪ್ಪ ಈಬೇರಿ, ಲಕ್ಷ್ಮಣ್ ಪೂಜಾರ್, ಮಾರುತಿ ಗಾವರಳ, ಶಿಕ್ಷಕರಾದ ಮಹೇಶ ಸಬರದ, ಉಮೇಶ್ ಕಂಬಳಿ, ಬೀರಪ್ಪ ಕರಿಗಾರ, ಅಶೋಕ ದೇವರಮನಿ, ವೀರಸಾಬ ದಫೆದಾರ್, ಮಹೇಶ್ ಅಸೂಟಿ, ಗ್ರಾಮ ಪಂಚಾಯಿತಿಯ ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು, ಗ್ರಾಮದ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

Leave a Reply

error: Content is protected !!