FLASH NEWS : KSRTC ಬಸ್ ನಲ್ಲಿ ಪುರುಷರಿಗೆ ಮೀಸಲು ಸೀಟುಗಳ ಬೇಡಿಕೆ!! : ಗ್ಯಾರೆಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಳಿ ಬಂದ ಕೂಗು!!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು : ಕುಕುನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಇಂದು ನಡೆದ”ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿಗಳ ಕಡೆ” ಎಂಬ ಶೀರ್ಷಿಕೆ ಅಡಿಯಲ್ಲಿ ಮಂಗಳೂರು ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಅವರು ವಹಿಸಿಕೊಂಡಿದ್ದರು.
ಈ ವೇಳೆ ವಿಶಿಷ್ಟವಾದ ಬೇಡಿಕೆ ಎಂದು ಪ್ರಸ್ತಾಪವಾಯಿತು. ಶಕ್ತಿ ಯೋಜನೆಯಿಂದ ಪ್ರತಿ ದಿನ ಶೇಕಡ 90ರಷ್ಟು ಮಹಿಳೆಯರೇ KSRTC ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಪುರುಷರಿಗೆ ಸ್ಥಳಾವಕಾಶ ಇಲ್ಲದೇ ಬಸ್ಸುಗಳಲ್ಲಿ ಪುರುಷರು ಪ್ರಯಾಣಿಸುವುದು ಬಹಳಷ್ಟು ಕಷ್ಟಕರವಾಗಿದೆ.
ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಬಸ್ ನಲ್ಲಿ 1 ರಿಂದ 15 ಸೀಟ್ ನವರೆಗೆ “ಪುರುಷರಿಗೆ ಮೀಸಲು ಸೀಟುಗಳು” ಎಂದು ಪ್ರತ್ಯೇಕವಾಗಿ ಬೋರ್ಡ್ ಹಾಕಬೇಕು ಎಂದು ವಿಶೇಷ ಬೇಡಿಕೆಯನ್ನು ತಾಲೂಕ ಅಧಿಕಾರಿಗಳ ಮುಂದೆ ಇಟ್ಟರು.
ಈ ಪ್ರಶ್ನೆಯನ್ನ ಕೇಳಿದ ಅಧಿಕಾರಿಗಳು ಕೆಲಕಾಲ ನಗೆಗಡಲಲ್ಲಿ ತೇಲಿದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ದಿನದಲ್ಲಿ ಬಸ್ಸುಗಳಲ್ಲಿ ಪುರುಷ ಮೀಸಲು ಸೀಟುಗಳೆಂದು ಗುರುತಿಸಿ ಬೋರ್ಡ್ ಹಾಕಿ ಎಂದು ಮತ್ತೊಮ್ಮೆ ಧನಿಯೆತ್ತಿದರು.