STATE NEWS : ಕಾನಿಪ ಧ್ವನಿ ಸಂಘಟನೆ ವತಿಯಿಂದ ಬೆಳಗಾವಿಯ ಸುವರ್ಣ ಸೌಧದ ಎದರು ವಿವಿಧ ಬೇಡಿಕೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಧರಣಿ!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಬೆಳಗಾವಿ ಸುವರ್ಣ ಸೌಧ : ಕಾ.ನಿ.ಪ ಧ್ವನಿ ಸಂಘಟನೆ ವತಿಯಿಂದ ಬೆಳಗಾವಿಯ ಸುವರ್ಣ ಗಾರ್ಡನ್ ಟೆಂಟ್ ನಂಬರ್ 8 ಸುವರ್ಣಾ ಸೌಧದ ಮುಂಭಾಗದಲ್ಲಿ ಇಂದು (ಡಿಸೇಂಬರ್ 15) ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು ಇದರ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷ ಡಾ. ರವಿ ಬಿ. ಕಾಂಬಳೆಯವರ ಸಹಯೋಗದಲ್ಲಿ ರಾಜ್ಯದ ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯ ಹೋರಾಟ ನಡೆಯುತ್ತಿದೆ.

ಪತ್ರಕರ್ತರ ಪ್ರಮುಖ ಬೇಡಿಕೆಗಳು
-
ರಾಜ್ಯದ್ಯಂತ ಓಡಾಡಲು ಉಚಿತ ಬಸ್ ಪಾಸ್ ನೀಡಬೇಕು.
-
ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿ ಮಾಡಬೇಕು.
-
ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಬೇಕು.
-
ಪತ್ರಕರ್ತರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಕ್ರಮವಹಿಸಬೇಕು.
-
ಪತ್ರಕರ್ತರ ಪ್ರಧಿಕಾರ ಸ್ಥಾಪನೆಮಾಡಬೇಕು.
-
ಆಧ್ಯತೆ ಮೇರೆಗೆ ನಿವೃತ್ತ ಪತ್ರಕರ್ತರರಿಗೆ ಪಿಂಚಣಿ ಕಲ್ಪಿಸಿಬೇಕು.
