ಮುದಗಲ್ಲ :- ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ: ಸುಜಾತಾ ಪಾಟೀಲ್‌ ಹುನೂರು….

ಮುದಗಲ್ಲ ವರದಿ..

ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ: ಸುಜಾತಾ ಪಾಟೀಲ್‌ ಹುನೂರು….

ಮುದಗಲ್ಲ :- ಪಟ್ಟಣದ ಆರ್ ಸಿ ಮೀಶನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ, ಕ್ರಿಸ್ತ ಜ್ಯೋತಿ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಹಬ್ಬದ ಆಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಲಿಂಗಸುಗೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಪಾಟೀಲ್‌ ಹುನೂರು ಅವರು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಕ್ರಿಸ್ತಜ್ಯೋತಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ, ಆರ್ ಸಿ ಮಿಷನ್ ಶಾಲೆ ಸಂಚಾಲಕಿ ಸಿಸ್ಟರ್ ಮರಿಯಮ್ಮ ಪನ್ನೂರು ಈ ಸಂದರ್ಭದಲ್ಲಿ ಮಾತನಾಡಿದರು ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸಬೇಕು ಎಂದು ಹೇಳಿದರು.

ಮುದಗಲ್‌ ಪವಿತ್ರ ಹೃದಯ
ದೇವಾಲಯದ ಫಾದರ್ ಪೊನ್ನುಸ್ವಾಮೀ, ಸಿರವಾರ ತಾಪಂ ಸಹಾಯಕ ನಿರ್ದೇಶಕ ಮಂಜುನಾಥ ಜಾವೂರು,
ಹಿರಿಯ ಪತ್ರಕರ್ತ ರಾಘವೇಂದ್ರ ಗುಮಾಸ್ತೆ, ಮುದಗಲ್‌
ಪತ್ರಕರ್ತರ ಸಂಘದ ಅಧ್ಯಕ್ಷ ದೇವಪ್ಪ ರಾಠೋಡ, ನಾಗರಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರವೀಣ ಪಾಟೀಲ್ ,ಕಾರ್ಯಕ್ರಮ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ 2024-25
ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ
ಯಲ್ಲಿ ಅಧಿಕ ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮತ್ತು ಜಿಲ್ಲಾ ಮಟ್ಟದ ಥೋ ಬಾಲ್‌ ಸ್ಪರ್ಧೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದ ನಿರೂಪಣೆ ಶಿಕ್ಷಕರಾದ ಕನಕಪ್ಪ, ಕಲ್ಪನಾ, ಅಲ್ತಾಫ್ ಹುಸೇನ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಪವಿತ್ರ ಹಬ್ಬವಾದ ಕ್ರಿಸ್ಮಸ್ ಶುಭಾಶಯ
ತಿಳಿಸಿದರು. ಸೆಕ್ರೆಡ್ ಹಾರ್ಟ ಶಾಲೆ ವ್ಯವಸ್ಥಾಪಕ ಫಾದರ್ ವಿಜಯ ಕುಮಾರ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಮಾರ್ಟಿನ್ ಅಮಲ್ ರಾಜ್, ಸಿಸ್ಟರ್ ಅಣ್ಣಮ್ಮ ಮೇರಿ, ಪ್ರಭಾರಿ ಮುಖ್ಯಶಿಕ್ಷಕ ವೆಂಕಟೇಶ, ತಾಲೂಕು ಅನುದಾನಿತ ಪ್ರಾಥಮಿಕ ಸಂಘದ ಅಧ್ಯಕ್ಷ ಶಿವರಾಜ ಸ.ಶಿ, ರಾಘವೇಂದ್ರ ಮಸ್ಕಿ, ಡಾ. ವಿನೋದ ಕುಮಾರ.ದೈಹಿಕ ಶಿಕ್ಷಕ ರಮೇಶ ದಿಕ್ಷೀತ್, ಸಿದ್ದನಗೌಡ ಹಾಗೂ ಶಿಕ್ಷಕ ವೃಂದ,ವಿದ್ಯಾರ್ಥಿಗಳು ಇದ್ದರು.

 ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!