FLASH NEWS : ಸಾಮೂಹಿಕ ಅತ್ಯಾಚಾರ ಪ್ರಕರಣ: ವೈದ್ಯಾಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಮಲ್ಲನಗೌಡ ಎಸ್, ಕೋನನಗೌಡ್ರು ಒತ್ತಾಯ..!

You are currently viewing FLASH NEWS : ಸಾಮೂಹಿಕ ಅತ್ಯಾಚಾರ ಪ್ರಕರಣ: ವೈದ್ಯಾಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಮಲ್ಲನಗೌಡ ಎಸ್, ಕೋನನಗೌಡ್ರು ಒತ್ತಾಯ..!
ಮಲ್ಲನಗೌಡ ಕೋನನಗೌಡ್ರು ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ

FLASH NEWS : ಸಾಮೂಹಿಕ ಅತ್ಯಾಚಾರ ಪ್ರಕರಣ: ವೈದ್ಯಾಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಮಲ್ಲನಗೌಡ ಎಸ್, ಕೋನನಗೌಡ್ರು ಒತ್ತಾಯ..!

ಮಲ್ಲನಗೌಡ ಕೋನನಗೌಡ್ರು ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ

• ಪ್ರಜಾವೀಕ್ಷಣೆ ಸುದ್ದಿ:

ಯಲಬುರ್ಗಾ : ಮಹಿಳೆಯ ಮೇಲೆ ನಡೆದ ಗಂಭೀರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡುವಲ್ಲಿ ಭಾಗಿಯಾಗಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಕುಮಾರ ಬಿ. ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಮಲ್ಲನಗೌಡ ಎಸ್ ಮತ್ತು ಕೋನನಗೌಡ್ರು ಒತ್ತಾಯಿಸಿದ್ದಾರೆ.

ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿ ಕೂಡ ಇಂತಹ ವ್ಯಕ್ತಿಯನ್ನು ವೈದ್ಯಕೀಯ ಕ್ಷೇತ್ರದಿಂದ ವಜಾ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

“ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಸಾಕ್ಷಿಯನ್ನು ನಾಶ ಮಾಡುವ ಮೂಲಕ ಸಮಾಜ, ವೈದ್ಯಕೀಯ ಕ್ಷೇತ್ರ ಮತ್ತು ಕ್ಷೇತ್ರದ ಜನರಿಗೆ ಕಪ್ಪು ಚುಕ್ಕೆ ಹಾಕುತ್ತಿದ್ದಾರೆ. ಕಾನೂನು ಪಾಲನೆಯಿಂದಲೇ ಇವನ್ನು ಎದುರಿಸಬೇಕು” ಎಂದು ಅವರು ಹೇಳಿದರು.

ಜೆ ಡಿ ಎಸ್ ಮುಖಂಡ ಮಲ್ಲನಗೌಡ ಎಸ್ ಮತ್ತು ಕೋನನಗೌಡ್ರು, ನ್ಯಾಯವಂತ ಅಧಿಕಾರಿಗಳು ಹಾಗೂ ಸಾರ್ವಜನಿಕ ಹಿತಚಿಂತಕರು ಕಾನೂನು ಪಾಲನೆಯ ಖಾತರಿಯಂತೆ ಕಾರ್ಯನಿರ್ವಹಿಸಲು ಮನವಿ ಮಾಡಿದ್ದಾರೆ.

Leave a Reply

error: Content is protected !!