SPECIAL STORY : ಕ್ಯಾಶ್ ಬಳಸುವ ಮುನ್ನ ಎಚ್ಚರ..!! : ಈ ಮಿತಿ ಮೀರಿದರೆ ಬೀಳಬಹುದು ಭಾರೀ ದಂಡ..! ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳು!

You are currently viewing SPECIAL STORY : ಕ್ಯಾಶ್ ಬಳಸುವ ಮುನ್ನ ಎಚ್ಚರ..!! : ಈ ಮಿತಿ ಮೀರಿದರೆ ಬೀಳಬಹುದು ಭಾರೀ ದಂಡ..! ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳು!

SPECIAL STORY : ಕ್ಯಾಶ್ ಬಳಸುವ ಮುನ್ನ ಎಚ್ಚರ..!! : ಈ ಮಿತಿ ಮೀರಿದರೆ ಬೀಳಬಹುದು ಭಾರೀ ದಂಡ..! ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳು!

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ : 

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್‌ : ದಿನತ್ಯದ ದಿನಸಿ ತರಲು, ತರಕಾರಿ ಕೊಳ್ಳಲು ನಗದು ಬಳಸಿದರೆ ಪರವಾಗಿಲ್ಲ. ಆದರೆ, ನೀವು ಫ್ರಿಡ್ಜ್, ಟಿವಿ, ಚಿನ್ನ ಅಥವಾ ಕಾರು ಕೊಳ್ಳಲು ಹೋಗಿ ಲಕ್ಷ ಲಕ್ಷ ಹಣವನ್ನು ‘ಕ್ಯಾಶ್’ (Cash) ರೂಪದಲ್ಲಿ ಕೊಟ್ಟರೆ ಅಪಾಯ ಕಟ್ಟಿಟ್ಟ ಬತ್ತಿ.  ಆದಾಯ ತೆರಿಗೆ ಇಲಾಖೆಯ (Income Tax) ಕಣ್ಣು ನಿಮ್ಮ ಮೇಲ ಬೀಳಬಹುದು. ಹಾಗಾದರೆ, ಈ ಸಮಸ್ಯೆಯಿಂದ ಪಾರಾಗಲು ಈ ಕೇಲಸ ಮಾಡಿ..

* ಎರಡು ಲಕ್ಷಕ್ಕಿಂತ ಹೆಚ್ಚು ನಗದು ಕೊಡಬೇಡಿ! : ಇಲ್ಲಿದೆ ಆಪಾಯ..!

ಇದು ಅತ್ಯಂತ ಪ್ರಮುಖ ನಿಯಮವಾಗಿದ್ದು, ನೀವು ಯಾವುದೇ ವ್ಯಕ್ತಿಯಿಂದ ಅಥವಾ ಯಾವುದೇ ಅಂಗಡಿಯಿಂದ ಒಂದೇ ದಿನದಲ್ಲಿ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ಪಡೆಯುವಂತಿಲ್ಲ ಹಾಗೂ ಕೊಡುವಂತಿಲ್ಲಎಂಬುದು ಈ ನಿಯಮವಾಗಿದೆ.

ನಿಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಕಷ್ಟ ಅಂತ ಕೈ ಸಾಲ ಕೊಡ್ತೀರಾ? ಇಲ್ಲೂ ಹುಷಾರ್. 20,000 ರೂಪಾಯಿಗಿಂತ ಹೆಚ್ಚು ಸಾಲವನ್ನು ನಗದು ರೂಪದಲ್ಲಿ ಕೊಡುವ ಹಾಗಿಲ್ಲ ಮತ್ತು ಪಡೆಯುವ ಹಾಗಿಲ್ಲ. ಮರುಪಾವತಿ ಮಾಡುವಾಗಲೂ ಅಷ್ಟೇ, 20 ಸಾವಿರಕ್ಕಿಂತ ಮೇಲಿದ್ದರೆ ಬ್ಯಾಂಕ್ ಮೂಲಕವೇ ವರ್ಗಾವಣೆ ಮಾಡಿಕೊಳ್ಳಬಹುದು.

* ಮನೆಯಲ್ಲಿ ಎಷ್ಟು ಹಣ ಇಡಬಹುದು?

“ನನ್ನ ಮನೆಯಲ್ಲಿ ನಾನು ಎಷ್ಟು ಬೇಕಾದರೂ ಹಣ ಇಡಬಹುದು, ಕೇಳೋರು ಯಾರು?” ಎಂದು ನೀವು ಅಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ. ಮನೆಯಲ್ಲಿ ಹಣ ಇಡಲು ಲಿಮಿಟ್ ಇಲ್ಲ, ನಿಜ. ಆದರೆ, ಐಟಿ ಅಧಿಕಾರಿಗಳು ಬಂದು ಕೇಳಿದರೆ ಆ ಹಣ ಎಲ್ಲಿಂದ ಬಂತು? (Source of Income) ಎಂದು ತೋರಿಸಲು ನಿಮ್ಮ ಬಳಿ ದಾಖಲೆ ಇರಬೇಕು. ಲೆಕ್ಕವಿಲ್ಲದ ಹಣ ಸಿಕ್ಕರೆ ಭಾರೀ ದಂಡ ಕಟ್ಟಬೇಕಾಗುತ್ತದೆ.

                                                                       ಮಾಹಿತಿ ಕೋಷ್ಟಕ

ವ್ಯವಹಾರದ ವಿಧ :                                                                                                                   ನಗದು ಮಿತಿ (Cash Limit)
ದೊಡ್ಡ ಖರೀದಿ (ಚಿನ್ನ/ಕಾರು) :-                                                                                            ₹2 ಲಕ್ಷದವರೆಗೆ ಮಾತ್ರ
ಕೈ ಸಾಲ (Loans) :-                                                                                                                   ₹20,000 ವರೆಗೆ ಮಾತ್ರ
ಆಸ್ತಿ ಖರೀದಿ :-                                                                                                                           ನಗದು ಬಳಸುವಂತಿಲ್ಲ (Banking only) 
ಸೇವಿಂಗ್ಸ್ ಖಾತೆಗೆ ಜಮೆ (ಒಂದು ವರ್ಷಕ್ಕೆ) : –                                                                        ₹10 ಲಕ್ಷ ಮೀರಿದರೆ ಐಟಿ ಕಣ್ಣು

ಪ್ರಮುಖ ಎಚ್ಚರಿಕೆ :- ಒಂದು ವೇಳೆ ನೀವು 2 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡಿ ಸಿಕ್ಕಿಬಿದ್ದರೆ, ವ್ಯವಹಾರ ಮಾಡಿದ ಮೊತ್ತದ 100% ರಷ್ಟು ದಂಡ ವಿಧಿಸಲಾಗುತ್ತದೆ. ಅಂದರೆ ನೀವು 5 ಲಕ್ಷ ಕ್ಯಾಶ್ ಕೊಟ್ಟಿದ್ದರೆ, 5 ಲಕ್ಷ ದಂಡ ಕಟ್ಟಬೇಕಾಗುತ್ತದೆ.!

Leave a Reply

error: Content is protected !!