ಮುದಗಲ್ಲ :- ತೊಂಡಿಹಾಳ ಜಾತ್ರೆಯಲ್ಲಿ ಪ್ರಾಣಿಗಳ ಬಲಿ ತಡೆಯಲು ಸ್ವಾಮೀಜಿ ಒತ್ತಾಯ…

ಮುದಗಲ್ಲ ವರದಿ..

ತೊಂಡಿಹಾಳ ಜಾತ್ರೆಯಲ್ಲಿ ಪ್ರಾಣಿಗಳ ಬಲಿ ತಡೆಯಲು ಸ್ವಾಮೀಜಿ ಒತ್ತಾಯ…

 ಮುದಗಲ್ಲ :- ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೊಂಡೇಹಾಳ ಗ್ರಾಮದಲ್ಲಿ ಜ.19 ರವರೆಗೆ ಜರುಗುವ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ತಡೆಯುವಂತೆ ವಿಶ್ವ ಪ್ರಾಣಿ ಕಲ್ಯಾಾಣ ಮಂಡಳಿ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ಶ್ರೀ ದಯಾನಂದ ಸ್ವಾಾಮೀಜಿ ಒತ್ತಾಯಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸೂರ ತಾಲೂಕಿನ ತೊಂಡಿಹಾಳ ಹುಲಿಗೆಮ ದೇವಿ ನಡೆಯುವ ಜಾತ್ರೆಯಲ್ಲಿ ಕುರಿ ಕೋಳಿ ಆಡು -ಮೇಕೆ ಕೋಣ ಇತ್ಯಾದಿ ಯಾವುದೇ ಮೂಕ ಮೂಗ್ಧ ನಿರಪರಾಧಿ ಪ್ರಾಣಿಗಳನ್ನು ಬಲಿ ಕೋಡದಂತೆ ಕಟ್ಟುನಿಟ್ಟಿನ ವ್ಯಾಪಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಪ್ರಾಣಿ ಬಲಿ ಯನ್ನು ಸಂಪೂರ್ಣ ವಾಗಿ ನಿಲ್ಲಿಸುವ ಮೂಲಕ ಹಿಂಸೆ ಮುಕ್ತ, ಪ್ರಾಣಿ ಬಲಿ ಮುಕ್ತ ಜಾತ್ರೆಯಾಗಿ ರೂಪಿಸುವಂತೆ ಮಾಡಬೇಕು ಹಾಗೂ ಹೈಕೋರ್ಟ್‌ ಆದೇಶದಂತೆ ಪೊಲೀಸ್‌ ಇಲಾಖೆ ಪ್ರಾಣಿಬಲಿ ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮಿಜಿ ಆಗ್ರಹಿಸಿದರು.

ಹೈಕೋರ್ಟ್‌ ಆದೇಶದನ್ವಯ ಪ್ರಾಣಿ ಹತ್ಯೆ ಮಾಡದಂತೆ ಈಗಾಗಲೇ ರಾಜ್ಯ ಸರಕಾರ, ರಾಯಚೂರು ಜಿಲ್ಲಾಡಳಿ ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ. ಆದರೂ ತೊಂಡಿಹಾಳ ಹುಲಿಗೇಮ್ಮದೇವಿ ಜಾತ್ರೆ ಯಲ್ಲಿ ಹರಕೆ ಹೆಸರಿನಲ್ಲಿ ನೂರಾರು , ಕುರಿ, ಮೇಕೆ ಹಾಗೂ ಕೋಳಿ ಬಲಿ ಕೊಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜ-19 ವರಗೆ ನಡೆಯುವ ತೊಂಡಿಹಾಳ ಹುಲಿಗೇಮ್ಮ ದೇವಿ ಜಾತ್ರೆಯಲ್ಲಿ ರಾಯಚೂರು ಜಿಲ್ಲೆಯ ಸೇರಿದಂತೆ ಲಿಂಗಸೂರ ತಾಲೂಕೂ ಹಾಗೂ ಮುದಗಲ್ಲ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ಇತರ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಹರಕೆಯ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುತ್ತಾರೆ. ಪ್ರಾಣಿ ಹತ್ಯೆ ಮಾಡದಂತೆ ಭಕ್ತರಲ್ಲಿವಿನಂತಿಸಿಕೊಂಡರು ಪ್ರಾಣಿ ಹತ್ಯೆ ಕಡಿಮೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

1959ರ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ ಕಾಯ್ದೆ ಹಾಗೂ ರಾಜ್ಯ ಉಚ್ಛನ್ಯಾಯಾಲಯ ಆದೇಶಗಳ ಪ್ರಕಾರ ಪ್ರಾಣಿಬಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿಭಕ್ತರು ಯಾವುದೇ ಪ್ರಾಣಿಗಳನ್ನು ಮತ್ತು ಆಯುಧಗಳನ್ನು ಈ ಜಾತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ತೆಗೆದುಕೊಂಡು ಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪೊಲೀಸರು ಯಾವುದೇ ಕಾರಣಕ್ಕೂ ಜಾತ್ರೆಯಲ್ಲಿಪ್ರಾಣಿ ಬಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು

ಜಾತ್ರೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮದಲ್ಲಿಪ್ರಾಣಿ ಬಲಿ ಕೊಡುವ ಬದಲು ಅಹಿಂಸಾ ಮಾರ್ಗವನ್ನು ಅನುಸರಿಸಿ ಪೂಜೆ ಸಲ್ಲಿಸಿದಲ್ಲಿದೇವರ ಕೃಪೆಗೆ ಪಾತ್ರರಾಗಬಹುದು. ಶುದ್ಧ ಸಸ್ಯಾಹಾರ ಊಟ ಮಾಡುವ ಮೂಲಕ ಹಬ್ಬಗಳನ್ನು ಅಹಿಂಸಾತ್ಮಕವಾಗಿ ಆಚರಿಸುವ ಮನೋಭಾವ ಭಕ್ತರಲ್ಲಿ ಬರಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮಿಜಿ ತಿಳಿಸಿದರು.

ಜನರಲ್ಲಿ ಜಾಗೃತಿ ಮೂಡಿಸಲು ಜ.15ರಿಂದ ಲಿಂಗಸುಗೂರಿನ
ವಿವಿಧ ಭಾಗಗಳಲ್ಲಿ ಹಾಗೂ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ
ಪರಿಸರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಅಹಿಂಸಾ
ಪ್ರಾಣಿದಯಾ ಆಧ್ಯಾತ್ಮ ಸಂದೇಶಯಾತ್ರೆ ಕೈಗೊಳ್ಳುವುದಾಗಿ
ತಿಳಿಸಿದ್ದಾರೆ

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!