ಮುದಗಲ್ಲ ವರದಿ..
ಪ್ರತಿಭಾನ್ವೇಷಣೆಯೇ ಕಲಿಕಾ ಹಬ್ಬ ಕಾಯ೯ಕ್ರಮ ಉದ್ದೇಶ..

ಮುದಗಲ್ಲ :- ಸಮೀಪದ ಆಮದಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾಯಾ೯ಲಯ ಲಿಂಗಸೂರ ಸಮೂಹ ಸಂಪನ್ಮೂಲ ಕೇಂದ್ರ ಆಮದಿಹಾಳ 2025-26 ಸಾಲಿನ FLN ಕಲಿಕಾ ಹಬ್ಬ ಕಾಯ೯ಕ್ರಮ ನಡೆಯಿತು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಆಮದಿಹಾಳ ನಡೆಯಿತು

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಹಬವೇ ಕಲಿಕಾ ಹಬ್ಬ ಕಾರ್ಯಕ್ರಮದ ಉದ್ದೇಶವಾಗಿದೆ’ ಶಾಲೆಯ SDMC ಅಧ್ಯಕ್ಷರಾದ ಹನುಮಂತಪ್ಪ
ಎಂದು ಹೇಳಿದರು.ಆವರಣದಲ್ಲಿ ನಡೆದ ಕಾಯ೯ಕ್ರಮಕ್ಕೆ ಸಸಿಗೆ ನೀರು ಹರಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಸಿ ಅರ್ ಪಿ ರಾಮಚಂದ್ರ ಢವಾಳೆ FLN ಕಲಿಕಾ ಹಬ್ಬವು ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ, ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು. ’ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹನುಮಂತಪ್ಪ ಕನ್ನಾಳ ಎಸ್‌ಡಿಎಂಸಿ ಅಧ್ಯಕ್ಷರು,ಮುಖ್ಯ ಗುರಗಳಾದ ಗುರುಪಾದಪ್ಪ ,, ಸುರೇಶ್ ಗೌಡರ್ APF ಸಂಯೋಜಕರು, ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಹಾಗೂ ಊರಿನ ಪ್ರಮುಖರು ಮತ್ತು SDMC ಸರ್ವ ಸದಸ್ಯರು,CRC ಯ ಎಲ್ಲಾ ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರುಮತ್ತು 14 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸವ೯ ಸದಸ್ಯರು ಹಾಗೂ ಸಿಬ್ಬಂದಿ ವಗ೯ದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ