BIG NEWS : ಕುಕನೂರು | ತಾಲೂಕಿನ 15 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯಾಗಿ ನೇಮಕ ಹಾಗೂ ಅಧಿಕಾರ ಹಂಚಿಕೆ..!

You are currently viewing BIG NEWS : ಕುಕನೂರು | ತಾಲೂಕಿನ 15 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯಾಗಿ ನೇಮಕ ಹಾಗೂ ಅಧಿಕಾರ ಹಂಚಿಕೆ..!

BIG NEWS : ಕುಕನೂರು | ತಾಲೂಕಿನ 15 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳ ನೇಮಕ ಹಾಗೂ ಅಧಿಕಾರ ಹಂಚಿಕೆ..!

 

ಪ್ರಜಾ ವೀಕ್ಷಣೆ ಸುದ್ದಿ:- 

ಕುಕನೂರು : ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶಿಸಿರುವ ಸರ್ಕಾರ ಆಡಳಿತಾಧಿಕಾರಿಗಳಿಗೆ ಅಧಿಕಾರ ಹಂಚಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ತಾಲೂಕಿನ 15 ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಜೊತೆಗೆ ಜೊತೆಗೆ ಅಧಿಕಾರವೂ ಕೂಡ ವಹಿಸಿಕೊಂಡಿದ್ದಾರೆ.

ಮಂಡಲಗಿರಿ ಗ್ರಾಮ ಪಂಚಾಯಿತಿಗೆ ಆಡಳಿತಧಿಕಾರಿ ಆಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶಶಿಧರ್ ಸಕ್ರಿ ಅಧಿಕಾರ ವಹಿಸಿಕೊಂಡರು.

ಯಲಬುರ್ಗಾ-ಕುಕನೂರು ಅವಳಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶಶಿಧರ್ ಸಕ್ರಿ ಅವರು ಒಟ್ಟು ಮೂರು ಗ್ರಾಮ ಪಂಚಾಯಿತಿಯ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಹಿರೇಬಿಡ್ನಾಳ ಯರೇಹಂಚಿನಾಳ, ಮಂಡಲಗಿರಿ ಗ್ರಾಮ ಪಂಚಾಯಿತಿಗಳ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಅದರಂತೆ ಭಾನಾಪುರ್, ಬಳಗೇರಿ, ಮಂಗಳೂರು, ಈ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಸಂತೋಷ್ ಪಾಟೀಲ್ ಬಿರಾದಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜೂರು ತಳಕಲ್ ಶಿರೂರು ಈ ಗ್ರಾಮ ಪಂಚಾಯಿತಿಗಳಿಗೆ ತಾಲೂಕು ಯೋಜನಾಧಿಕಾರಿಗಳು ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಜೊತೆಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಯಲಬುರ್ಗಾ ಇವರು ಬನ್ನಿಕೊಪ್ಪ, ನೆಲಜೇರಿ, ಇಟಗಿ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಯಾಗಿ ಅಧಿಕಾರ ತೆಗೆದುಕೊಂಡಿದ್ದಾರೆ. ಮಸಬಹಂಚಿನಾಳ, ಕುದ್ರಿಮೋತಿ, ಬೆಣಕಲ್ ಗ್ರಾಮ ಪಂಚಾಯಿತಿಗಳಿಗೆ ತಾಲೂಕು ವಲಯ ಅರಣ್ಯ ಅಧಿಕಾರಿ ಯಲಬುರ್ಗಾ ಇವರು ಅಧಿಕಾರ ವಹಿಸಿಕೊಂಡಿದ್ದಾರೆ.

ಈ ನೇಮಕಾತಿಗೊಂಡ ಅಧಿಕಾರಿಗಳು  ಅಧಿಕಾರ ವಹಿಸಿಕೊಂಡಿರುವ ದಿನಾಂಕದಿಂದ ಆಡಳಿತಾಧಿಕಾರಿಗಳ ಪ್ರಭಾರವನ್ನು ವಹಿಸಿಕೊಂಡು ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಲು ಮತ್ತು ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣಿಗಳ ನಂತರ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮುಕ್ತಾಯವಾದ ಬಳಿಕ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸುವವರೆಗೆ
ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಯ ಅಧಿಕೃತ ಆದೇಶದ ಪ್ರತಿ ಉಲ್ಲೇಖವಾಗಿದೆ.

ಜಿಲ್ಲಾಧಿಕಾರಿಯ ಅಧಿಕೃತ ಆದೇಶದ ಪ್ರತಿ

Leave a Reply

error: Content is protected !!