ಮುದಗಲ್ಲ:- ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ : ಸಿದ್ದಯ್ಯ ಸ್ವಾಮಿ..

ಮುದಗಲ್ಲ :- ಸ್ಥಳೀಯ ವಿಜಯ ಮಹಾಂತೇಶ್ವರ ಮಠದಲ್ಲಿ ಶನಿವಾರ ಎಸ್.ವಿ.ಎಂ ಕನ್ನಡ & ಆಂಗ್ಲ ಮಾಧ್ಯಮ ಶಾಲೆವತಿಯಿಂದ ಏರ್ಪಡಿಸಿದ್ದ
ಶಾಲಾ ವಾರ್ಷಿಕೋತ್ಸವ ಕಾಯ೯ಕ್ರಮಕ್ಕೆ ಸಿದ್ದಯ್ಯ ಸ್ವಾಮಿ ,ನಿವೃತ್ತ ಶಿಕ್ಷಕರಾದ ಹಾಜಿ ಮಲ್ಲಂಗ ಬಾಬಾ ,ಹಿರಿಯ ಪತ್ರಕರ್ತ ರಾದ ಚಂದ್ರಣ್ಣ ಗಂಗಾವತಿ ಸಂಗಮೇಶ ಸರಗಣಚಾರಿ ಹಾಗೂ ಮಹಾಂತೇಶ ಸರ್ ಸರಸ್ವತಿ ದೇವಿ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದರು

ಕಾಯ೯ಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ಸಿದ್ದಯ್ಯ ಸ್ವಾಮಿ ಅವರು ನಾಗರೀಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆ ಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿ ಎಲ್ಲಾ ಧರ್ಮಗಳ ಸಮನ್ವ ಯತೆಯನ್ನು ಇಲ್ಲಿ ಕಾಣಲು ಸಾಧ್ಯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವಾರ್ಷಿಕೋತ್ಸವಗಳು ಉತ್ತಮ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ನಂತರದ ಮಾತನಾಡಿದ ನಿವೃತ್ತ ಶಿಕ್ಷಕರಾದ ಹಾಜಿ ಮಲ್ಲಂಗ ಬಾಬಾ ಅವರು ಸಮಾರಂಭದ ಕುರಿತು ಮಾತನಾಡಿದ್ದರು ನಾಗರೀಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿ ಮಾಡುತ್ತದೆ .
ಹಾಗೂ ಮಕ್ಕಳನ್ನು ಓದಿಸುವ ವಿಚಾರದಲ್ಲಿ ಶಿಕ್ಷಕರಷ್ಟೆ ಪೋಷಕರದ್ದು ಕೂಡ ದೊಡ್ಡ ಜವಾಬ್ದಾರಿಯಿದೆ. ಮಕ್ಕಳ ಓದಿನ ಬಗ್ಗೆ ಪೋಷಕರು ಸರಿಯಾಗಿ ಗಮನಿಸಬೇಕು. ಬದ್ಧತೆ,ಶಿಸ್ತು, ಧೈರ್ಯ ಗುಣ ಗಳನ್ನು ಮಕ್ಕಳಿಗೆ ಧಾರೆಯೆರಯಬೇಕು. ಯಾವ ಕಾರಣಕ್ಕೂ ಮಕ್ಕಳು ಓದುವಾಗ ಟಿವಿ ಹಾಕಬೇಡಿ. ನಿಶ್ಯಬ್ಧ ಪರಿಸರ ಇರಲಿ.ಮಕ್ಕಳ ಮುಂದೆ ಜಗಳ ಆಡಬೇಡಿ.ಇದು ಮಕ್ಕಳ ಮನಸ್ಸಿನ ಮೇಲೆ ಪ್ರತಿ ಕೂಲ ಪ್ರಭಾವ ಬೀರುತ್ತದೆ ಎಂದು ಎಚ್ಚರಿಸಿದರು ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿರುವ ಶಾಲೆಗಳ ಪೈಕಿ ಎಸ್.ವಿ.ಎಂ ಕನ್ನಡ & ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನದಲ್ಲಿ ನಿಲ್ಲಲಿದೆ.ಪಠ್ಯ ಶಿಕ್ಷಣದೊಟ್ಟಿಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿರುವುದು ಹೆಮ್ಮೆ ಯೆನಿಸಿದೆ .ಇದೇ ಕಾರಣಕ್ಕಾಗ ಇಲ್ಲಿ ದಾಖಲಾತಿಗೆ ಕೊರತೆಯಾಗಿಲ್ಲ ಎಂದು ಬಣ್ಣಿಸಿದರು.

ನಂತರ ಮಾತನಾಡಿದ ಮಾತನಾಡಿದ ಶಿಕ್ಷಕರಾದ ಮಹಾಂತೇಶ ಸರ್ ಅವರು ಶಿಕ್ಷಣದಲ್ಲಿ ತಾಂತ್ರಿಕತೆಯಿರಬೇಕು. ಮೌಲ್ಯಗಳಿರಬೇಕು,ಕೌಶಲ್ಯಯುತ ಬೋಧನೆಗೆ ಒತ್ತು ನೀಡಬೇಕು. ಆಗ ಮಾತ್ರ ಮಕ್ಕಳು ದೇಶದ ಆಸ್ತಿ ಆಗುತ್ತಾರೆ. ಕಾಣದ ದೇವರನ್ನು ಪೂಜಿವ ಬದಲಿಗೆ ಕಣ್ಣಿಗೆ ಕಾಣುವ ತಂದೆ ತಾಯಿಯನ್ನು ಗೌರವಿಸಿ, ಪೂಜಿಸಲು ಮುಂದಾಗುತ್ತಾರೆ. ಮಕ್ಕಳು ಏನಾಗ ಬೇಕು ಎಂದು ನಿಮಗೆ ಕನಸಿದೆಯೋ ಅಂತಹ ಪರಿಸರ ಸೃಷ್ಟಿಸುವ ಮೂಲಕ ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು.ಓದುವ ಸಮಯದಲ್ಲಿ ಟಿ.ವಿ.ಮೊಬೈಲ್ ಮೋಹ ಅಪ್ಪ ಅಮ್ಮನಿಗೂ ಬೇಡ, ಇಷ್ಟಾದರೆ ಮಕ್ಕಳೂ ಅದರಿಂದ ದೂರವಿರುತ್ತಾರೆ ಎಂದು ಕರೆ ನೀಡಿದರು.

ಎಸ್.ವಿ.ಎಂ ಕನ್ನಡ & ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕ ಸಂಗಮೇಶ ಸರಗಣಚಾರಿ ಮಾತನಾಡಿ ಪುರುಷನಿರಲಿ ಮಕ್ಕಳಿರಲಿ ಅವರ ಯಶಸ್ಸಿನ ಹಿಂದೆ ತಾಯಿ ಅಂದರೆ ಹೆಣ್ಣು ಇದ್ದೇ ಇರುತ್ತಾಳೆ.ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಬೇರೆಯವರ ಹಕ್ಕಿನ ಉಲ್ಲಂಘನೆ ಮಾಡದಂತೆ,ನಮ್ಮ ಹಕ್ಕುಗಳ ಉಲ್ಲಂಘನೆಯೂ ಆಗದಂತೆ ಜಾಗೃತೆ ವಹಿಸುವ ಬಗ್ಗೆ ಕಲಿಸಬೇಕು. ಎರಡನೆಯದಾಗಿ ಎಮೋಷನಲ್ ಪ್ರಥಮ ಚಿಕಿತ್ಸೆ ನೀಡುವ ಬದಲು ಮಾನಸಿಕ ಪ್ರಥಮ ಚಿಕಿತ್ಸೆ ಕಲಿಸಿ. ಮೂರನೆಯದಾಗಿ ಭಯಮುಕ್ತ ಭಾರತ ಕಟ್ಟು ವುದಕ್ಕೆ ಪೋಷಕರು ಕೈಜೋಡೊಡಿಸಬೇಕು. ಸಹಾಯ ಮಾಡುವ ಕೌಶಲ್ಯ ಮಕ್ಕಳಿಗೆ ಕಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಅತ್ಯುತ್ತಮ ವಿಧ್ಯಾರ್ಥಿ ಗಳು ,ಅತ್ಯುತ್ತಮ ಶಿಕ್ಷಕರಿಗೆ ಶಾಲೆಯ ವತಿಯಿಂದ ವಿಶೇಷ ಗೌರವ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗುರುಗಳಾದ ಚಂದ್ರಶೇಖರ ನಾಯಕ್
ಶಿಕ್ಷಕರಾದ. ಶ್ವೇತಾ , ಶಿವಪ್ರಕಾಶ, ಅನಿಶ್ ಫಾತಿಮಾ, ಸಹರಬಾನು, ಮುಖ್ಯ , ಮಾಬುಸಾಬು, ಸಂಜೀವ್ ಬಾಕಲಿ, ವಿಧ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
