ಮುದಗಲ್ಲ ವರದಿ..
ಮುದಗಲ್ಲ ಪುರಸಭೆ ನಿಲಷ್ಯ ದಿಂದ ನೀರಿನ ಸಮಸ್ಯೆ : ಗುಂಡಪ್ಪ ಗಂಗಾವತಿ..
ಮುದಗಲ್ಲ :- ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡಪ್ಪ ಗಂಗಾವತಿ ಅವರು ಶಾಸಕ ಮಾನಪ್ಪ ವಜ್ಜಲ್ ಮುದಗಲ್ ಪಟ್ಟಣದ ಕುಡಿಯುವ ನೀರು, ಅಗ್ನಿಶಾಮಕ ಠಾಣೆ,ಮುದಗಲ್ ಕೋಟೆ ಉತ್ಸವ, ತಾಲೂಕಾ ಕೇಂದ್ರದ ಕುರಿತು ಅಧೀವೇಶನದಲ್ಲಿ ಪ್ರಸ್ತಾಪಿಸಿದರೂ ಸರಕಾರ ಸಮರ್ಪಕ ಉತ್ತರ ನೀಡಿಲ್ಲ.
ಪುರಸಭೆ ಆಡಳಿತ ಮಂಡಳಿಯವರು ಶಾಸಕರಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಇದು ವರೆಗೂ ಗಮನಕ್ಕೆ ತಂದಿಲ್ಲ.
ಅದರಂತೆ ಕೆಕೆಆರ್ ಡಿಬಿ ಅನುದಾನದಲ್ಲಿ ಸುಮಾರು1 ಕೋಟಿ ರೂಗಳನ್ನು ಕುಡಿಯುವ ನೀರಿಗಾಗಿ ನೀಡುತ್ತೇನೆ ಎಂದು ಶಾಸಕರಾದ ಮಾನಪ್ಪ ವಜ್ಜಲ್ ಅವರು ಭರವಸೆಯನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರ ಅಮೃತ್ 2.0 ಯೋಜನೆಯಡಿ ಪಟ್ಟಣದಲ್ಲಿ ಕುಡಿಯುವ ನೀರಿನ ಕೊಳವೆ ಮಾಗ೯ ಅಳವಡಿಸಿ ಗೃಹ ಸಂಪರ್ಕ ಕಲ್ಪಿಸಲಾಗುವುದು ,ಇ ಯೋಜನೆ ಯಲ್ಲಿ ನಮ್ಮ ಕ್ಷೇತ್ರ ಲಿಂಗಸೂರು ಆಯ್ಕೆ ಮಾಡಿದ್ದಾರೆ ಅಮೃತ 2.0 ಯೋಜನೆ ಅಡಿಯಲ್ಲಿ 93.76 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಕೊಳವೆ ಮಾಗ೯ ಅಳವಡಿಸಿ ಗೃಹ ಸಂಪರ್ಕ ಕಾಮಗಾರಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಕಳೆದ ಹಲವು ವರ್ಷಗಳಿಂದ ಲಿಂಗಸೂರು ಹಟ್ಟಿ ಮುದಗಲ್ಲನಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು ಜಿಲ್ಲೆಯಲ್ಲಿ ಜಲಧಾರೆ , ಜೆಜೆಎಂ ,ಅಮೃತ 2.0 ಯೋಜನೆ ಗಳು ಜಾರಿಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ದೊರೆಯಲಿದೆ ಕುಡಿಯುವ ನೀರಿಗಾಗಿ ಶಾಸಕರು ಸತತವಾಗಿ ಪ್ರಾಮಾಣಿಕ ಪ್ರಯತ್ನದಲ್ಲಿದ್ದು,ಅತೀ ಶೀಘ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ನೀರು ಸರಬರಾಜು ಮಾಡುವ ವಿಭಾಗದಲ್ಲಿ ಅನುಭವ ಇರುವ ಸಿಬ್ಬಂದಿ ಗಳ ಬದಲಾವಣೆ ಮಾಡುವ ಸಮಸ್ಯೆ ತಿಂಗಳಲ್ಲಿ ಪದೇ ಪದೇ ಪೈಪ್ ಲೈನ್ ಹೊಡೆಯುವ ಸಮಸ್ಯೆ ಹಾಗೂ ವಾಡ೯ಗಳಿಗೆ ನೀರು ಬಿಡುವ ಸಮಯ ಬದಲಾಯಿಸಿದರೆ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ತಲುಪಲುವ ವಿಷಯದಲ್ಲಿ ಸ್ವಲ್ಪ ತೊಂದರೆ ಗೊಂದಲಗಳು ಕಂಡುಬರುತ್ತದೆ ಎಂದರು
ಇಲ್ಲ ಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಮ್ಮ ಜನಪ್ರಿಯ ಶಾಸಕರಾದ ಮಾನಪ್ಪ ವಜ್ಜಲ್ ಅವರು ಪ್ರಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅದ್ಯಕ್ಷ ಕರಿಯಪ್ಪ ಯಾದವ್ ಈ ಸಂದರ್ಭದಲ್ಲಿ ಹೇಳಿದರು.
ಕರವೇ ಸಂಘಟನೆ ಯವರು ಮಂಗಳವಾರ13 ರಂದು ನಡೆಯುವ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ನಾವು ಕೂಡಾ ಬಂದ್ ಗೆ ಬೆಂಬಲಿಸುತ್ತೇವೆ. ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲ್ಲಪ್ಪ ಮಾಟೂರು,ಉದಯ ಕುಮಾರ, ಫಕೀರಪ್ಪ ಕುರಿ,ಮಲ್ಲಪ್ಪ ಹೂಗಾರ, ಮಂಜುನಾಥ ನಂದವಾಡಗಿ, ಶರಣಪ್ಪ ಹಂಚಿನಾಳ,ವೆಂಕಟೇಶ ಹಿರೇಮನಿ, ನಾಗರಾಜ ತಳವಾರ,ರವಿ ಕಟ್ಟಿಮನಿ, ಗದ್ದೆಪ್ಪ ಜಜಕ್ಕೇರಮಡು, ರಮೇಶ್ ಉಪ್ಪಾರ ಸೇರಿದಂತೆ ಮುಂತಾದವರು ಇದ್ದರು.
ವರದಿ:-ಮಂಜುನಾಥ ಕುಂಬಾರ.