ಮುದಗಲ್ಲ :- 506 ನೇ ಸರ್ವಜ್ಞ ಜಯಂತಿ ಆಚರಣೆ..

ಮುದಗಲ್ಲ :- 506 ನೇ ಸರ್ವಜ್ಞ ಜಯಂತಿ ಆಚರಣೆ..

ಮುದಗಲ್ಲ :- ರಾಜ್ಯದಲ್ಲಿ ಕುಂಬಾರ ಸಮುದಾಯವು ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ’ ಎಂದು ಮುದಗಲ್ಲ ಘಟಕದ  ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಬಸವ ಕುಂಬಾರ ತಿಳಿಸಿದರು.
ಸ್ಥಳೀಯ ಪುರಸಭೆ ಹಾಗೂ ಮುದಗಲ್ಲ ಕಾಂಗ್ರೆಸ್ ಆಫೀಸ್ ನಲ್ಲಿ  ಹಮ್ಮಿಕೊಂಡಿದ್ದ 506ನೇ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂಬಾರ ಸಮುದಾಯದಿಂದ ಶಾಸಕರು, ಸಂಸದರು, ವಿಧಾನ ಪರಿಷತ್, ರಾಜ್ಯಸಭಾ ಸದಸ್ಯರು ಇಲ್ಲ. ಹೀಗೆ ಅತ್ಯಂತ ಹಿಂದುಳಿದ ಸಮುದಾಯವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಯಾವುದೇ ಪಕ್ಷವು ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಿಲ್ಲ. ರಾಜಕೀಯ ಅಧಿಕಾರ ದೊರೆತರೆ ಮಾತ್ರ ಸಣ್ಣ ಪುಟ್ಟ ಸಮುದಾಯಗಳು ಬೆಳವಣಿಗೆಯಾಗಲು ಸಾಧ್ಯ’ ಎಂದರು.
ಬಲಾಢ್ಯ ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಡೆದಿರುವ ಹಾಗೂ ಅಧಿಕ ಜನಸಂಖ್ಯೆಯುಳ್ಳ ಸಮುದಾಯಗಳು ಇನ್ನೂ ಹೆಚ್ಚಿನ ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಕುಂಬಾರರು ಸೇರಿದಂತೆ ಹಲವಾರು ಸಣ್ಣ ಪುಟ್ಟ ಸಮುದಾಯದವರಿಗೆ ಯಾವುದೇ ಸೌಲಭ್ಯ ದೊರೆತಿಲ್ಲ. ಸೌಲಭ್ಯ ವಂಚಿತರನ್ನು ಗುರುತಿಸದೆ ಸೌಲಭ್ಯಗಳನ್ನು ಪಡೆದಿರುವವರು ಇನ್ನೂ ಹೆಚ್ಚಿನ ಸೌಲಭ್ಯಗಳಿಗಾಗಿ ಒತ್ತಾಯಿಸುತ್ತಿರುವುದು ವಿಪರ್ಯಾಸವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಪುರಸಭೆ ಯಲ್ಲಿ ಮ್ಯಾನೇಜರ್ ಸುರೇಶ ಹೊನ್ನಳ್ಳಿ , ಕಂದಾಯ ವಿಭಾಗದ ಅಂತೋಣಿ ರಾಜ್, ನಿಸಾರ್ ಅಹಮದ್, ಜಿಲಾಯಿ ಪಾಶ, ಚನ್ನಮ್ಮ ದಳವಾಯಿ ಹಿರೇಮಠ, ವೆಂಕಣ್ಣ ಕುಲಕರ್ಣಿ, ಕುಂಬಾರ ಸಮಾಜದ ಅಧ್ಯಕ್ಷ ರಾದ ಚನ್ನಬಸವ ಕುಂಬಾರ , ಮಂಜುನಾಥ , ಭಿಮಣ್ಣ ಕುಂಬಾರ , ಮಂಜುನಾಥ ಕುಂಬಾರ ಯುವ ಪತ್ರಕರ್ತರು ವಿರೇಶ  ಹಾಗೂ ಕಾಂಗ್ರೆಸ್ ಪಕ್ಷದ ಕಾಯಾ೯ ಲಯದಲ್ಲಿ  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜಲ್ಲಿ, ಕೆಡಿಪಿ ಸದಸ್ಯರಾದ ರಾಘವೇಂದ್ರ  ಕುದರಿ , ಕೃಷ್ಣ ಛಲವಾದಿ ಅಧ್ಯಕ್ಷರು ಪರಿಶಿಷ್ಟ ಜಾತಿ Sc Cell ಬ್ಲಾಕ್ ಕಾಂಗ್ರೆಸ್ ಸಮಿತಿ , ಗಫರ್ ಖಾನ್ ಅಧ್ಯಕ್ಷರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುದಗಲ್, ಖಧೀರ್ ಪಾನವಾಲೆ ಯುವ ಕಾಂಗ್ರೆಸ್ ಅಧ್ಯಕ್ಷರು, ಮೌನೇಶ್ ಛಲವಾದಿ,  ಗ್ಯಾನಪ್ಪ ಹೋಳ್ಯಾಚಿ, ಹಾಜಿಮಲ್ಲಂಗ್  ಬಾಬಾ ,ಗಂಗಾಧರ್ ಯಾದವ, ಹುಸೇನ್ ಡೊಂಗ್ರಿ ,ಅರುಣ್ ಕುಮಾರ್ ಯರದಿಹಾಳ್ , ಪರಶುರಾಮ್ ಮೇಗಳಮನಿ. ಶಾಲಾಂಟೇಲರ್ ಕಾಂಗ್ರೆಸ್ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!