LOCAL BREAKING : ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಯಲಬುರ್ಗಾದಲ್ಲಿ 24 ಗಂಟೆಯೊಳಗೆ ಆರೋಪಿ ಬಂಧನ!

You are currently viewing LOCAL BREAKING : ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಯಲಬುರ್ಗಾದಲ್ಲಿ 24 ಗಂಟೆಯೊಳಗೆ ಆರೋಪಿ ಬಂಧನ!

LOCAL BREAKING : ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಯಲಬುರ್ಗಾದಲ್ಲಿ 24 ಗಂಟೆಯೊಳಗೆ ಆರೋಪಿ ಬಂಧನ!

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ : 

ಕೊಪ್ಪಳ, ಫೆ.23 : ಯಲಬುರ್ಗಾ ಪಟ್ಟಣದಲ್ಲಿ ಸಾರ್ವಜನಿಕ ಕಾರ್ಯಕ್ರಮದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣವನ್ನು ಜಿಲ್ಲಾ ಪೊಲೀಸರು ಶೀಘ್ರ ಭೇದಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾದ ವೇಳೆ ಪರಿಶೀಲನಾ ಘಟಕಕ್ಕೆ ಲಭಿಸಿದ ಮಾಹಿತಿಯ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಘಟನೆ (ದಿನಾಂಕ: 28.01.2026): ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಸಮೀಪ ನಡೆದ ಮಠದ ಅಡ್ಡ ಪಲ್ಲಕಿ ಮಹೋತ್ಸವದ ಚಾಲನೆ ವೇಳೆ, ಒಬ್ಬ ವ್ಯಕ್ತಿ ತನ್ನ ಕೈಯಲ್ಲಿದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಕೃತ್ಯದಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಶಾಂತಿ ಭಂಗ ಹಾಗೂ ಜೀವಾಪಾಯ ಸಂಭವದ ಆತಂಕ ವ್ಯಕ್ತವಾಗಿತ್ತು. ಪ್ರಕರಣ ದಾಖಲು (ದಿನಾಂಕ: 20.02.2026): ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ರಾಮ್.ಎಲ್ ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ, ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 30/2026 ದಾಖಲಿಸಲಾಗಿದೆ.

ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ ಕಾಯ್ದೆ-2023ರ ಕಲಂ 125 ಹಾಗೂ ಆರ್ಮ್ಸ್ ಆಕ್ಟ್‌ನ ಕಲಂ 25(1)(ಎ), 25(9), 27 ಅಡಿಯಲ್ಲಿ ದಾಖಲಿಸಲಾಗಿದೆ.

ವಿಶೇಷ ತಂಡದ ಕಾರ್ಯಾಚರಣೆ

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತಕುಮಾರ ಮತ್ತು ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸರವಗೋಳ ಮೇಲುಸ್ತುವಾರಿಯಲ್ಲಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್ ನೇತೃತ್ವದಲ್ಲಿ ಪಿ.ಎಸ್.ಐ. ವಿಜಯಪ್ರತಾಪ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಆರೋಪಿತ ಬಂಧನ..!

ತನಿಖೆಯ ವೇಳೆ ಬಸವರಾಜ ತಂದೆ ಮಾನಿಂಗಪ್ಪಗೌಡ ಪಾಟೀಲ್ (58), ಗುತ್ತಿಗೆದಾರ, ಮೂಲ ನಿವಾಸ ಸಿಂದಗಿ, ವಿಜಯಪುರ ಜಿಲ್ಲೆ, ಹಾಲಿ ವಾಸ ಮೀನಾಕ್ಷಿ ನಗರ, ಯಲಬುರ್ಗಾ ಎಂಬವರನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆರೋಪಿತನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಆಯುಧ ವಶಪಡಿಕೆ..!

ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಸಂಶಯಾಸ್ಪದ ಕಪ್ಪು ಬಣ್ಣದ 6 ಚೆಂಬರ್ ರಿವಾಲ್ವಾರ್, 5 Fired Cartridges ಹಾಗೂ 6 Live Cartridgesಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪ್ರಶಂಸೆ…!

ಸೂಕ್ಷ್ಮ ಸ್ವರೂಪದ ಈ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದನೆ ಹಾಗೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!