You are currently viewing LOCAL NEWS : ಕುಕನೂರು|ಭಾವೈಕ್ಯತೆಯ ಸಂಗಮವಾದ ಮಂಗಳೇಶ್ವರ ಮಹಾ ರಥೋತ್ಸವ.

LOCAL NEWS : ಕುಕನೂರು|ಭಾವೈಕ್ಯತೆಯ ಸಂಗಮವಾದ ಮಂಗಳೇಶ್ವರ ಮಹಾ ರಥೋತ್ಸವ.

LOCAL NEWS : ಕುಕನೂರು|ಭಾವೈಕ್ಯತೆಯ ಸಂಗಮವಾದ ಮಂಗಳೇಶ್ವರ ಮಹಾ ರಥೋತ್ಸವ.

 ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ : 

ಕುಕನೂರು, ಫೆ.25: ತಾಲೂಕಿನ ಮಂಗಳೂರು ಗ್ರಾಮದ ಮಂಗಳೇಶ್ವರ ದೇವಸ್ಥಾನ ದಲ್ಲಿ ಫೆ.26ರ ಗುರುವಾರ ಮಹಾ ರಥೋತ್ಸವ ಜರುಗಲಿದೆ ಎಂದು ಭಕ್ತ ಮಂಡಳಿ ಪ್ರಕಟಿಸಿದೆ.

ಗ್ರಾಮದ ಆರಾಧ್ಯ ದೈವ ಮಂಗಳೇಶ್ವರಸ್ವಾಮಿಯ ಜಾತ್ರಾ ಮಹೋತ್ಸವವನ್ನು ಯಾವುದೇ ಜಾತಿ–ಭೇದ–ಧರ್ಮ ಎನ್ನದೆ ಭಾವೈಕ್ಯತೆಯಿಂದ ಆಚರಿಸುವುದು ಈ ಉತ್ಸವದ ವಿಶೇಷವಾಗಿದೆ. ತಿಂಗಳ ಮುಂಚಿತವಾಗಿಯೇ ಜಾತ್ರೆಯ ಸಕಲ ಸಿದ್ಧತೆಗಳು ಕೈಗೊಳ್ಳಲಾಗುತ್ತವೆ.

ಜಾತ್ರೆಯ ಅಂಗವಾಗಿ ಫೆ.20ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಫೆ.26ರಂದು ಮಂಗಳೇಶ್ವರನಿಗೆ ಅಭಿಷೇಕ, ಮಧ್ಯಾಹ್ನ ಮಹಾ ಗಣರಾಧನೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 4.30ಕ್ಕೆ ಮಹಾ ರಥೋತ್ಸವ ಜರುಗಲಿದೆ.

ಫೆ.27ರಂದು ಶಿವಭಜನೆ, ಕೀರ್ತನೆ, ನಾಟಕ, ಸಿನಿಮಾ, ಬಯಲಾಟ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಫೆ.28ರಂದು ಅಶ್ವಾರೂಢ ಸೇವೆ, ಗೃಹಪ್ರವೇಶ, ಕುಡುಬಿನ ಕಾಳಗ ಹಾಗೂ ರಾತ್ರಿ 10ಕ್ಕೆ ಪರಶಿವನ ವಿಸರ್ಜನೆ ಕಾರ್ಯಕ್ರಮಗಳು ಜರುಗಲಿವೆ.

ಸಕಲ ಸದ್ಭಕ್ತರು ಜಾತ್ರಾ ಉತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.

Prajavikshane

Chandru R Bhanapaur

Leave a Reply

error: Content is protected !!