You are currently viewing SPECIAL STORY : Summer Season | ಮಾರುಕಟ್ಟೆಯಲ್ಲಿ ಕಲ್ಲಂಗಡಿ ಖರೀದಿಸುವ ಮುನ್ನ ಈ 3 ಟೆಸ್ಟ್ ಖಂಡಿತ ಮಾಡಿ…

SPECIAL STORY : Summer Season | ಮಾರುಕಟ್ಟೆಯಲ್ಲಿ ಕಲ್ಲಂಗಡಿ ಖರೀದಿಸುವ ಮುನ್ನ ಈ 3 ಟೆಸ್ಟ್ ಖಂಡಿತ ಮಾಡಿ…

SPECIAL STORY : Summer Season | ಮಾರುಕಟ್ಟೆಯಲ್ಲಿ ಕಲ್ಲಂಗಡಿ ಖರೀದಿಸುವ ಮುನ್ನ ಈ 3 ಟೆಸ್ಟ್ ಖಂಡಿತ ಮಾಡಿ…

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ :

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್ : ಈ ಬಾರಿ ಬಿರು ಬೇಸಿಗೆ ಅವಧಿಗೂ ಮುನ್ನವೇ ಅಬ್ಬರಿಸಲು ಶುರುವಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಫೆಬ್ರವರಿ ತಿಂಗಳಿನಿಂದಲೇ ತಾಪಮಾನ ಏರಿಕೆಯಾಗಿದ್ದು, ಮಾರ್ಚ್ ತಿಂಗಳ ಆರಂಭದಲ್ಲೇ ಜನ ತತ್ತರಿಸುತ್ತಿದ್ದಾರೆ. ಈ ಸುಡುವ ಬಿಸಿಲಿನಿಂದ ಆರೋಗ್ಯ ಕಾಪಾಡಿಕೊಳ್ಳುವುದೇ ಜನತೆಗೆ ಹೈರಾಣ ಆಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳುಲು ನಾವು ತಂಪು ಪಾನೀಯ ಮತ್ತು ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣು (Watermelon) ಕಡೆ ಹೆಚ್ಚಾಗಿ ವಾಲುತ್ತವೆ.

ರಸ್ತೆ ಬದಿಯಲ್ಲಿ ಕೆಂಪಗೆ ಕಂಗೊಳಿಸುವ ಕಲ್ಲಂಗಡಿ ಹಣ್ಣು ನೋಡಿದ ತಕ್ಷಣ ಬಾಯಲ್ಲಿ ನೀರೂರುತ್ತದೆಯೆ? ಸೆಖೆ ತಡೆಯಲಾಗದೆ ನೀವೂ ಕಲ್ಲಂಗಡಿ ಹಣ್ಣು ಖರೀದಿಸಲು ಮುಂದಾಗಿದ್ದೀರಾ? ಸ್ವಲ್ಪ ತಾಳ್ಮೆಯಿಂದ ಯೋಚಿಸಿ..ನೋಡಿ… ನೀವು ಆಸೆಪಟ್ಟು ಮನೆಗೆ ಒಯ್ಯುತ್ತಿರುವ ಹಣ್ಣು ನೈಸರ್ಗಿಕವಾಗಿ ಮಾಗಿದ್ದಾ ಅಥವಾ ಇಂಜೆಕ್ಷನ್ ಕೊಟ್ಟು, ಕೆಮಿಕಲ್ ಹಾಕಿ ಹಣ್ಣು ಮಾಡಿದ್ದಾ ಎಂದು ಒಮ್ಮೆಯಾದರೂ ಪರೀಕ್ಷಿಸಿದ್ದೀರಾ?…

ಕೇವಲ ನೋಡಲು ಕೆಂಪಗಿದೆ ಎಂದು ಕಲ್ಲಂಗಡಿ ಖರೀದಿಸಿದರೆ, ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯ ಹಾಳಾಗುವುದು ಪಕ್ಕಾ ಗ್ಯಾರಂಟಿ.! ಕಲ್ಲಂಗಡಿ ಹಣ್ಣು ಶುದ್ಧವಾಗಿದೆಯೇ ಎಂದು ಪತ್ತೆಹಚ್ಚಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಮತ್ತು ಆರೋಗ್ಯ ತಜ್ಞರು ಕೆಲವು ಸುಲಭ ವಿಧಾನಗಳನ್ನು ತಿಳಿಸಿದ್ದಾರೆ.

FSSAI ಸೂಚಿಸಿದ “ಹತ್ತಿ ಉಂಡೆ ಪರೀಕ್ಷೆ”

ರಾಸಾಯನಿಕ ಬಣ್ಣಗಳನ್ನು ಪತ್ತೆಹಚ್ಚಲು ಇದು ಅತ್ಯುತ್ತಮ ವಿಧಾನವಾಗಿದೆ. ಕಲ್ಲಂಗಡಿಯನ್ನು ಅರ್ಧ ಕತ್ತರಿಸಿ, ಅದರ ಕೆಂಪು ಭಾಗದ ಮೇಲೆ ಒಂದು ಶುದ್ಧ ಹತ್ತಿ ಉಂಡೆಯಿಂದ (Cotton ball) ಉಜ್ಜಿರಿ. ಬಳಿಕ ಹತ್ತಿ ಬೆಳ್ಳಗೇ ಇದ್ದರೆ ಹಣ್ಣು ನೈಸರ್ಗಿಕವಾಗಿದೆ. ಹತ್ತಿಗೆ ಕೆಂಪು ಬಣ್ಣ ಅಂಟಿಕೊಂಡರೆ, ಹಣ್ಣಿಗೆ ಕೃತಕ ಬಣ್ಣ ಅಥವಾ ಇಂಜೆಕ್ಷನ್ ನೀಡಲಾಗಿದೆ ಎಂದು ಅರ್ಥ.

ಕಲ್ಲಂಗಡಿಯ ತೊಟ್ಟು ನೋಡಿ…

ಹಣ್ಣನ್ನು ಖರೀದಿಸುವಾಗ ಅದರ ಕಾಂಡ ಅಥವಾ ತೊಟ್ಟನ್ನು ಗಮನಿಸಿ. ತೊಟ್ಟು ಒಣಗಿದ್ದು, ಕಂದು (Brown) ಬಣ್ಣಕ್ಕೆ ತಿರುಗಿದ್ದರೆ, ಅದು ಬಳ್ಳಿಯಲ್ಲೇ ನೈಸರ್ಗಿಕವಾಗಿ ಹಣ್ಣಾಗಿದೆ ಎಂದರ್ಥ. ಅದೇ ತೊಟ್ಟು ಹಸಿರಾಗಿ ಮತ್ತು ತಾಜಾ ಆಗಿದ್ದರೆ, ಅದು ಹಣ್ಣಾಗುವ ಮೊದಲೇ ಕೀಳಲಾಗಿದೆ ಹಾಗೂ ಔಷಧಿ ಹಾಕಿ ಹಣ್ಣು ಮಾಡಲಾಗಿದೆ ಎಂದು ತಿಳಿಯಿರಿ.

ಹಳದಿ ಚುಕ್ಕೆ ಇದೆಯಾ ಗಮನಿಸಿ…

ಕಲ್ಲಂಗಡಿ ನೆಲದ ಮೇಲೆ ಬೆಳೆಯುವಾಗ ಯಾವ ಭಾಗಕ್ಕೆ ಬಿಸಿಲು ಬೀಳುವುದಿಲ್ಲವೋ, ಅಲ್ಲಿ ಗಾಢವಾದ ಹಳದಿ ಬಣ್ಣದ ಕಲೆ (Yellow spot) ಮೂಡುತ್ತದೆ. ಈ ಕಲೆ ಹಳದಿಯಾಗಿದ್ದರೆ ಹಣ್ಣು ಚೆನ್ನಾಗಿ ಮಾಗಿದೆ ಎಂದರ್ಥ. ಅದು ಬಿಳಿಯ ಬಣ್ಣದಲ್ಲಿದ್ದರೆ ಆ ಹಣ್ಣು ಇನ್ನೂ ಸರಿಯಾಗಿ ಮಾಗಿಲ್ಲ ಎಂದು ಹೇಳಬಹುದು.

ತಟ್ಟಿದಾಗ ಬರುವ ಶಬ್ದ..

ಹಣ್ಣನ್ನು ಕೈಯಿಂದ ಸಣ್ಣದಾಗಿ ತಟ್ಟಿ ನೋಡಿ. ಟೊಳ್ಳಾದ, ಆಳವಾದ ಶಬ್ದ (Hollow sound) ಬಂದರೆ ಹಣ್ಣು ರಸಭರಿತವಾಗಿದೆ. ಮಂದವಾದ ಶಬ್ದ ಬಂದರೆ ಅದು ಹಸಿಯಾಗಿದೆ ಎಂದರ್ಥ.

ನಮ್ಮ ಸಲಹೆ:- 
“ಕಲ್ಲಂಗಡಿ ಹಣ್ಣನ್ನು ಎಂದಿಗೂ ಮಧ್ಯಾಹ್ನದ ಸುಡುಬಿಸಿಲಿನಲ್ಲಿ ಖರೀದಿಸಬೇಡಿ. ಬಿಸಿಲಿಗೆ ಹಣ್ಣು ಒಳಗಿನಿಂದ ಕಾದಿರುತ್ತದೆ. ಇದನ್ನು ಬೆಳಗ್ಗೆ ಅಥವಾ ಸಂಜೆ ಖರೀದಿಸುವುದು ಉತ್ತಮ. ಹಾಗೆಯೇ, ರಸ್ತೆ ಬದಿಯಲ್ಲಿ ಮೊದಲೇ ಕತ್ತರಿಸಿ (Pre-cut), ತೆರೆದಿಟ್ಟಿರುವ ಹಣ್ಣುಗಳನ್ನು ತಿನ್ನಬೇಡಿ. ಇದರಿಂದ ಬೇಸಿಗೆಯಲ್ಲಿ ಕಾಲರಾ ಅಥವಾ ಫುಡ್ ಪಾಯ್ಸನ್ ಆಗುವ ಸಾಧ್ಯತೆ ಹೆಚ್ಚು. ಇಡೀ ಹಣ್ಣನ್ನು ತಂದು ಮನೆಯಲ್ಲೇ ಕತ್ತರಿಸಿ ತಿನ್ನಿ.”

Leave a Reply

error: Content is protected !!