CRIME CASE : ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ ಮಾರ್ಚ್ 10 : ಅಪ್ರಾಪ್ತ ವಯಸ್ಸಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ವಜ್ರಬಂಡಿ ಗ್ರಾಮದ ಮಂಜುನಾಥ ಚಿಕ್ಕಗೌಡ್ರ ಇತನ ಮೇಲಿನ ಆರೋಪ ಸಾಬೀತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ [ಪೋಕ್ಸೊ] ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 70,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ವಜ್ರಬಂಡಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಧಿತಳಿಗೆ ಮಂಜುನಾಥ ಚಿಕ್ಕಗೌಡ್ರ ಇತನು 3 ವರ್ಷಗಳಿಂದ ಪ್ರೀತಿಸುತ್ತಿದ್ದು, ಪ್ರೀತಿಸುವ ವಿಷಯ ಬಾಧಿತಳ ಮನೆಯಲ್ಲಿ ಗೊತ್ತಾಗಿ ಮಂಜುನಾಥನಿಗೆ ಬೈದು ಬುದ್ದಿವಾದ ಹೇಳಿದರೂ ಸಹ ದಿ: 17-03-2024ರ ರಾತ್ರಿ 9 ಗಂಟೆಗೆ ವಜ್ರಬಂಡಿ ಗ್ರಾಮದ ಗೋಡೌನ್ ಹತ್ತಿರ ಬಾಧಿತಳಿಗೆ ಕರೆಯಿಸಿಕೊಂಡು ತನ್ನ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹೊಸಪೇಟೆಗೆ ಹೋಗಿ ಅಲ್ಲಿ ಮೋಟಾರ ಸೈಕಲ್ ಬಿಟ್ಟು ಬಸ್ ಮೂಲಕ ಬೆಂಗಳೂರು ಹಾಗೂ ಮೈಸೂರು ಕಡೆಗಳಲ್ಲಿ ತಿರುಗಾಡಿ ಹೊಸಪೇಟೆಗೆ ಬಂದು ಅದೇ ಬೈಕ್‌ನಲ್ಲಿ ಕೊಪ್ಪಳಕ್ಕೆ ಬಂದು ಪಾರ್ಥ ಲಾಡ್ಜ್ನಲ್ಲಿ ತಾವು ಅಣ್ಣ ತಂಗಿ ಎಂದು ಸುಳ್ಳು ಹೇಳಿ ರೂಮ್ ಪಡೆದುಕೊಂಡು ರೂಮಿನಲ್ಲಿ ಬಾಧಿತಳು ಬೇಡವೆಂದರೂ ಬಾಧಿತಳಿಗೆ ಬಲಾತ್ಕಾರದಿಂದ ಲೈಂಗಿಕ ಅತ್ಯಾಚಾರ ಮಾಡಿರುತ್ತಾನೆ. ನಂತರದಲ್ಲಿ ಹೊಸಪೇಟೆ ದಾರಿಯಲ್ಲಿ ಕಲ್ಯಾಣಿ ಫ್ಯಾಕ್ಟರಿ ಗುಡ್ಡದ ಹತ್ತಿರ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಯಲಬುರ್ಗಾ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯಪ್ರತಾಪ ಅವರು ದೂರು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಕೊಪ್ಪಳ ಡಿಎಸ್‌ಪಿ ಮುತ್ತಣ್ಣ ಸವರಗೋಳ ಹಾಗೂ ಸಿದ್ದಲಿಂಗಪ್ಪಗೌಡ ಪಾಟೀಲ ಅವರು ಮುಂದಿನ ತನಿಖೆಯನ್ನು ನಿರ್ವಹಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಡಿಎಸ್‌ಪಿ ಕಛೇರಿಯ ಸಿಎಚ್‌ಸಿ ಶಿವಕುಮಾರ ಅವರು ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸಿರುತ್ತಾರೆ.
