You are currently viewing LOCAL NEWS : ಇಂದು ಕುಕನೂರು ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

LOCAL NEWS : ಇಂದು ಕುಕನೂರು ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

LOCAL NEWS : ಇಂದು ಕುಕನೂರು ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು.ಮಾ.14: ಕುಕನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಇಂದು (ಮಾರ್ಚ್ 15 ರಂದು) 1 ವಿದ್ಯುತ್ ಸರಬರಾಜಿನಲ್ಲಿ ವ್ಯತೆಯ ಉಂಟಾಗಲಿದೆ ಎಂದು ಆ ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿ ಪತ್ರಿಕಾ ಪ್ರಕಟಣೆಗೆ ತಿಳಿಸಿದೆ.

ಪಟ್ಟಣದಲ್ಲಿರುವ 110/33/11 ಕೆ.ವಿ ಕುಕನೂರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವದರಿಂದ, ಈ ಕೆಳಗೆ ಕಾಣಿಸಿದ ವಿದ್ಯುತ್‌ ವಿತರಣಾ ಕೇಂದ್ರಕ್ಕೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಕಾರಣ ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಪತ್ರಿಕಾ ಪಕಟಣೆಯ ಮೂಲಕ ಕೋರಲಾಗಿದೆ.

ಪಟ್ಟಣದ ವಿದ್ಯುತ್‌ ಪ್ರಸರಣ ಕೇಂದ್ರಕ್ಕೆ ಸಂಬಂಧಪಟ್ಟಂತೆ ಕುಕನೂರ, ಗುದೈಪ್ಪನ ಮಠ, ಕಕ್ಕಿಹಳ್ಳಿ, ಕೋನಾಪೂರ, ಬಳಗೇರಿ, ಯಡಿಯಾಪೂರ, ಬೆದವಟ್ಟಿ, ಗಾವರಾಳ, ರಾಜೂರು, ಆಡೂರು, ಕಲ್ಲೂರು, ದ್ಯಾಂಪೂರ, ಇಟಗಿ, ಮಂಡಲಗೇರಿ, ಬಿನ್ನಾಳ, ಯರೇಹಂಚಿನಾಳ, ಸೋಂಪೂರ, ಚಿಕೆನಕೊಪ್ಪ, ಮನ್ನಾಪೂರ, ನಿಂಗಾಪೂರ, ಸಿದ್ದೇಕೊಪ್ಪ ಗ್ರಾಮಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯಥೆಯ ಉಂಟಾಗಲಿದೆ.

ಈ ಮೂಲಕ ಸಾರ್ವಜನಿಕರಿಗೆ ಸೂಚಿಸುವದೇನೆಂದರೆ, ಸದರಿ ಮೇಲಿನ ಕಾಮಗಾರಿ ಬೇಗನೆ ಮುಕ್ತಾಯಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗವುದು, ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ದುರಸ್ಥಿ ಕೆಲಸ ಕಾರ್ಯಗಳನ್ನು ಕೈಗೊಳ್ಳಬಾರದೆಂದು ಈ ಮೂಲಕ ಕೋರಲಾಗಿದೆ.

 ಒಂದು ವೇಳೆ ವಿದ್ಯುತ್‌ ಅಪಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲಾ ಎಂದು ಪಟ್ಟಣದಲ್ಲಿರುವ ಜೆಸ್ಕಾಂ ಉಪ ವಿಭಾಗದ ಕಾರ್ಯ ಮತ್ತು ಪಾಲನ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.

Leave a Reply

error: Content is protected !!