You are currently viewing ಮುದಗಲ್ಲ :- ಶ್ರೀ ನೀಲಕಂಠೇಶ್ವರ ಜಾತ್ರಾ ಮಹೋತ್ಸವ ,ರಥೋತ್ಸವ ಏ.02 ರಂದು ..

ಮುದಗಲ್ಲ :- ಶ್ರೀ ನೀಲಕಂಠೇಶ್ವರ ಜಾತ್ರಾ ಮಹೋತ್ಸವ ,ರಥೋತ್ಸವ ಏ.02 ರಂದು ..

ಮುದಗಲ್ಲ ವರದಿ..

ಮುದಗಲ್ಲ :- ಶ್ರೀ ನೀಲಕಂಠೇಶ್ವರ ಜಾತ್ರಾ ಮಹೋತ್ಸವ ,ರಥೋತ್ಸವ ಏ.02 ರಂದು.

ಮುದಗಲ್ : ಇದೇ ದಿನಾಂಕ 02-04-2026 ರಂದು ಗುರುವಾರ ಪೇಟೆಯ ಶ್ರೀ ನೀಲಕಂಠೇಶ್ವರ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಜರುಗುತ್ತವೆ ಎಂದು ದೇವಸ್ಥಾನ ಕಮಿಟಿಯ ಗೌರವ ಅಧ್ಯಕ್ಷರಾದ ಡಾ. ವೀರಭದ್ರಪ್ಪ ಕೊಳ್ಳಿ ಅವರು ಸುದ್ದಿ ಗೋಷ್ಠಿಯಲ್ಲಿ ಮಂಗಳವಾರ ತಿಳಿದರು.

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿನಾಂಕ.02-04-2026 ರಂದು ಬ್ರಹ್ಮೀ ಮುಹೂರ್ತ ದಲ್ಲಿ 4-30 ನಿ. ಕ್ಕೆ ಶ್ರೀ ನೀಲಕಂಠೇಶ್ವರ ದೇವರ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆ ಸೇರಿದಂತೆ ಲಕ್ಷ ಬಿಲ್ವಾರ್ಚನೆ ಮಾಡಲಾಗುತ್ತದೆ.

ಶ್ರೀ 1008 ಜಗದ್ಗುರು ನಾಲ್ವಡಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಕುರುಹಿರಿನ ಶೆಟ್ಟಿ ಪೀಠಾಧೀಶ್ವರ ನೀಲಕಂಠ ಮಠ ಗದಗ-ಬೆಟಗೇರಿ ಇವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಮಹಿಳೆಯರು ಹೊತ್ತ ಕುಂಭ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳ ಮೂಲಕ ಶ್ರೀ ನೀಲಕಂಠೇಶ್ವರ ದೇವಸ್ಥಾನ ತಲುಪುವುದು.

ಮಧ್ಯಾಹ್ನ ಭಕ್ತರಿಗಾಗಿ ಮಹಾ ಪ್ರಸಾದ ವ್ಯವಸ್ಥೆ ಭಕ್ತಿ ಸೇವೆ ಶ್ರೀ ಮತಿ ಸುಮಂಗಲಾ ಶ್ರೀ ವಿರುಪಾಕ್ಷಪ್ಪ ಆದಪ್ಪ ಜೀಡಿ ಇವರ ಕುಟುಂಬದವರಿಂದ ನಡೆಯುತ್ತದೆ .

ಸಾಯಂಕಾಲ 5:30ಕ್ಕೆ ರಥೋತ್ಸವ ಜರುಗುತ್ತದೆ ಮತ್ತು ದಿನಾಂಕ 04-04-2026 ರಂದು ಶನಿವಾರ ಸಾಯಂಕಾಲ 06-00 ಹುಚ್ಚಯ್ಯ ಎಳೆಯಲಾಗುವದು ಸರ್ವ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ!! ವೀರಭದ್ರಪ್ಪ ಕೊಳ್ಳಿ , ಶಂಕ್ರಪ್ಪ ಜೀಡಿ ,ಈರಣ್ಣಗೌಡ ,ರಾಚಪ್ಪ ಗೊಬ್ಬರು,ಆನಂದ ಜೀಡಿ ,ಜೀವಂತ ರವಿ ಜೀಡಿ,ಕಲ್ಲಿನಾಥ ಅಕ್ಕನವರು, ಮಂಜುನಾಥ ಕೊಳ್ಳಿ ,ಅಮರೇಶ ಜೀಡಿ, ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!