You are currently viewing LOCAL EXPRESS : ದ್ಯಾಂಪೂರು, ಚಿಕ್ಕಬಿಡ್ನಾಳ ಹಾಗೂ ಕದ್ರೊಳ್ಳಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ದ ಮಹಿಳೆಯರ ದಿಢೀರ ಪ್ರತಿಭಟನೆ!! 

LOCAL EXPRESS : ದ್ಯಾಂಪೂರು, ಚಿಕ್ಕಬಿಡ್ನಾಳ ಹಾಗೂ ಕದ್ರೊಳ್ಳಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ದ ಮಹಿಳೆಯರ ದಿಢೀರ ಪ್ರತಿಭಟನೆ!! 

LOCAL EXPRESS : ದ್ಯಾಂಪೂರು, ಚಿಕ್ಕಬಿಡ್ನಾಳ ಹಾಗೂ ಕದ್ರೊಳ್ಳಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ದ ಮಹಿಳೆಯರ ದಿಢೀರ ಪ್ರತಿಭಟನೆ!! 

ಪ್ರಜಾವೀಕ್ಷಣೆ ಡಿಜಿಟಲ್ ಮೀಡಿಯಾ ಸುದ್ದಿ :- 

ಕುಕನೂರು ಎ. 01 : ತಾಲ್ಲೂಕಿನ ದ್ಯಾಂಪೂರು, ಚಿಕ್ಕಬಿಡ್ನಾಳ ಮತ್ತು ಕದ್ರೊಳ್ಳಿ ಗ್ರಾಮಗಳ ನೂರಾರು ಮಹಿಳೆಯರು ಬುಧುವಾರ ಕುಕನೂರು ಪೊಲೀಸ್ ಠಾಣೆ ಎದುರು ದಿಢೀರ ಪ್ರತಿಭಟನೆ ನಡೆಸಿ, ಅಕ್ರಮ ಮದ್ಯ ಮಾರಾಟ ಮತ್ತು ಕುಡಿತದ ಹಾವಳಿ ತಕ್ಷಣ ನಿಲ್ಲಿಸಲು ಒತ್ತಾಯಿಸಿದರು.

ಈ ವೇಳೆ ವಿವಿಧ ಗ್ರಾಮಗಳ ಮಹಿಳೆಯರು ಮಾತನಾಡಿ, ದ್ಯಾoಪೂರು ಗ್ರಾಮದಲ್ಲಿ ನಾಲ್ಕುರಿಂದ ಆರು ಸ್ಥಳಗಳಲ್ಲಿ, ಚಿಕ್ಕಬಿಡ್ನಾಳದಲ್ಲಿ ಮೂರು ಕಡೆ ಮತ್ತು ಕದ್ರೊಳ್ಳಿಯಲ್ಲಿ ಎರಡು ಸ್ಥಳಗಳಲ್ಲಿ ಅಕ್ರಮ ಮದ್ಯ ಮತ್ತು ಸಾರಾಯಿ ಮಾರಾಟ ನಡೆಯುತ್ತಿದೆ. ಇಂಥ ಸಣ್ಣ ಹಳ್ಳಿಗಳಲ್ಲಿ ಬೆಳಿಗ್ಗೆ 5 ಗಂಟೆ ಯಿಂದಲೇ ಮಧ್ಯರಾತ್ರಿ ವರೆಗೆ ಮದ್ಯ ಲಭ್ಯವಿದ್ದು, ಕುಟುಂಬದ ಪುರುಷರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಂಗಡಿಗಳ ಅಕ್ರಮ ಮಾರಾಟ ಹಳ್ಳಿಗಳಲ್ಲಿ ಅಶಾಂತಿ ಉಂಟುಮಾಡಿ, ಸಂಸಾರಗಳನ್ನು ಹಾಳುಮಾಡುತ್ತಿದೆ. ಹೋಬಳಿಯಲ್ಲಿರುವ ಮದ್ಯ ಮಾರಾಟ ಮಳಿಗೆಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿಸುತ್ತಿವೆ ಎಂದು ಆರೋಪಿಸಿದರು.

ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆ ಒಂದೆಡೆ, ಆದರೆ ಮತ್ತೊಂದೆಡೆ ಅದಕ್ಕಿಂತಲೂ ಹೆಚ್ಚಾಗಿ ಮನೆಗಳಲ್ಲಿ, ಪಾನ್ ಶಾಪ್, ಕಿರಾಣಿ ಅಂಗಡಿ, ಕೂಲ್ ಡ್ರಿಂಕ್ಸ್ ಮಳಿಗೆ ಹಾಗೂ ಗೂಡಂಗಡಿಗಳಲ್ಲಿ ಯಾವುದೇ ಭಯವಿಲ್ಲದೇ ಮದ್ಯ ಮಾರಾಟ ನಡೆಯುತ್ತಿದೆ. ಈ ಅಕ್ರಮ ವ್ಯಾಪಾರದಿಂದ ಹಳ್ಳಿಗಳಲ್ಲಿ ಅಶಾಂತಿ ಮತ್ತು ಕುಟುಂಬ ಸಂಕಷ್ಟಗಳು ಹೆಚ್ಚಾಗುತ್ತಿವೆ ಎಂದು ಅವರು ತಮ್ಮ ಅಳಲು ತೋಡಿಕೊಂಡರು.

ಇಂದೇ ಈ ಠಾಣೆಗೆ ಬಂದು ನೂತನವಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಿ ಎಸ್ ಐ ಎಸ್.ಪಿ. ನಾಯ್ಕ್ಅವರು ಮಹಿಳೆಯರ ಮನವಿಗೆ ಸ್ಪಂದಿಸಿ “ನಾನು ಮತ್ತು ಅಬಕಾರಿ ಇಲಾಖೆ ಸೇರಿ ನೀವು ಸೂಚಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಆರೋಪಿತ ಅಕ್ರಮ ಮಾರಾಟಗಾರರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದ್ಯಾಂಪುರ, ಚಿಕ್ಕಬಿಡ್ನಳ, ಹೊನ್ನುಣಸಿ ಕ್ರಾಸ್ ಮತ್ತು ಕದ್ರೊಳ್ಳಿ ಗ್ರಾಮಗಳ ಮಹಿಳೆರಾದ ಚೆನ್ನಮ್ಮ, ಮಲ್ಲಮ್ಮ, ಜ್ಯೋತೆವ್ವ, ಹನುಮವ್ವ, ಜಯಮ್ಮ, ಹುಲಿಗೆಮ್ಮ, ಗವಿಸಿದ್ದಮ್ಮ, ಸುಬ್ಬಮ್ಮ, ನಿಂಗಮ್ಮ, ರೇಖಾ, ವಿಜಯಲಕ್ಷ್ಮಿ, ಪಕೀರಮ್ಮ, ವಿದ್ಯಾಸಿರಿ, ನಿರ್ಮಲ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.

 “ನಾನು ಇಂದೇ ಅಧಿಕಾರ ಸ್ವೀಕರಿಸಿದ್ದೇನೆ, ಅನಧಿಕೃತ ಮಧ್ಯ ಮಾರಾಟ, ಇಸ್ಪೀಟ್, ಆನ್ಲೈನ್ ಜೂಜಾಟ ಇವನ್ನೆಲ್ಲವನ್ನ ಕಡಿವಾಣ ಹಾಕುತ್ತೇನೆ. ಸಾರ್ವಜನಿಕರ ಎಲ್ಲರ ಸಹಕಾರ ಬೇಕಾಗಿದೆ.  24×7 ಅನಧಿಕೃತ ಚಟುವಟಿಕೆಗಳ ಮೇಲೆ ನಿಗಾ ಇರಲಿದೆ”

  ಎಸ್ ಪಿ ನಾಯ್ಕ್, ಠಾಣಾಧಿಕಾರಿ, ಕುಕನೂರು ಪೊಲೀಸ್ ಠಾಣೆ.  

Leave a Reply

error: Content is protected !!