Post Views: 100
LOCAL NEWS : ಕುಕನೂರು ಪೊಲೀಸ್ ಠಾಣೆಗೆ ನೂತನ ಪಿಎಸ್‌ಐ ಆಗಿ ಎಸ್.ಪಿ.ನಾಯ್ಕ್ ಅಧಿಕಾರ ಸ್ವೀಕಾರ!

ಪ್ರಜಾವೀಕ್ಷಣೆ ಡಿಜಿಟಲ್ ಮಾಧ್ಯಮ ಸುದ್ದಿ :
ಕುಕನೂರು ಎ. 01 : ಪಟ್ಟಣದ ಕುಕನೂರು ಪೊಲೀಸ್ ಠಾಣೆಗೆ ಬುಧವಾರ ನೂತನ ಪಿಎಸ್‌ಐ ಆಗಿ ಎಸ್.ಪಿ.ನಾಯಕ ಅವರು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಅವರು ಬೇವೂರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕುಕನೂರು ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ತಮ್ಮಮೊದಲ ಆದ್ಯತೆಯಾಗಿದ್ದು ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿ ಹೇಳಿದರು.
“ಜನಸಾಮಾನ್ಯರು ಯಾವುದೇ ಸಮಸ್ಯೆಗಳಿದ್ದರೂ, ನಿರ್ಭಯವಾಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ ಅವರು, ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ನೂತನ ಪಿಎಸ್‌ಐ ಅವರನ್ನು ಸ್ವಾಗತಿಸಿದರು.