ಮುದಗಲ್ಲ ವರದಿ..
ಮುದಗಲ್ಲ :- ಬೈಕುಗಳ ಕಕ೯ಶ ಶಬ್ಧ :- ಜನರಿಗೆ ಕಿರಿಕಿರಿ..

ಮುದಗಲ್ಲ : ಕರ್ಕಶವಾಗಿ ಶಬ್ದ ಮಾಡುವ ಬೈಕುಗಳನ್ನು ಓಡಾಡಿಸಿ ಜನರಿಗೆ ತೊಂದರೆ ಕೊಡುವ ಯುವಕರ ಸಂಖ್ಯೆಪಟ್ಟಣದಲ್ಲಿ ದಿನದಿಂದ ದಿನಕ್ಕೆಹೆಚ್ಚುತ್ತಿದೆ. ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್ ಬದಲಾವಣೆ ಅಥವಾ ಮಾರ್ಪಾಡು ಮಾಡಿ ಕೊಳ್ಳುವ ಯುವಕರು ಕರ್ಕಶ ಶಬ್ದ ಮಾಡುತ್ತ ಬೈಕ್ ಓಡಿಸುತ್ತಿದ್ದಾರೆ.ಇದು ಇತರ ವಾಹನ ಚಾಲಕರಿಗೆ ಮಾತ್ರವಲ್ಲ; ರಸ್ತೆ ಇಕ್ಕೆಲಗಳ ನಿವಾಸಿಗಳಿಗೂ ಸಾಕಷ್ಟು ಕಿರಿಕಿರಿ ಮಾಡುತ್ತಿದೆ.
ಪಟ್ಟಣದ ರಸ್ತೆಗಳಲ್ಲೇ ಅತಿ ವೇಗವಾಗಿ ಬೈಕ್ ಓಡಿ ಸುತ್ತಿದ್ದಾರೆ. ಇದರಿಂದ ಅಪಾಯಗಳೂ ಸಂಭವಿಸುವುದು ಸಾಮಾನ್ಯ ವಾಗಿದೆ.ಅತಿ ಹೆಚ್ಚು ‘ಹಾರ್ಸ್‌ಪವರ್” ವಾಹನ ಸಾಗುತ್ತಿದೆ ಎಂಬುದು ಕಿಲೋಮೀಟರ್ ದೂರದಿಂದಲೇ ಕಿವಿಗೆ ಬೀಳುತ್ತದೆ. ಇದರಿಂದ ಚಿಕ್ಕ ಮಕ್ಕಳು, ಹಿರಿಯರು ಆತಂಕದಲ್ಲಿ ರಸ್ತೆಗೆ ಇಳಿಯು ವಂತಾಗಿದೆ. ಕರ್ಕಶ ಶಬ್ದ ಮಾಡುವ ಹಾಗೂ ಮಾರ್ಪಾಡು ಮಾಡಲಾದ ಸೈಲೆನ್ಸರ್‌ಗಳನ್ನು ಕಿತ್ತು ರೂಲರ್ ಓಡಿಸಿ ನಾಶಪಡಿಸಬೇಕು ಎಂಬ ನಿಯಮವಿದೆ. ಯುವಜನರ ಈ ಮೊಂಡುತನ ಇದೂವರೆಗೆ ಸ್ಥಳೀಯ ಪೊಲೀಸರ ಕಿವಿಗೆ ಬಿದ್ದಿಲ್ಲ. ಕೇಳಿಸಿದರೂ ಕೇಳದಂತೆ ಸುಮ್ಮನಾಗಿದ್ದಾರೆ ಎಂಬುದು ಜನರ ದೂರು
ವರದಿ:- ಮಂಜುನಾಥ ಕುಂಬಾರ