You are currently viewing FLASH NEWS : ಕುಕನೂರು-ಯಲಬುರ್ಗಾ ಅಭಿವೃದ್ಧಿಗೆ ಭರ್ಜರಿ ಬೂಸ್ಟ್: ₹486 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಶೀಘ್ರ ಚಾಲನೆ!

FLASH NEWS : ಕುಕನೂರು-ಯಲಬುರ್ಗಾ ಅಭಿವೃದ್ಧಿಗೆ ಭರ್ಜರಿ ಬೂಸ್ಟ್: ₹486 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಶೀಘ್ರ ಚಾಲನೆ!

FLASH NEWS : ಕುಕನೂರು-ಯಲಬುರ್ಗಾ ಅಭಿವೃದ್ಧಿಗೆ ಭರ್ಜರಿ ಬೂಸ್ಟ್: ₹486 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಶೀಘ್ರ ಚಾಲನೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು, ಮೇ 07 : ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ, ರಾಜ್ಯ ಸರ್ಕಾರವು ಕುಕನೂರು ಮತ್ತು ಯಲಬುರ್ಗಾ ತಾಲೂಕುಗಳಿಗೆ ಕೋಟ್ಯಂತರ ರೂಪಾಯಿಗಳ ಬೃಹತ್ ಕೊಡುಗೆಯನ್ನು ಘೋಷಿಸಿದೆ. ಸರಿಸುಮಾರು 486.10 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜೂನ್ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಲಿದೆ.

ಮಂಜೂರಾದ ಪ್ರಮುಖ ಕಾಮಗಾರಿಗಳ ವಿವರ:- 

ಕ್ಷೇತ್ರದ ಆಡಳಿತ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಒತ್ತು ನೀಡಿ ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

> ​ಆಡಳಿತ ಮತ್ತು ನ್ಯಾಯಾಂಗ: ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತ್ ಕಚೇರಿ ಕಟ್ಟಡಕ್ಕೆ 18.60 ಕೋಟಿ ರೂ. ಹಾಗೂ ನೂತನ ತಾಲೂಕು ನ್ಯಾಯಾಲಯದ ಕಟ್ಟಡಕ್ಕೆ 9 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

> ​ಸಾಮಾಜಿಕ ಮತ್ತು ಸಾಂಸ್ಕೃತಿಕ: ಸಮಾಜ ಸುಧಾರಕರ ಸ್ಮರಣಾರ್ಥ ‘ಬುದ್ಧ-ಬಸವ-ಅಂಬೇಡ್ಕರ್ ಭವನ’ ನಿರ್ಮಾಣಕ್ಕೆ 15 ಕೋಟಿ ರೂ. ಮೀಸಲಿಡಲಾಗಿದೆ.

> ​ಆರೋಗ್ಯ ಮತ್ತು ಕ್ರೀಡೆ: ಸಾರ್ವಜನಿಕರ ಆರೋಗ್ಯ ಕಾಪಾಡಲು 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ 43 ಕೋಟಿ ರೂ. ಹಾಗೂ ಕ್ರೀಡಾಪಟುಗಳ ಉತ್ತೇಜನಕ್ಕಾಗಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ 8.50 ಕೋಟಿ ರೂ. ವೆಚ್ಚ ಮಾಡಲಾಗುವುದು.

> ​ನೀರಾವರಿ ಮತ್ತು ಕುಡಿಯುವ ನೀರು: ಈ ಬಾರಿಯ ಬಜೆಟ್‌ನಲ್ಲಿ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 31 ಕೆರೆಗಳಿಗೆ ಕೃಷ್ಣಾ ನದಿ ನೀರು ತುಂಬಿಸುವ ಯೋಜನೆಗೆ 272 ಕೋಟಿ ರೂ. ಮತ್ತು 23 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ 120 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ಜೂನ್‌ನಲ್ಲಿ ಚಾಲನೆ! 

ಈ ಎಲ್ಲಾ ಬೃಹತ್ ಯೋಜನೆಗಳಿಗೆ ಜೂನ್ ತಿಂಗಳಲ್ಲಿ ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಮೂಲಕ ಕಾಮಗಾರಿಗಳಿಗೆ ವೇಗ ನೀಡಲಾಗುವುದು. “ಸಮಗ್ರ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ… ಸಮೃದ್ಧ ಭವಿಷ್ಯದತ್ತ ನಮ್ಮ ಗುರಿ” ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇನೆ “

ಶಾಸಕ ಬಸವರಾಜ ರಾಯರೆಡ್ಡಿ.

 

 

 

 

Leave a Reply

error: Content is protected !!