You are currently viewing LOCAL NEWS : ಕಕ್ಕಿಹಳ್ಳಿ ಸರ್ಕಾರಿ ಶಾಲೆಗೆ ನೂತನ ಮುಖ್ಯ ಶಿಕ್ಷಕರ ಪದಗ್ರಹಣ : ಶಿಕ್ಷಕ ಯಂಕಣ್ಣ ಅರಕಲ್ ಅವರಿಗೆ ಅದ್ದೂರಿ ಸ್ವಾಗತ!

LOCAL NEWS : ಕಕ್ಕಿಹಳ್ಳಿ ಸರ್ಕಾರಿ ಶಾಲೆಗೆ ನೂತನ ಮುಖ್ಯ ಶಿಕ್ಷಕರ ಪದಗ್ರಹಣ : ಶಿಕ್ಷಕ ಯಂಕಣ್ಣ ಅರಕಲ್ ಅವರಿಗೆ ಅದ್ದೂರಿ ಸ್ವಾಗತ!

LOCAL NEWS : ಕಕ್ಕಿಹಳ್ಳಿ ಸರ್ಕಾರಿ ಶಾಲೆಗೆ ನೂತನ ಮುಖ್ಯ ಶಿಕ್ಷಕರ ಪದಗ್ರಹಣ : ಶಿಕ್ಷಕ ಯಂಕಣ್ಣ ಅರಕಲ್ ಅವರಿಗೆ ಅದ್ದೂರಿ ಸ್ವಾಗತ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು, ​ಮೇ 09 : ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮುಖ್ಯ ಶಿಕ್ಷಕರಾದ ಪ್ರಭುಲಿಂಗ್ ಗುರಿಕಾರ ಅವರ ಸ್ಥಾನಕ್ಕೆ, ನೂತನ ಮುಖ್ಯ ಶಿಕ್ಷಕರಾಗಿ ಯಂಕಣ್ಣ ಅರಕಲ್ ಅವರು ಅಧಿಕಾರ ಸ್ವೀಕರಿಸಿದರು. ಮಾರ್ಚ್ 13ರಂದು ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಲಾಯಿತು.

​ಕಳೆದ ಹಲವು ವರ್ಷಗಳಿಂದ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದ ಪ್ರಭುಲಿಂಗ್ ಗುರಿಕಾರ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ಮಾರ್ಚ್ 13ರಂದು ಶಾಲೆಯಿಂದ ಬಿಡುಗಡೆ ಹೊಂದಿದರು. ಅವರ ಸ್ಥಾನಕ್ಕೆ ನೂತನವಾಗಿ ಆಗಮಿಸಿದ ಯಂಕಣ್ಣ ಅರಕಲ್ ಅವರಿಗೆ ಅಧಿಕಾರ ಹಸ್ತಾಂತರಿಸಿ, ಮುಂದಿನ ಅವಧಿಗೆ ಶುಭ ಹಾರೈಸಿದರು.

ಆತ್ಮೀಯ ಸನ್ಮಾನ ಮತ್ತು ಸ್ವಾಗತ: 

​ನೂತನ ಮುಖ್ಯ ಶಿಕ್ಷಕರನ್ನು ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೂಗುಚ್ಛ ನೀಡಿ ಬರಮಾಡಿಕೊಂಡರು.

​ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಮುಖ್ಯ ಶಿಕ್ಷಕ ಯಂಕಣ್ಣ ಅರಕಲ್ ಅವರು, “ಗ್ರಾಮಸ್ಥರ ಮತ್ತು ಸಹೋದ್ಯೋಗಿಗಳ ಸಹಕಾರದೊಂದಿಗೆ ಶಾಲೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷ ಯಮನೂರ ಭಾನಾಪುರ್, ಗ್ರಾಮದ ಮುಖಂಡರಾದ ಮೇಘರಾಜ್ ಬಳಿಗೇರಿ, ಸುರೇಶ್ ಬಳೂಟಗಿ, ಯಮನೂರ ಕಟ್ಟಿಮನಿ, ಪ್ರಕಾಶ್ ಬಳಿಗೇರಿ, ಶಿಕ್ಷಕರಾದ ಯಮನೂರಪ್ಪ ಬಜೇಂತ್ರಿ, ಅಶೋಕ್ ಮಾಡಿನೂರು, ಅವಧುತ್, ಪೀರ್ ಸಾಬ್ ದಫೇದಾರ್, ರಾಜೇಂದ್ರ ಕೆ, ಯೋಗಪ್ಪ ಪೂಜಾರಿ, ಹನುಮಂತಪ್ಪ ಒಂದಲ್, ಶೋಭಾ ವಕ್ರದ್, ಸಂಗೀತ ಸೂಡಿ, ಶಂಭುಲಿಂಗಪ್ಪ ಅರಿಸಿನದ್, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಪದಾಧಿಕಾರಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

error: Content is protected !!