You are currently viewing ವ್ಯಾಕರನಾಳ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣ..

ವ್ಯಾಕರನಾಳ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣ..

ಮುದಗಲ್ಲ ವರದಿ.

ಮುದಗಲ್ಲ :-ಪಟ್ಟಣ ಸಮೀಪದ ವ್ಯಾಕರನಾಳ ಗ್ರಾಮದಲ್ಲಿ ಕನಾ೯ಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ನಿಮಿತ್ತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣ..

ಮುದಗಲ್ಲ :- ಪಟ್ಟಣ ಸಮೀಪದ ವ್ಯಾಕರನಾಳ ಗ್ರಾಮದಲ್ಲಿ ಕನಾ೯ಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತ್ಯುತ್ಸವ ನಿಮಿತ್ತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಯನ್ನು
ಸೋಮನಗೌಡ ಪಾಟೀಲ್ ಗುರುವಾರ ಗ್ರಾಮದ ಮುಖಂಡ ಅನಾವರಣ ಗೊಳಿಸಿದರು. ಪುಷ್ಪನಮನ ಸಲ್ಲಿಸಿದರು.

ಸ್ವಾಭಿಮಾನ ಸಮಾರಂಭ ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಎಚ್‌.ಬಿ.ಮುರಾರಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಹಲವಾರು ರೀತಿಯ ಶೋಷಣೆ, ದೌರ್ಜನ್ಯ, ದಬ್ಬಾಳಿಕೆ ಗಳನ್ನು ಅನುಭವಿಸಿ ದವರು. ಶೋಷಣೆಗೆ ಒಳಗಾಗಿರುವ ದಲಿತರು,ಹಿಂದುಳಿದ ವರ್ಗ, ಹಾಗೂ ಅಲ್ಪಸಂಖ್ಯಾಂತರ ಉದ್ಧಾರಕ್ಕಾಗಿ ಮತ್ತು ದಲಿತರಿಗೆ ಶಿಕ್ಷಣವನ್ನು ಒದಗಿಸಲು ಸಾಕಷ್ಟು ಶ್ರಮಿಸಿ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಇಂತಹ ಮಹಾತ್ಮರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಯನ್ನು ಅನಾವರಣ ಮಾಡಿದರೆ ಸಾಲದು ಬದಲಿಗೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಸಮಾಜದಲ್ಲಿ ಉನ್ನತ ವ್ಯಕ್ತಿಗಳನ್ನಾಗಿ ರೂಪಿಸಿದ್ದೇ ಆದಲ್ಲಿ ಮಹಾತ್ಮರ ಹೋರಾಟ ಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ದಲಿತ ಸಂಘರ್ಷ ಸಮಿತಿಯ ಲಿಂಗಸೂರ ತಾಲೂಕು ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಅಂಬೇಡ್ಕರ ಮೂತಿ೯ ಅನಾವರಣ ಸಮಾರಂಭ ದಲ್ಲಿ ಅವರು ಮಾತನಾಡಿದರು.
‘ಇಂದಿನ ಯುವಕರು ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಆದರ್ಶ ಪಾಲನೆ ಮಾಡಿದರೆ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯ ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಶಿಕ್ಷಣಕ್ಕೆ ಒತ್ತು ನೀಡಿ ಸಂಘಟನೆ ಮಾಡಿದಾಗ ಮಾತ್ರ ದಲಿತ ಸಮಾಜ ಉದ್ಧಾರ ವಾಗುತ್ತದೆ ಎಂಬ ಸಂದೇಶವನ್ನು ಸಹ ಸಾರಿದ್ದಾರೆ’ ಎಂದರು ಮಾತನಾಡಿದರು.

ನಂತರ ಪಕೀರೇಶ್ವರ ಶ್ರೀಗಳು ಆಶೀರ್ವಚನ ನೀಡಿದರು ಸಂವಿದಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಎಂಬುದು
ಕೇವಲ ಹೆಸರಲ್ಲ ಅದೊಂದು ಅಗಾಧವಾದ ಶಕ್ತಿ ಎಂದರು.
ವಿಶ್ವದ ಅತಿ ದೊಡ್ಡ ಸಂವಿಧಾನ ರಚಿಸುವ ಮೂಲಕ ಭಾರತೀಯರ ಬದುಕು ರೂಪಿಸಿದ ಮಹಾನ್ ನಾಯಕ ಅವರಾಗಿದ್ದಾರೆ. ಅಂಬೇಡ್ಕರ್ ರ ಸತತ ಪರಿಶ್ರಮದ ಫಲವಾಗಿ ಸಂವಿಧಾನ ರೂಪು ಗೊಂಡಿದೆ. ದೀನ ದಲಿತರಿಗೆ ಬೆಳಕು ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಹೀಗಾಗಿ ಅವರು ದೇಶದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದು ಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಅಧ್ಯಕ್ಷರಾದ ಬಸವರಾಜ ಬಂಕದಮನೆ ಅವರು ಮಾತನಾಡಿ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂಬುದು ಕೇವಲ ಹೆಸರಲ್ಲ ಅದೊಂದು ಅಗಾಧವಾದ ಶಕ್ತಿ ಎಂದರು.
ವಿಶ್ವದ ಅತಿ ದೊಡ್ಡ ಸಂವಿಧಾನ ರಚಿಸುವ ಮೂಲಕ ಭಾರತೀಯರ ಬದುಕು ರೂಪಿಸಿದ ಮಹಾನ್ ನಾಯಕ ಅವರಾಗಿದ್ದಾರೆ. ಅಂಬೇಡ್ಕರ್ ರ ಸತತ ಪರಿಶ್ರಮದ ಫಲವಾಗಿ ಸಂವಿಧಾನ ರೂಪುಗೊಂಡಿದೆ. ದೀನ ದಲಿತರಿಗೆ ಬೆಳಕು ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಹೀಗಾಗಿ ಅವರು ದೇಶದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಸಿದ್ರಾಮೇಶ್ವರ
ಆದಾಪುರ, ಹನುಮಂತಪ್ಪ ವೆಂಕಟಾಪುರ,ಸಂಗಮೇಶ ಕನ್ನಾಳ, ರಮೇಶ ಆದಾಪುರ,ಭೀಮನಗೌಡ, ಗ್ಯಾನನಗೌಡ ನಾಗಲಾಪುರ, ದಲಿತ ಸಂಘರ್ಷ ಸಮಿತಿ ಲಿಂಗಸೂರ ತಾಲೂಕುಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ, ವೀರೇಶ
ವ್ಯಾಕರನಾಳ, ಬಸವರಾಜ ಬಂಕದಮನಿ,ಸಂಗಣ್ಣ ಹಿರೇಮನಿ, ಮಲ್ಲಣ್ಣ ಕನ್ನಾಪುರಹಟ್ಟಿ ಶರಣಪ್ಪನಾಗಲಾಪುರ, ಲಕ್ಕಪ್ಪ ತುಂಬಲಗಡ್ಡಿ, ಕರಿಯಪ್ಪ ವ್ಯಾಕರನಾಳ ಇತರರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!