You are currently viewing LOCAL NEWS : ಕೊಪ್ಪಳ | ಸಿನಿಮಾ ಪ್ರೀಯರಿಗೆ ಶುಭ ಸುದ್ದಿ, ನಾಳೆ ಉಚಿತ ಸಿನಿಮಾ ಪ್ರದರ್ಶನ!

LOCAL NEWS : ಕೊಪ್ಪಳ | ಸಿನಿಮಾ ಪ್ರೀಯರಿಗೆ ಶುಭ ಸುದ್ದಿ, ನಾಳೆ ಉಚಿತ ಸಿನಿಮಾ ಪ್ರದರ್ಶನ!

LOCAL NEWS : ಕೊಪ್ಪಳ | ಸಿನಿಮಾ ಪ್ರೀಯರಿಗೆ ಶುಭ ಸುದ್ದಿ, ನಾಳೆ ಉಚಿತ ಸಿನಿಮಾ ಪ್ರದರ್ಶನ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕೊಪ್ಪಳ, ಮೇ 16 : ನಗರದ ಮಾರ್ಗದರ್ಶಿ ಸ್ಟಡಿ ಸರ್ಕಲ್ ವತಿಯಿಂದ ಇದೇ ಮೇ 17ರ ಭಾನುವಾರ (ನಾಳೆ) ಸಂಜೆ ಪೌರಾಣಿಕ ಹಾಗೂ ಕಲಾತ್ಮಕ ಚಿತ್ರಗಳ ಸರಣಿಯ ಅಂಗವಾಗಿ 2ನೇ ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

​ಸಿನಿಮಾ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹದೊಂದಿಗೆ ಆಯೋಜಿಸಲಾಗುತ್ತಿರುವ ಈ ಪ್ರದರ್ಶನದಲ್ಲಿ, ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಹಾಗೂ ಹಿರಿಯ ನಟಿ ಉಮಾಶ್ರೀ ಅವರ ಅದ್ಭುತ ನಟನೆಯ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಗುಲಾಬಿ ಟಾಕೀಸ್’ ಅನ್ನು ಉಚಿತವಾಗಿ ಪ್ರದರ್ಶಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಕರಾವಳಿ ಭಾಗದ ಜನರ ಜೀವನ ಮತ್ತು ಅಲ್ಲಿನ ಸಾಮಾಜಿಕ ಮೌಲ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ಅತ್ಯುತ್ತಮ ಚಿತ್ರ ಇದಾಗಿದೆ. ಸಂಜೆ 5:30 ಕ್ಕೆ, ನಗರದ ಕಿನ್ನಾಳ ರೋಡ್ ಮಾರ್ಗದರ್ಶಿ ಸ್ಟಡಿ ಸರ್ಕಲ್ ನಲ್ಲಿ ಆಯೋಜಿಸಲಾಗಿದೆ.

ಸಿನಿಮಾ ಪ್ರೇಮಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!