ಪ್ರಜಾ ವೀಕ್ಷಣೆ ಸುದ್ದಿ :
BIG NEWS : ಪತ್ರಕರ್ತರಿಗೂ ಒಂದು ರಕ್ಷಣಾ ವೇದಿಕೆ ಅವಶ್ಯಕ : ಬಂಗ್ಲೆ ಮಲ್ಲಿಕಾರ್ಜುನ್

ಸಿಂಧನೂರು : ರಾಜ್ಯದಲ್ಲಿ ಎಲ್ಲಾ ರಂಗದವರಿಗೆ ರಕ್ಷಣಾ ವೇದಿಕೆ ಇದೆ. ಪತ್ರಕರ್ತರ ಹಿತದೃಷ್ಠಿ ಹಿನ್ನಲೆಯಲ್ಲಿ ಪತ್ರಕರ್ತರ ರಕ್ಷಣಾ ವೇದಿಕೆ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಇಂದು ನಗರದ ಮಿಲಾಪ್ ಶಾಧಿ ಮಹಲ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು ತಾಲೂಕು ಸಮಿತಿ ಸಿಂಧನೂರು ವತಿಯಿಂದ ಹಮ್ಮಿಕೊಂಡ ‘ರಾಜ್ಯ ಮಟ್ಟದ ಪತ್ರಿಕಾ ಕಾರ್ಯಗಾರ ಹಾಗೂ ಪದಗ್ರಹಣ’ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಬಂಗ್ಲೆ ಮಲ್ಲಿಕಾರ್ಜುನ, ಈ ರಾಜ್ಯದಲ್ಲಿ ಪತ್ರಿಕಾ ರಂಗಕ್ಕೆ ಯಾವುದೇ ರಕ್ಷಣಾ ವೇದಿಕೆ ಇಲ್ಲದಿರುವುದು ಸೋಚನಿಯವಾಗಿದೆ. ಹಾಗಾಗಿ ಪತ್ರಕರ್ತರಿಗೆ ಈ ಸಮಾಜದಲ್ಲಿ ರಕ್ಷಣೆ ಬೇಕಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಸರ್ಕಾರವೂ ನಮ್ಮ ಪತ್ರಕರ್ತರ ಆಶೋತ್ತರಗಳನ್ನು ಈಡೇರಿಸಿದ್ದಿದಲ್ಲಿ ಬಹುದೊಡ್ಡ ಕಾನೂನು ಹೋರಾಟಕ್ಕೆ ನಮ್ಮ ಕಾನಿಪ ಧ್ವನಿ ನಾಂದಿ ಹಾಡಲಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಎಂ ಶಿವಮೂರ್ತಿ, ‘ಪತ್ರಕರ್ತನಿಗೆ ಮೊದಲು ಸಮಯ ಪ್ರಜ್ಞೆ, ಶೀಸ್ತು, ಸಂಯಮ, ತಾಳ್ಮೆಯಿಂದ ಆಲಿಸುವ ವ್ಯಕ್ತಿತ್ವ ಇರಬೇಕು, ಪತ್ರಕರ್ತನಿಗೆ ಕೆಲವೇ ರಾಜಕೀಯ ಸುದ್ದಿ ಮಾಡಬಾರದು, ನಮ್ಮ ಸೂತ್ತಲಿನ ಸಮಾಜದಲ್ಲಿ ನಡೆಯುತ್ತಿರುವುದು ಅನ್ಯಾಯಗಳನ್ನು ಪ್ರಕಟಿಸುವ ಮೂಲಕ ಸಮಾಜಕ್ಕೆ ಚಾಟಿ ಏಟು ನೀಡಬೇಕು ಎಂದರು.
