You are currently viewing LOCAL NEWS : ​”ಸ್ವಚ್ಛ ಕುಕನೂರು-ನಮ್ಮೆಲ್ಲರ ಹೊಣೆ”  ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಹಕರಿಸಿ : ಮುಖ್ಯಧಿಕಾರಿ ನಾಗೇಶ್ 

LOCAL NEWS : ​”ಸ್ವಚ್ಛ ಕುಕನೂರು-ನಮ್ಮೆಲ್ಲರ ಹೊಣೆ”  ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಹಕರಿಸಿ : ಮುಖ್ಯಧಿಕಾರಿ ನಾಗೇಶ್ 

LOCAL NEWS : ​”ಸ್ವಚ್ಛ ಕುಕನೂರು-ನಮ್ಮೆಲ್ಲರ ಹೊಣೆ”  ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಹಕರಿಸಿ : ಮುಖ್ಯಧಿಕಾರಿ ನಾಗೇಶ್ 

PV ನ್ಯೂಸ್ ಡಿಜಿಟಲ್ : 

ಕುಕನೂರು, ಮೇ 19 : ಕೇಂದ್ರ ಸರ್ಕಾರದ ಆದೇಶದನ್ವಯ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ತರಲಾಗಿರುವ ನೂತನ ‘ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2026’ ಅನ್ನು ಕುಕನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್ ತಿಳಿಸಿದರು.

​ಸ್ಥಳೀಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ನಿಯಮದ ಮುಖ್ಯಾಂಶಗಳು ಹಾಗೂ ಸಾರ್ವಜನಿಕರ ಜವಾಬ್ದಾರಿಗಳ ಕುರಿತು ಅವರು ಸುದೀರ್ಘ ಮಾಹಿತಿ ನೀಡಿದರು.

ಮೂಲದಲ್ಲೇ ಕಸ ವಿಂಗಡಣೆ ಕಡ್ಡಾಯ (Source Segregation) : ​ಹೊಸ ನಿಯಮ 2026 ರ ಅನ್ವಯ ಪಟ್ಟಣದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡ್ಡಾಯವಾಗಿ ಮೂಲದಲ್ಲೇ ವಿಂಗಡಿಸಬೇಕು.

1) ​ಹಸಿ ಕಸ (ಜೈವಿಕ ವಿಘಟನೀಯ): ಅಡುಗೆ ಮನೆ ತ್ಯಾಜ್ಯ, ತರಕಾರಿ, ಹಣ್ಣಿನ ಸಿಪ್ಪೆ ಇತ್ಯಾದಿಗಳನ್ನು ಹಸಿರು ಬಕೆಟ್‌ನಲ್ಲಿ ಇಡಬೇಕು.

2) ​ಒಣ ಕಸ (ಮರುಬಳಕೆ ಮಾಡಬಹುದಾದ): ಪ್ಲಾಸ್ಟಿಕ್, ಕಾಗದ, ಗಾಜು, ರಟ್ಟಿನ ಪೆಟ್ಟಿಗೆಗಳನ್ನು ನೀಲಿ ಬಕೆಟ್‌ನಲ್ಲಿ ಇಡಬೇಕು.

3) ​ಹಾನಿಕಾರಕ ತ್ಯಾಜ್ಯ: ಸ್ಯಾನಿಟರಿ ಪ್ಯಾಡ್, ಡೈಪರ್, ಹಳೇ ಔಷಧಿಗಳು ಹಾಗೂ ಇ-ತ್ಯಾಜ್ಯವನ್ನು ಪ್ರತ್ಯೇಕವಾಗಿ ಕೆಂಪು ಚೀಲದಲ್ಲಿ ಸುರಕ್ಷಿತವಾಗಿ ನೀಡಬೇಕು.

​ “ಯಾವ ಮನೆಯವರು ಕಸವನ್ನು ವಿಂಗಡಿಸಿ ನೀಡುವುದಿಲ್ಲವೋ, ಅಂತಹವರಿಂದ ಪೌರಕಾರ್ಮಿಕರು ಕಸವನ್ನು ಸ್ವೀಕರಿಸುವುದಿಲ್ಲ. ನಿಯಮ ಉಲ್ಲಂಘಿಸುವ ಸಾರ್ವಜನಿಕರು ಹಾಗೂ ವರ್ತಕರಿಗೆ ಹೊಸ ಕಾಯ್ದೆಯಡಿ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದರು.

 

“ಕುಕನೂರು ಪಟ್ಟಣವನ್ನು ರಾಜ್ಯದಲ್ಲೇ ಮಾದರಿ ಮತ್ತು ಸ್ವಚ್ಛ ಪಟ್ಟಣವನ್ನಾಗಿ ಮಾಡಲು ಈ ‘ಘನ ತ್ಯಾಜ್ಯ ನಿರ್ವಹಣೆ ನಿಯಮ 2026’ ಅತ್ಯಂತ ಸಹಕಾರಿಯಾಗಿದೆ. ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜಾರಿಗೆ ಬಂದಿರುವ ಈ ಕಾಯ್ದೆಯನ್ನು ಯಶಸ್ವಿಗೊಳಿಸಲು ಪಟ್ಟಣದ ಎಲ್ಲಾ ನಾಗರಿಕರು, ಸ್ವಸಹಾಯ ಸಂಘಗಳು ಹಾಗೂ ವರ್ತಕರು ಪೌರಕಾರ್ಮಿಕರೊಂದಿಗೆ ಮತ್ತು ಪಂಚಾಯಿತಿಯೊಂದಿಗೆ ಕೈಜೋಡಿಸಬೇಕು” 

ನಾಗೇಶ್, ಮುಖ್ಯಧಿಕಾರಿಗಳು, ಪ. ಪಂ. ಕುಕನೂರು.

Leave a Reply

error: Content is protected !!