ಲಿಂಗ ತಾರತಮ್ಯಕ್ಕೆ ಬ್ರೇಕ್ ಹಾಕಲು ನ್ಯಾಯಧೀಶರಾದ ವಿಜಯ್ ಕುಮಾರ್ ಕಣ್ಣೂರ್ ಕರೆ.
ಕುಕನೂರು : ಸಮಾಜದಲ್ಲಿ ಎಲ್ಲರೂ ಸಮಾನರು, ಹೆಣ್ಣು ಗಂಡು ಬೇಧ ಭಾವ ಕ್ರಮೇಣ ಕಡಿಮೆಯಾಗುತ್ತಿದೆ. ಲಿಂಗ ತಾರತಮ್ಯಕ್ಕೆ ಕಡಿವಾಣ ಹಾಕಬೇಕು, ಭಾರತೀಯ ಸಂವಿಧಾನದಲ್ಲಿ ಸ್ತ್ರೀ ಸಮಾನತೆ ಕೊಡಲಾಗಿದೆ ಎಂದು ಯಲಬುರ್ಗಾ ತಾಲೂಕು ಹಿರಿಯ ಸಿವಿಲ್ ನ್ಯಾಯಧೀಶರಾದ ವಿಜಯ್ ಕುಮಾರ್ ಕಣ್ಣೂರು ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜು ಆವರಣದಲ್ಲಿ ಅಂತರ್ ರಾಷ್ಟೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಪುರುಷರಿಗೆ ಸರಿ ಸಮಾನವಾದ ಸ್ಥಾನಮಾನವನ್ನು ಪ್ರತಿಯೊಬ್ಬ ಮಹಿಳೆಗೂ ಕೊಡಲಾಗಿದೆ. ಇಲ್ಲಿ ಯಾವುದೇ ಮೇಲು ಕೀಳು ಎಂಬುದಿಲ್ಲ ಎಲ್ಲರೂ ಸಮಾನರು. ಮಹಿಳೆಯರಿಗೂ ಸಹ 50 ಪ್ರತೀಶತ ಮೀಸಲಾತಿ ಕಲ್ಪಿಸಲಾಗಿದೆ ಎಂದು ನ್ಯಾಯಧೀಶರು ಹೇಳಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಬಿ ಎಸ್ ಬೇಲೇರಿ, ಕುಕನೂರು ಠಾಣೆಯ ಪಿಎಸ್ಐ ಟಿ ಗುರುರಾಜ್, ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಿ ಸುಬ್ರಮಣ್ಯ, ಹಿರಿಯ ಮೇಲ್ವಿಚಾರಕಿ ಮಾಧವಿ, ಜಯಲಕ್ಷ್ಮಿ, ಚನ್ನಮ್ಮ ಇತರರು ಉಪಸ್ಥಿತರಿದ್ದರು.