BIG NEWS : ‘ಅಯೋಧ್ಯೆಯಲ್ಲಿರುವುದು ರಾಮಮಂದಿರವಲ್ಲ, ಆರ್‌ಎಸ್‌ಎಸ್‌ನ ಹಣ ಸಂಗ್ರಹಣಾ ಕೇಂದ್ರ’ – ಯತಿ ನರಸಿಂಗಾನಂದ್ ವಿವಾದಾತ್ಮಕ ಆರೋಪ; ದೇಶಾದ್ಯಂತ ಹೊಸ ಚರ್ಚೆಗೆ ನಾಂದಿ!

PV NEWS ಕನ್ನಡ 24×7 :
ನವದೆಹಲಿ, ಜು. 12: ಅಯೋಧ್ಯೆಯ ರಾಮಮಂದಿರದ ಕುರಿತು ದಸ್ನಾ ದೇವಿ ದೇವಸ್ಥಾನದ ಮುಖ್ಯಸ್ಥ ಯತಿ ನರಸಿಂಗಾನಂದ್ ನೀಡಿರುವ ವಿವಾದಾತ್ಮಕ ಹೇಳಿಕೆ ದೇಶದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ‘ಖಾಸಗಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಅವರು, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವುದು “ನಿಜವಾದ ರಾಮಮಂದಿರವಲ್ಲ; ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಡೆಸುತ್ತಿರುವ ಧನ ಸಂಗ್ರಹಣಾ ಕೇಂದ್ರ” ಎಂದು ಆರೋಪಿಸಿದ್ದಾರೆ.

ಸುಮಾರು ಐದು ಶತಮಾನಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಎಂಬ ಸಾರ್ವಜನಿಕ ಅಭಿಪ್ರಾಯವನ್ನು ತಳ್ಳಿಹಾಕಿದ ನರಸಿಂಗಾನಂದ್, ಅಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಆರ್‌ಎಸ್‌ಎಸ್‌ನ ಕಚೇರಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಮಂದಿರದ ಹೆಸರಿನಲ್ಲಿ ಭಕ್ತರಿಂದ ಹಣ ಹಾಗೂ ಕಾಣಿಕೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
