ಮುದಗಲ್ಲ ವರದಿ..
ಮೃತರ ಕುಟುಂಬಕ್ಕೆ ಸಾಂತ್ವನ, ಪರಿಹಾರ ಭರವಸೆ..
ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡ ವೈದ್ಯ ವಿದ್ಯಾರ್ಥಿನಿ
ಸುಮ೦ಗಲ ಮನೆಗೆ ಶಾಸಕ ಮಾನಪ್ಪ ವಜ್ಜಲ್ ಭೇಟಿ ನೀಡಿ ಕುಟುಂಬ ಸ್ಥರಿಗೆ ಸಾಂತ್ವನ..
ಈ.ಹಿನ್ನೆಲೆ ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪಡಿ. ವಜ್ಜಲ ಅವರು ಮೃತ ವಿದ್ಯಾರ್ಥಿ ನಿಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ.ಸಾಂತ್ವನ ಹೇಳಿದರು. ದುರಂತದಲ್ಲಿ ಮಗಳನ್ನು ಕಳೆದುಕೊಂಡ ಕುಟು೦ಬದ ನೋವಿನಲ್ಲಿ ಭಾಗಿಯಾದ ಶಾಸಕರು, ಕುಟು೦ಬ ದವರಿಗೆ ಧೈರ್ಯ ತುಂಬಿ, ಈ ದುಃಖವನ್ನು ಎದುರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

ಅಲ್ಲದೆ, ಮೃತವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ, ಪರಿಹಾರ ಧನ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ವೈದ್ಯಕೀಯ ಶಿಕ್ಷಣದ ಮೂಲಕ ಸಮಾಜಸೇವೆ ಮಾಡುವ ಮಹತ್ತರ ಕನಸು ಹೊತ್ತಿದ್ದ ಸುಮಂಗಲ ಅವರ ಅಕಾಲಿಕ ನಿಧನ ಮುದಗಲ್ ಪಟ್ಟಣದ ಜನತೆ,ಸ್ನೇಹಿತರು ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ತೀವ್ರ ಆಘಾತ ಉಂಟುಮಾಡಿದೆ.
ಈ ಸಂದರ್ಭದಲ್ಲಿ ಶಾಸಕರ ಭೇಟಿಯ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ
ವೀರನಗೌಡ ಪಾಟೀಲ್ ಲಕ್ಕಿಹಾಳ, ಉದಯ್ ಕುಮಾರ್ ಕಮ್ಮಾರ್, ಮುದುಕಪ್ಪ ನಾಯಕ್, ಮಲ್ಲಪ್ಪ ಹೂಗಾರ್, ವೆಂಕಟೇಶ್ ಹಿರೇಮನಿ, ಚಂದವಲಿ ಸಾಬ್ ಜಂಗ್ಲಿ, ರವಿ ಕಟ್ಟಿಮನಿ, ಮಂಜುನಾಥ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿಕೋರಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ವರದಿ:-ಮಂಜುನಾಥ ಕುಂಬಾರ
