ಮುದಗಲ್ :-ಆನ್‍ಲೈನ್ ಔಷಧ ಮಾರಾಟ ನಿಷೇಧಕ್ಕೆ ಆಗ್ರಹ, ಔಷಧ ಅಂಗಡಿ ಬಂದ್ ಇಂದು..
ಈ ಕುರಿತು ಮುದಗಲ್ಲ ನಾಡ ಕಛೇರಿಯ ಉಪ ತಹಶೀಲ್ದಾರ್ , ತುಲಜಾರಾಮ ಸಿಂಗ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿ, ಮಧು ಪಾಮ೯ಸಿ ಮಾಲಕರಾದ ವೆಂಕಟೇಶ್ ಅವರು ದೇಶದಲ್ಲಿ ಆನ್‍ಲೈನ್ ಮೂಲಕ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಸುಮಾರು 12.40ಲಕ್ಷ ಔಷಧ ವ್ಯಾಪಾರಿ, ವಿತರಕರು ಹಾಗೂ ನಾಲ್ಕೈದು ಕೋಟಿ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಬೇಸರ ವ್ಯಕ್ತಪಡಿಸಿದರು. ಗುಣಮಟ್ಟ ಇಲ್ಲದ ಔಷಧಿ ಮಾರಾಟ, ದರ ಪೈಪೋಟಿಯಿಂದ ಔಷಧಿ ವ್ಯಾಪಾರಿಗಳ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಆನ್‍ಲೈನ್ ಮೂಲಕ ಔಷಧಿ ಮಾರಾಟಕ್ಕೆ ಅನುಮತಿಸಿದ 2020ರ ಮಾ.26 ಮತ್ತು 2018ರ ಆ.28ರ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಕಾರ್ಪೋರೇಟ್ ಸಂಸ್ಥೆಗಳಿಗೆ ಔಷಧಗಳ ಮೇಲೆ ನೀಡುವ ಬಾರಿ ರಿಯಾಯಿತಿ ನೀತಿ ರದ್ದುಗೊಳಿಸಿ, ಏಕ ರೀತಿಯ ರಿಯಾಯಿತಿ ದರವನ್ನು ನಿಗಧಿಗೊಳಿಸಬೇಕು. ನಕಲಿ, ಕಲುಷಿತ ಔಷಧಿ ತಯಾರಿಕೆಯನ್ನು ನಿರ್ಬಂಧಿ ಸಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ವೆಂಕಟೇಶ , ರಾಘವೇಂದ್ರ , ಸುಚಿತ ಕುಮಾರ್, ರಾಜು , ದೊಡ್ಡನಗೌಡ ಪಾಟೀಲ್, ಮಂಜುನಾಥ್ ಅಲಾಂ ಖಾನ್ ,ಧಮ೯ನಗೌಡ ,ಯುನುಸ್ ಇತರರು ಉಪಸ್ಥಿತರಿದ್ದರು
ವರದಿ:-ಮಂಜುನಾಥ ಕುಂಬಾರ