You are currently viewing ಮುದಗಲ್ಲ :- ಬೀಜ ಮತ್ತು ರಸಗೊಬ್ಬರ ರಸಗೊಬ್ಬರ ಅಂಗಡಿಗೆ ಕೃಷಿ ನಿರ್ದೆಶಕಿ ಭೇಟಿ..

ಮುದಗಲ್ಲ :- ಬೀಜ ಮತ್ತು ರಸಗೊಬ್ಬರ ರಸಗೊಬ್ಬರ ಅಂಗಡಿಗೆ ಕೃಷಿ ನಿರ್ದೆಶಕಿ ಭೇಟಿ..

ಮುದಗಲ್ಲ ವರದಿ.

ಬೀಜ ಮತ್ತು ರಸಗೊಬ್ಬರ ರಸಗೊಬ್ಬರ ಅಂಗಡಿಗೆ ಕೃಷಿ ನಿರ್ದೆಶಕಿ ಭೇಟಿ..

ಮುದಗಲ್ -ಪಟ್ಟಣದ ಬದ್ರಿನಾಥ ಬೀಜ ಮತ್ತು ರಸಗೊಬ್ಬರ ಮಾರಾಟಗಾರ ಅಂಗಡಿಗೆ ಲಿಂಗಸ್ಗೂರು ಸಹಾಯಕ ಕೃಷಿ ನಿರ್ದೆಶಕಿ ವಿಜಯಾಮೂರ್ತಿ ಬೇಟಿ ನೀಡಿ ಪರಿಶೀಲನೆ ಮಾಡಿದರು

ಮಾರಾಟಗಾರÀರು ಪ್ರತಿ ತಿಂಗಳು ೫ನೇ ದಿನಾಂಕದೊಳಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರವರಿಗೆ ತಿಂಗಳಿನ ರಸಗೊಬ್ಬರಗಳ ಪ್ರಾರಂಭದ ಶಿಲ್ಕು ಹಾಗೂ ಮಾರಾಟ ಮಾಡಿದ ಶಿಲ್ಕು ವಿವರಗಳನ್ನು ಸಲ್ಲಿಸಿರುವುದಿಲ್ಲ.ನಿಗದಿಪಡಿಸಿದ ದರ್ಜೆಯಲ್ಲದ ರಸಗೊಬ್ಬರಗಳನ್ನು ಮಾರಾಟದಾಸ್ತಾನು ಮಾಡಿರುತ್ತೀರಿ.ಬಿಲ್ಲು ಪುಸ್ಕದಲ್ಲಿರುವ ರೈತರ ಸಹಿ
ಇರುವುದಿಲ್ಲ ಮತ್ತು ಡಿಎಪಿ ಜತೆ ಇತರೆ ರಸಗೊಬ್ಬರಗಳನ್ನು ಮಾರಾಟಮಾಟಿದ್ದೀರಿ,ಮಾರಾಟ ಮಾಡುವಾಗ ರಸಗೊಬ್ಬರಗಳ ದಾಸ್ತಾನಿನ ವಿವರಗಳನ್ನು ಹಾಗೂ ಮಾರಾಟದದರವನ್ನು ಪ್ರಮುಖವಾದ ಜಾಗದಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಫಲಕದಲ್ಲಿ ಪ್ರದರ್ಶಿಸಿರುವುದಿಲ್ಲ.ನೀವು ರಸಗೊಬ್ಬರ (ನಿಯಂತ್ರಣ) ಕಾಯ್ದೆ ೧೯೮೫ ರ ನಿಯಮಗಳನ್ನು ಉಲ್ಲಂಘಿಸಿರುವುದರಿAದ ನೀಡಲಾಗಿರುವ ರಸಗೊಬ್ಬರಗಳ ಮಾರಾಟದ ಪರವಾನಿಗೆಯನ್ನು ರದ್ದುಪಡಿಸಿವುದು ಅತ್ಯಾವಶ್ಯಕವೆಂದು ಕಂಡು ಬಂದ ಹಿನ್ನಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.೩ ದಿನಗಳೊಳಗೆ ಸಮಜಾಹಿಸಿ ಉತ್ತರ ನೀಡಬೇಕು.ತಪ್ಪಿದ್ದಲ್ಲಿ ರಸಗೊಬ್ಬರಗಳ ಮಾರಾಟದ ಪರವಾನಗಿಯನ್ನು ರದ್ದುಗೊಳಿಸುವ ಕ್ರಮಗಳನ್ನು ಜರುಗಿಸಲಾಗುವುದು ಎಂದರು

.ಈ ವೇಳೆ ಕೃಷಿ ಅಧಿಕಾರಿಗಳಾದ ಅಮರೇಗೌಡ,ಶ್ರೀಶೈಲ ಬೋವಿ ಸೇರಿದಂತೆ ಇತರರು ಇದ್ದರು.

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!