You are currently viewing LOCAL NEWS : ಜಾತಿ, ಧರ್ಮ ಮೀರಿ ಸೇವೆ ಸಲ್ಲಿಸುತ್ತಿರುವ ಕಳಕಪ್ಪ ಕಂಬಳಿಗೆ ಉಜ್ವಲ ಭವಿಷ್ಯ ಸಿಗಲಿ: ಪದ್ಮಶ್ರೀ ಜೋಗತಿ ಮಂಜಮ್ಮ

LOCAL NEWS : ಜಾತಿ, ಧರ್ಮ ಮೀರಿ ಸೇವೆ ಸಲ್ಲಿಸುತ್ತಿರುವ ಕಳಕಪ್ಪ ಕಂಬಳಿಗೆ ಉಜ್ವಲ ಭವಿಷ್ಯ ಸಿಗಲಿ: ಪದ್ಮಶ್ರೀ ಜೋಗತಿ ಮಂಜಮ್ಮ

LOCAL NEWS : ಜಾತಿ, ಧರ್ಮ ಮೀರಿ ಸೇವೆ ಸಲ್ಲಿಸುತ್ತಿರುವ ಕಳಕಪ್ಪ ಕಂಬಳಿಗೆ ಉಜ್ವಲ ಭವಿಷ್ಯ ಸಿಗಲಿ: ಪದ್ಮಶ್ರೀ ಜೋಗತಿ ಮಂಜಮ್ಮ

PV NEWS : 

ಕುಕನೂರು, ಜೂ. 04 : “ಜಾತಿ, ಧರ್ಮ ಮತ್ತು ಮತ-ಪಂಥಗಳ ಭೇದವಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ಸಮಾಜ ಸೇವಕ ಕಳಕಪ್ಪ ಕಂಬಳಿ ಅವರಿಗೆ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಅತ್ಯುನ್ನತ ಸ್ಥಾನಮಾನಗಳು ದೊರೆಯಲಿ,” ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಜಾನಪದ ಕಲಾವಿದೆ ಜೋಗತಿ ಮಂಜಮ್ಮ ಆಶಿಸಿದ್ದಾರೆ.

ಬುಧವಾರ (ಜೂನ್ 03) ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಶರಣು ಕಾರ್ಯಾಲಯ ಉದ್ಘಾಟನಾ ಸಮಾರಂಭ”ದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

​ಕಾರ್ಯಕ್ರಮದಲ್ಲಿ ಕಳಕಪ್ಪ ಕಂಬಳಿ ಅವರ ನಿಷ್ಕಲ್ಮಶ ಸಮಾಜ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಜೋಗತಿ ಮಂಜಮ್ಮ, “ಇಂದಿನ ದಿನಗಳಲ್ಲಿ ಸ್ವಾರ್ಥವಿಲ್ಲದೆ ಸಮಾಜ ಸೇವೆ ಮಾಡುವವರು ಅಪರೂಪವಾಗಿದ್ದಾರೆ. ಅಂತಹದರಲ್ಲಿ ಕಳಕಪ್ಪ ಕಂಬಳಿ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ, ಕೇವಲ ಮಾನವೀಯತೆಯನ್ನೇ ಧರ್ಮವಾಗಿಸಿಕೊಂಡು ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಾಯಕರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ,” ಎಂದರು.

ಅತ್ಯುನ್ನತ ಸ್ಥಾನ ಸಿಗಲಿ:- 

“ಯಾರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರೋ, ಅವರಿಗೆ ಭಗವಂತ ಮತ್ತು ಸಾರ್ವಜನಿಕರು ಖಂಡಿತವಾಗಿಯೂ ದೊಡ್ಡ ಸ್ಥಾನವನ್ನು ನೀಡುತ್ತಾರೆ. ಕಳಕಪ್ಪ ಕಂಬಳಿ ಅವರ ಸಮಾಜಮುಖಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ. ಮುಂಬರುವ ದಿನಗಳಲ್ಲಿ ಅವರಿಗೆ ಅತ್ಯುನ್ನತ ರಾಜಕೀಯ ಅಥವಾ ಸಾಮಾಜಿಕ ಗೌರವದ ಸ್ಥಾನಗಳು ಸಿಗುವಂತಾಗಲಿ. ಆ ಮೂಲಕ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಜನಸೇವೆ ಮಾಡುವ ಶಕ್ತಿ ಅವರಿಗೆ ಸಿಗಲಿ ಎಂದು ನಾನು ಹಾರೈಸುತ್ತೇನೆ,” ಎಂದು ನುಡಿದರು.

​ಇದೇ ಸಂದರ್ಭದಲ್ಲಿ ಸಮಾಜ ಸೇವಕ ಕಳಕಪ್ಪ ಕಂಬಳಿ ಅವರನ್ನು ಜೋಗತಿ ಮಂಜಮ್ಮ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

 

“ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಹಾಗೂ ಗುರು-ಹಿರಿಯರ ಆಶೀರ್ವಾದ ನನ್ನ ಮೇಲೆ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೆ ಕ್ಷೇತ್ರದ ಬಡವರ, ದೀನ ದಲಿತರ ಮತ್ತು ಶೋಷಿತರ ಕಣ್ಣೀರು ಒರೆಸುವ ಕಾಯಕವನ್ನು ನನ್ನ ಜೀವನದ ಕೊನೆಯ ಉಸಿರಿರುವವರೆಗೂ ನಿಸ್ವಾರ್ಥತೆಯಿಂದ ನಿರಂತರವಾಗಿ ಮಾಡುತ್ತೇನೆ,”

 

:-ಕಳಕಪ್ಪ ಕಂಬಳಿ, ಸಮಾಜ ಸೇವಕ -ಯಲಬುರ್ಗಾ ವಿಧಾನಸಭಾ ಕ್ಷೇತ್ರ.

 

“ಯಾವುದೇ ಅಧಿಕಾರವಿಲ್ಲದಿದ್ದರೂ ಕಳೆದ ಹಲವು ವರ್ಷಗಳಿಂದ ಬಡವರ, ದೀನ ದಲಿತರ ಕಷ್ಟಗಳಿಗೆ ಹೆಗಲಾಗುತ್ತಾ ಬಂದಿದ್ದಾರೆ. ಕರೋನಾ ಸಂಕಷ್ಟದ ಸಮಯದಿಂದ ಹಿಡಿದು ಇಂದಿನವರೆಗೂ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಜನರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಿರುವುದು ಸಾಮಾನ್ಯದ ಮಾತಲ್ಲ. ಅವರ ಮಾನವೀಯ ಗುಣ ಮತ್ತು ಜನಪರ ಕಾಳಜಿ ಶ್ಲಾಘನೀಯ”

:- ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು, ಮುಂಡರಗಿ. 

​ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಮುಖ ವಿವಿಧ ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

error: Content is protected !!