You are currently viewing LOCAL NEWS : ಯಲಬುರ್ಗಾದಲ್ಲಿ ಇಂದು ಕಾನಿಪ ಧ್ವನಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಪದಗ್ರಹಣ ಹಾಗೂ ಪತ್ರಕರ್ತರ ಕಾರ್ಡ್ ವಿತರಣಾ ಸಮಾರಂಭ!

LOCAL NEWS : ಯಲಬುರ್ಗಾದಲ್ಲಿ ಇಂದು ಕಾನಿಪ ಧ್ವನಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಪದಗ್ರಹಣ ಹಾಗೂ ಪತ್ರಕರ್ತರ ಕಾರ್ಡ್ ವಿತರಣಾ ಸಮಾರಂಭ!

LOCAL NEWS : ಯಲಬುರ್ಗಾದಲ್ಲಿ ಇಂದು ಕಾನಿಪ ಧ್ವನಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಪದಗ್ರಹಣ ಹಾಗೂ ಪತ್ರಕರ್ತರ ಕಾರ್ಡ್ ವಿತರಣಾ ಸಮಾರಂಭ!

📰 PV NEWS ಕನ್ನಡ 24×7

ಯಲಬುರ್ಗಾ, ಜು. 13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ.), ಕೊಪ್ಪಳ ಜಿಲ್ಲಾ ಯಲಬುರ್ಗಾ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ 2026–27ನೇ ಸಾಲಿನ ಪತ್ರಕರ್ತರ ಗುರುತಿನ ಚೀಟಿ (ಕಾರ್ಡ್) ವಿತರಣಾ ಸಮಾರಂಭವನ್ನು ಇಂದು (ಸೋಮವಾರ, ಜುಲೈ 13) ಅದ್ದೂರಿಯಾಗಿ ಆಯೋಜಿಸಲಾಗಿದೆ.

ತಾಲೂಕಿನ ಎಸ್.ಎ. ನಿಂಗೋಜಿ ಬಿಎಡ್ ಮಾಹಾವಿದ್ಯಾಲಯದಲ್ಲಿ ಬೆಳಿಗ್ಗೆ 10:30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಉದ್ಘಾಟಿಸಲಿದ್ದು, ಮಾಜಿ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರು ರಾಷ್ಟ್ರಕವಿ ಡಿ.ವಿ. ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.

2026–27ನೇ ಸಾಲಿನ ಪತ್ರಕರ್ತರ ಗುರುತಿನ ಚೀಟಿಗಳನ್ನು ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ಎಂ. ನಾಶಿ ಹಾಗೂ ಹಿರಿಯ ಬಿಜೆಪಿ ಮುಖಂಡ ಬಸವಲಿಂಗಪ್ಪ ಭೂತೆ ವಿತರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ಡಿಡಿಪಿಐ ಎಸ್.ಡಿ. ಗಾಂಜಿ ಅವರು ವಿಶೇಷ ಉಪನ್ಯಾಸ ನೀಡಲಿದ್ದು, ತಾಲೂಕು ಘಟಕದ ಅಧ್ಯಕ್ಷ ಶಿವಮೂರ್ತಿ ಇಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಮುಖ ಗಣ್ಯರ ಭಾಗಿ

ಕಾರ್ಯಕ್ರಮದಲ್ಲಿ ಇಲಕಲ್ಲ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ನೀಲಗಂಗಾ ಬಬಲಾದ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಿ. ನಾಗೇಶ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಜಿಪಂ ಮಾಜಿ ಸದಸ್ಯರಾದ ಅರವಿಂದಗೌಡ ಎಸ್. ಪಾಟೀಲ್ ಹಾಗೂ ಈರಪ್ಪ ಕುಡಗುಂಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಡಾ. ಶಿವನಗೌಡ ದಾನರೆಡ್ಡಿ ಸೇರಿದಂತೆ ಎಸ್.ವಿ. ನಿಂಗೋಜಿ, ಕಾನಿಪ ಧ್ವನಿ ಜಿಲ್ಲಾ ಅಧ್ಯಕ್ಷ ಸುನಿಲಕುಮಾರ ಮಠದ, ಕಾನಿಪ ಧ್ವನಿ ತಾಲ್ಲೂಕು ಅಧ್ಯಕ್ಷ ಚಂದ್ರು ಆರ್. ಭಾನಾಪುರ್, ಪ್ರಧಾನಕಾರ್ಯದರ್ಶಿ ಮುತ್ತು ದೊಡ್ಡಮನಿ, ಸಿದ್ದಪ್ಪ ಕಟ್ಟಮನಿ, ಭದ್ರಪ್ಪ ಭಲವಾಡಿ, ವಂಶಿಧರ ಸಾಯಿರಾಂ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಭವ್ಯ ಸಮಾರಂಭದಲ್ಲಿ ತಾಲೂಕಿನ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷ ಶಿವಮೂರ್ತಿ ಇಟಗಿ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಶಿವಪ್ಪಯ್ಯನಮಠ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

— ಚಂದ್ರು ಆರ್. ಭಾನಾಪುರ

ಸಂಪಾದಕರು, PV NEWS ಕನ್ನಡ 24×7

Prajavikshane

Chandru R Bhanapaur

Leave a Reply

error: Content is protected !!