ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಜಾದಿನಗಳ ಪಟ್ಟಿಯ ಪ್ರಕಾರ, ದೇಶದ ಹಲವಾರು ನಗರಗಳಲ್ಲಿ ಮೇ ತಿಂಗಳಲ್ಲಿ ಕೆಲವು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಬಂದ್ ಆಗಲಿವೆ. ಭೌತಿಕ ಕಾರ್ಯಾಚರಣೆಗಳಿಗಾಗಿ ಶಾಖೆಗಳನ್ನು ಮುಚ್ಚಲಾಗಿದ್ದರೂ, ಆನ್ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಹಾಗಾಗಿ ಮೇ ತಿಂಗಳಲ್ಲಿ ಒಟ್ಟು ಒಟ್ಟು 12 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂದು ತಿಳಿಸಿದೆ.
ಆದ್ದರಿಂದ ಈ ತಿಂಗಳು ಯಾವುದೇ ಬ್ಯಾಂಕ್ ಸಂಬಂಧಿತ ಪ್ರಮುಖ ಕೆಲಸಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಬಯಸಿದರೆ, ಮೇ ತಿಂಗಳಲ್ಲಿ ವಿವಿಧ ನಗರಗಳಲ್ಲಿ ಶಾಖೆಗಳನ್ನು ಬಂದ್ ಇರುವ ದಿನಗಳ ಬಗ್ಗೆ ತಿಳಿದುಕೊಳ್ಳಲೇಬೇಕು.
ಇನ್ನು ಕೆಲವು ಬ್ಯಾಂಕ್ ರಜಾದಿನಗಳನ್ನು ರಾಷ್ಟ್ರವ್ಯಾಪಿ ಆಚರಿಸಿದರೆ, ಇನ್ನು ಕೆಲವು ಸ್ಥಳೀಯ ರಜಾದಿನಗಳಾಗಿರುತ್ತವೆ. ಮೇ ತಿಂಗಳನಲ್ಲಿರುವ ಬರುವ ಹಬ್ಬಗಳಿಂದಾಗಿ ವಿವಿಧ ರಾಜ್ಯಗಳಲ್ಲಿ ಹಲವಾರು ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ. ಈ ತಿಂಗಳಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೊದಲು, ಬ್ಯಾಂಕುಗಳು ಮುಚ್ಚಲ್ಪಡುವ ಪ್ರಮುಖ ದಿನಗಳ ಪಟ್ಟಿಯನ್ನು ಒಮ್ಮೆ ಗಮನಿಸಿ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) *(ಇತಿಹಾಸ ಮೊದಲ ವಿಶ್ವಯುದ್ಧದ ನಂತರದ ಆರ್ಥಿಕ ತೊಂದರೆಗಳಿಗೆ ಸ್ಪಂದಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು 1 ಏಪ್ರಿಲ್ 1935 ರಂದು ಸ್ಥಾಪಿಸಲಾಯಿತು. ಈ ವಿಧಾನಸೂಚಿಗಳನ್ನು ಆರ್‌ಬಿಐ ಕಾಯ್ದೆ 1934 ಎಂದು ಅಂಗೀಕರಿಸಿದ ಕೇಂದ್ರ ವಿಧಾನಸಭೆಯು ಮಂಡಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಪರಿಕಲ್ಪನೆ ಮಾಡಲಾಯಿತು)*
ಆರ್‌ಬಿಐ ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕುಗಳು ರಜೆ ಇರಲಿದೆ. ಇನ್ನುಳಿದ ದಿನಗಳು ವಾರಾಂತ್ಯ ಮತ್ತು ರಾಜ್ಯ ಘೋಷಿತ ರಜಾದಿನಗಳಾಗಿವೆ. ಹಾಗಾಗಿ ಎಲ್ಲಾ ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಬ್ಯಾಂಕುಗಳು 12 ದಿನಗಳವರೆಗೆ ಮುಚ್ಚಲ್ಪಡುವುದಿಲ್ಲ ಎಂಬುದನ್ನು ನೀವು ಮುಖ್ಯವಾಗಿ ಗಮನಿಸಬೇಕು.
2023 ರ ಮೇ ತಿಂಗಳಲ್ಲಿ ಈ ದಿನದಲ್ಲಿ ಬ್ಯಾಂಕ್ ರಜಾದಿನಗಳು ಇಂತಿವೆ.
(ಕೆಲವು ರಾಜ್ಯಕ್ಕೆ ಅನ್ವಯ)
ಮಹಾರಾಷ್ಟ್ರ ದಿನ ಹಾಗೂ ಮೇ ದಿನ : ಮೇ 1
ಬುದ್ಧ ಪೂರ್ಣಿಮಾ
ಮೇ 5
ಮೇ 7 : ಭಾನುವಾರ
ರವೀಂದ್ರನಾಥ ಟ್ಯಾಗೋರ್ ಜನ್ಮದಿನ
ಮೇ 9
ಮೇ 13 : ಎರಡನೇ ಶನಿವಾರ
ಮೇ 14: ಭಾನುವಾರ
ಮೇ 21: ಭಾನುವಾರ
ಮೇ 22 : ಮಹಾರಾಣಾ ಪ್ರತಾಪ್ ಜಯಂತಿ
ಮೇ 24 : ತ್ರಿಪುರಾದಲ್ಲಿ ಕಾಜಿ ನಜ್ರುಲ್ ಇಸ್ಲಾಂ ಜಯಂತಿ
ಮೇ 27: ನಾಲ್ಕನೇ ಶನಿವಾರ
ಮೇ 28: ಭಾನುವಾರ