ಮುದಗಲ್ಲ ವರದಿ..
ಅದ್ದೂರಿಯಾಗಿ ನಡೆದ ಶ್ರೀ ಜ್ಞಾನಜ್ಯೋತಿ ಶ್ರೀ ಗುರು ಗ್ಯಾನಪಯ್ಯನವರು ಮೂತಿ೯ಯ ಆಗಮನ ಮತ್ತು ಪ್ರತಿಷ್ಟಾಪನಾ ಸಮಾಂರಭ..
ಮುದಗಲ್ಲ :- ಪಟ್ಟಣದ ಮೇಗಳಪೇಟೆಯಲ್ಲಿ ಶ್ರೀ ಜ್ಞಾನಜ್ಯೋತಿ ಶ್ರೀ ಗುರು ಗ್ಯಾನಪಯ್ಯನವರು ಅವರ ಮಹೋತ್ಸವ ಅಥವಾ ಜಾತ್ರಾ ಮಹೋತ್ಸವದ ಅಂಗವಾಗಿ ಮೂತಿ೯ ಹಾಗೂ ಕಳಸ ಮೆರವಣಿಗೆಯು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮಗಳಿಂದ ಜರುಗುತ್ತದೆ.

ಮುದಗಲ್‌ನ ಮೇಗಳಪೇಟೆಯ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರು ಕೈಯಲ್ಲಿ ಆರತಿ ತಟ್ಟೆ ಹಿಡಿದು ಹಾಗೂ ಅಲಂಕಾರ ಮಾಡಿದ ವಾಹನದಲ್ಲಿ ಗೋಪುರದ
ಕಳಸ ಹೊತ್ತು ಹಾಗೂ ಜ್ಞಾನ ಜ್ಯೋತಿ ಶ್ರೀ ಗುರು ಗ್ಯಾನಪಯ್ಯ ನವರುಮೂತಿ೯ ಜೊತೆಗೆ ಭಜನಾ ಮಂಡಳಿಗಳು, ಡೊಳ್ಳು ಕುಣಿತ ಹಾಗೂ ವಿವಿಧ ಕಲಾತಂಡಗಳ ಮಂಗಳವಾದ್ಯಗಳೊಂದಿಗೆ ಅದ್ದೂರಿ ಮುದಗಲ್ಲ ನ ಪ್ರಮುಖ ರಸ್ತೆಯ ಮುಖಾಂತರ ವಾಗಿ ನಡೆಯಿತು.

ಧಾರ್ಮಿಕ ಶ್ರದ್ಧೆ: ಈ ಸಂದರ್ಭ ದಲ್ಲಿ ಶ್ರೀ ಗುರು ಗ್ಯಾನಪಯ್ಯ ನವರ (ಜ್ಞಾನಜ್ಯೋತಿ) ನೂತನವಾದ ಮೂತಿ೯ ಹಾಗೂ ಕಳಸಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ದೇವಸ್ಥಾನ ದಲ್ಲಿ ಸಾರ್ವಜನಿಕ ಅನ್ನ ದಾಸೋಹ ಕಾರ್ಯಕ್ರಮಗಳು ದೇವಸ್ಥಾನ ದಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸಿದ್ದಯ್ಯ ಸ್ವಾಮಿ,ಅಮರಪ್ಪ ಮುರಡಿ,ಗ್ಯಾನಪ್ಪ ಮುರಡಿ,ನಂದಪ್ಪ ಕತ್ತಿ,ರಾಘಣ್ಣ ಬಿಲ್ಲಿ,ಹನುಮಂತ ಕನ್ನಾಸಾವಿ, ಪರಮಣ್ಣ, ಪರಸಪ್ಪ ಮೇಗಳಪೇಟೆ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವರದಿ:-ಮಂಜುನಾಥ ಕುಂಬಾರ