ಮುದಗಲ್ಲ ವರದಿ..
ಮುದಗಲ್ಲ :-ನಾರಾಯಣ ಗುರು-ಚಂದಯ್ಯ ಜಯಂತಿ ಅರ್ಥಪೂರ್ಣ ಆಚರಣೆ..

ಮುದಗಲ್ಲ :-ನಾರಾಯಣಗುರು ಜಯಂತಿ ಹಾಗೂ ನುಲಿಯ ಚಂದಯ್ಯ ಜಯಂತಿ ಸರಳವಾಗಿ ಪುರಸಭೆ ವತಿಯಿಂದ ಆಚರಣೆ ಮಾಡ ಲಾಯಿತು ಪುರಸಭೆ ಸಿಬ್ಬಂದಿ ಚನ್ನಮ್ಮ ಅವರು ಭಾವಚಿತ್ರ ಪೂಜೆ ಸಲ್ಲಿಸಿದ್ದರು

ನಾರಾಯಣಗುರು ಹಾಗೂ ನೂಲಿ ಚಂದಯ್ಯ ಅವರ ಸ್ವಾಭಿಮಾನ ದಿಂದ ಬದುಕು ನಡೆಸಿದವರು. ಅವರ ವಚನಗಳಲ್ಲಿಯೂ ಅವರ ಸ್ವಾಭಿಮಾನದ ಕುರಿತು ನಾವು ನೋಡಬಹುದುಇವರ ವ್ಯಕ್ತಿತ್ವ, ಸಂಸ್ಕಾರವನ್ನು ಪ್ರತಿಯೊಬ್ಬರೂ ಅನುಸರಿಸಬೇಕು” ಎಂದು ಮುಖ್ಯಾಧಿಕಾರಿ ಪ್ರವೀಣ್ ಬೋಗರಾ ಅವರು . ಕಾಯಕ ಯೋಗಿ ಶಿವಶರಣ ನುಲಿಯ ಚಂದಯ್ಯ ಹಾಗೂ ನಾರಾಯಣ ಗುರು ಜಯಂತಿ ಮಾತನಾಡಿದರು.

ನೂಲಿ ಚಂದಯ್ಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದಹನುಮಂತ ಭಜಂತ್ರಿ ಮಾತನಾಡಿ, “ನೂಲಿ ಚಂದಯ್ಯ ತಳಸಮುದಾಯದಲ್ಲಿ ಹುಟ್ಟಿ ಶ್ರೇಷ್ಠ ವಚನಗಳನ್ನು ರಚಿಸಿ ಸಮಾಜದ ಕಣ್ಣಡಿಯಾಗಿದ್ದಾರೆ. ಇವರು ಒಟ್ಟು 48 ವಚನಗಳನ್ನು ರಚಿಸಿದ್ದು, ಅವುಗಳೆಲ್ಲವೂ ಸಮಾಜವನ್ನು ತಿದ್ದುವ, ಎಚ್ಚರಿಸುವ ವಚನಗಳಾಗಿವೆ.ಚಂದಯ್ಯನ ವಚನ್ನಗಳನ್ನು ನಿತ್ಯ ಪಠಿಸಬೇಕು. ವಚನಗಳ ಸಾರವನ್ನು ಅರಿಯಬೇಕು. ಆಗ ಮಾತ್ರ ನೂಲಿ ಚಂದಯ್ಯ ಜಯಂತಿ ಮಾಡಿದ್ದು ಸಾರ್ಥಕವಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮ್ಯಾನೇಜರ್ ಜಗದೀಶ ,ಕಂದಾಯ ವಿಭಾಗದ ಅಂತೋಣಿ ರಾಜ್ ,ಚನ್ನಮ್ಮ ಹಾಗೂ ಮುಖಂರಾದ ತಮ್ಮಣ್ಣ ಗುತ್ತಿದಾರ, ಖದೀರ್ ಪಾನ್ ವಾಲೆ, ಹುಸೇನ್ ಮುನ್ನ , ನೂಲಿ ಚಂದಯ್ಯ ಭಜಂತ್ರಿ, ಹನುಮಂತ ಭಜಂತ್ರಿ , ಬಸವರಾಜ್ ಭಜಂತ್ರಿ ಸದಸ್ಯರಾದ ಗಂಗಪ್ಪ ಭಜಂತ್ರಿ ಮೌನೇಶ್ ಭಜಂತ್ರಿ ಶಿವಕುಮಾರ್ ತಲೆಕಾನ್ ಭಜಂತ್ರಿ ಹನುಮಂತ ಭಜಂತ್ರಿ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ