You are currently viewing BREAKING : ಕುಕನೂರು | ವಿಡಿಯೋ | ಇಸ್ಲಾಂ ಧರ್ಮವು ಇತರ ಧರ್ಮಗಳಿಗಿಂತ ಶ್ರೇಷ್ಠ : ಸಚಿವ ಬಸವರಾಜ ರಾಯರೆಡ್ಡಿ!  

BREAKING : ಕುಕನೂರು | ವಿಡಿಯೋ | ಇಸ್ಲಾಂ ಧರ್ಮವು ಇತರ ಧರ್ಮಗಳಿಗಿಂತ ಶ್ರೇಷ್ಠ : ಸಚಿವ ಬಸವರಾಜ ರಾಯರೆಡ್ಡಿ!  

BREAKING : ಇಸ್ಲಾಂ ಧರ್ಮವು ಇತರ ಧರ್ಮಗಳಿಗಿಂತ ಶ್ರೇಷ್ಠ : ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ! 

PV NEWS ಕನ್ನಡ 24×7

ಕುಕನೂರು, ಆ. 30 : ಇಸ್ಲಾಂ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಹಲವರು ತಪ್ಪು ಗ್ರಹಿಕೆಗಳನ್ನು ಇಟ್ಟುಕೊಂಡಿದ್ದಾರೆ. ಇಸ್ಲಾಂ ಧರ್ಮವು ಇತರ ಧರ್ಮಗಳಿಗಿಂತ ವಿಶಿಷ್ಟತೆ ಹಾಗೂ ಶ್ರೇಷ್ಠತೆಯನ್ನು ಹೊಂದಿದೆ ಎಂದು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಹೇಳಿದರು.

ಇಂದು ಕುಕನೂರು ಪಟ್ಟಣದಲ್ಲಿ ಮಹಮ್ಮದ್ ಪೈಗಂಬರ್ ರವರ ಜಯಂತಿಯ ಪ್ರಯುಕ್ತ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹದ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ‘ಇಸ್ಲಾಂ ಧರ್ಮದ ಕುರಿತು ಮಾತನಾಡಿದ ಅವರು, ಇಸ್ಲಾಂ ಬಗ್ಗೆ ಸಮಗ್ರವಾದ ತಿಳುವಳಿಕೆ ಇಲ್ಲದೆ ಅನೇಕರು ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದಾರೆ. ಇಸ್ಲಾಂ ಧರ್ಮವು ತನ್ನದೇ ಆದ ವಿಶಿಷ್ಟ ತತ್ವಗಳು ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಿದರು.

ತಾವು ದೇವಾಲಯಗಳು ಅಥವಾ ಮಠ–ಮಾನ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡದಿದ್ದರೂ, ವಿವಿಧ ಧರ್ಮಗಳ ತತ್ವಗಳು, ಧಾರ್ಮಿಕ ಪರಂಪರೆ ಹಾಗೂ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿರುವುದಾಗಿ ರಾಯರೆಡ್ಡಿ ತಿಳಿಸಿದರು. ಧರ್ಮವನ್ನು ಅರ್ಥಮಾಡಿಕೊಳ್ಳಲು ಅದರ ಮೂಲ ತತ್ವಗಳು ಮತ್ತು ಐತಿಹಾಸಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು.

ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಯಹೂದಿ ಧರ್ಮಗಳನ್ನು ಸಾಮಾನ್ಯವಾಗಿ ‘ಅಬ್ರಹಾಮಿಕ್ ಧರ್ಮಗಳು’ ಎಂದು ಕರೆಯಲಾಗುತ್ತದೆ. ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಅವರ ಪರಂಪರೆಯೊಂದಿಗೆ ಸಂಬಂಧ ಹೊಂದಿರುವ ಈ ಧರ್ಮಗಳಲ್ಲಿ ಏಕದೇವೋಪಾಸನೆಯ ತತ್ವ ಪ್ರಮುಖವಾಗಿದೆ ಎಂದು ಅವರು ವಿವರಿಸಿದರು.

ಇಸ್ಲಾಂ ಧರ್ಮದಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರನ್ನು ಕೊನೆಯ ಪ್ರವಾದಿಯಾಗಿ ಸ್ವೀಕರಿಸಲಾಗುತ್ತದೆ. ಅಲ್ಲಾಹ್‌ಗೆ ನಿರ್ದಿಷ್ಟ ರೂಪ ಅಥವಾ ಆಕಾರವಿಲ್ಲ ಎಂಬುದು ಇಸ್ಲಾಂ ಧರ್ಮದ ದೇವರ ಕಲ್ಪನೆಯ ಪ್ರಮುಖ ಅಂಶವಾಗಿದೆ. ದೇವರಿಗೆ ಸಂತಾನ ಅಥವಾ ಮಕ್ಕಳು ಇಲ್ಲ ಎಂಬ ತತ್ವವನ್ನೂ ಇಸ್ಲಾಂ ಪ್ರತಿಪಾದಿಸುತ್ತದೆ ಎಂದು ರಾಯರೆಡ್ಡಿ ತಮ್ಮ ಭಾಷಣದಲ್ಲಿ ವಿವರಿಸಿದರು.

ವಿವಿಧ ಧರ್ಮಗಳ ಬಗ್ಗೆ ಪೂರ್ವಗ್ರಹಗಳ ಬದಲಾಗಿ ಅವುಗಳ ತತ್ವ, ಇತಿಹಾಸ ಮತ್ತು ಮೂಲ ಆಶಯಗಳನ್ನು ತಿಳಿದುಕೊಳ್ಳುವ ಮೂಲಕ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಅವರ ಮಾತುಗಳು ಸಾರಿವೆ ಎಂದರು.

Prajavikshane

Chandru R Bhanapaur

Leave a Reply

error: Content is protected !!