ಮುದಗಲ್ಲ :- ಶ್ರೀ ವಿನಾಯಕ ಗೆಳೆಯರ ಬಳಗ ಪೆಟ್ರೋಲ್ ಬಂಕ್ ಜನತಾ ಕಾಲೋನಿನಲ್ಲಿ ಗಣೇಶ ಪ್ರತಿಷ್ಠಾಪನೆ, ವಿಶೇಷ ಪೂಜೆ..
ಮುದಗಲ್ಲ :-ಜನತಾ ಕಾಲೋನಿಯ ಶ್ರೀ ವಿನಾಯಕ ಗೆಳೆಯರ
ಮಂಡಲ್ ವತಿಯಿಂದ ಗಣೇಶೋತ್ಸವದ ಸಂಭ್ರಮವು ಅತ್ಯಂತ ವಿಜೃಂಭಣೆಯಿಂದ ಪ್ರಾರಂಭವಾಯಿತು. ಉತ್ಸವದ ಮೊದಲ ದಿನವಾದ ಇಂದು ಬೃಹತ್ ಹಾಗೂ ಆಕರ್ಷಕ ಗಾತ್ರದ ಗಣಪತಿಯನ್ನು ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಿ, ವಿಶಿಷ್ಟ ಪೂಜೆಗಳನ್ನು ನೆರವೇರಿಸಲಾಯಿತು.

ಮಂಡಳದಿಂದ ಪ್ರತಿಷ್ಠಾಪಿಸಿರುವ ಈ ಬೃಹತ್ ಗಾತ್ರದ ಗಣಪತಿಯು ಕಣ್ಣಿಗೆ ಆಕರ್ಷಕವಾಗಿ ಕಾಣುತ್ತಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಅದ್ಭುತ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಮಧ್ಯಮ 1:00 ಗಂಟೆಗೆ ಗಣೇಶನ ಮೂರನೇ ದಿನದ ಧಾರ್ಮಿಕ
ಪೂಜಾ ವಿಧಿವಿಧಾನಗಳು ಆರಂಭಗೊಂಡು ಭಕ್ತಿಭಾವದಿಂದ
ನೆರವೇರಿದವು. ಪೂಜೆಯ ನಂತರ ಆಗಮಿಸಿದ ಭಕ್ತಾದಿಗಳಿಗೆ
ಅನ್ನದಾಸೋಹವನ್ನು ಸಮರ್ಪಿಸಲಾಯಿತು. ಉತ್ಸವದ
ಮುಂದುವರಿದ ಭಾಗವಾಗಿ, ಇನ್ನುಳಿದ ಐದು ದಿನಗಳ ಕಾಲ
ಪ್ರತಿದಿನ ಸಂಜೆ ವಿಶೇಷ ಪೂಜೆಯ ನಂತರ ಭಕ್ತರಿಗೆ ಪ್ರಸಾದ
ವಿತರಣೆ ಮಾಡಲು ಕಮಿಟಿಯ ಸದಸ್ಯರು ಸರ್ವಾನುಮತದಿಂದ
ತೀರ್ಮಾನ ಕೈಗೊಂಡಿದ್ದಾರೆ.
ಐತಿಹಾಸಿಕ ಮುದಗಲ್ಲ ಪಟ್ಟಣದ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿಘ್ನಹರ್ತ ಶ್ರೀ ಗಣೇಶನ ಆಶೀರ್ವಾದ ಪಡೆದುಕೊಳ್ಳಬೇಕಾಗಿ
ಶ್ರೀ ವಿನಾಯಕ ಗೆಳೆಯರ ಬಳಗ ಪೆಟ್ರೋಲ್ ಬಂಕ್ ಮಂಡಲದ
ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಹಾರ್ದಿಕವಾಗಿ ಆಹ್ವಾನಿಸಿದ್ದಾರೆ
ಈ ಸಂದರ್ಭದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ ಪೆಟ್ರೋಲ್ ಬಂಕ್ ಸಮಿತಿಯ ಸದಸ್ಯರಾದ
ಆಕಾಶ, ಪರಶುರಾಮ, ರವಿ, ಸಂತೋಷ , ಪ್ರದೀಪ್, ಜಡೇಜಾ, ಸುನೀಲ್ ಕುಮಾರ್, ಆನಂದ, ಹನುಮಂತ ನೀರಾವರಿ, ಕೃಷ್ಣ ಚಲುವಾದಿ,ಉಪಸ್ಥಿತರಿದ್ದರು
ವರದಿ:-ಮಂಜುನಾಥ ಕುಂಬಾರ