ಮುದಗಲ್ಲ ವರದಿ..
ಮುದಗಲ್ಲ :-ಸಂಭ್ರಮದ ಗಣೇಶ ವಿಸರ್ಜನೆ, ಭವ್ಯ ಮೆರವಣಿಗೆ…

ಮುದಗಲ್ಲ ಪಟ್ಟಣದಲ್ಲಿ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.
ವಿವಿಧ ವಾಡ೯ಗಳಲ್ಲಿ ಹಾಗೂ ಸಂಘ–ಸಂಸ್ಥೆಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಭಕ್ತರು ಮೆರವಣಿಗೆಯ ಮೂಲಕ ಕೊಂಡೊಯ್ದು ಭಕ್ತಿ, ಸಂಭ್ರಮದೊಂದಿಗೆ ಪಟ್ಟಣ ಪುರಸಭೆ ನಿಗದಿ ಪಡಿಸಿದ ಸ್ಥಳದಲ್ಲಿ ವಿಸರ್ಜನೆ ಮಾಡಿದರು .

ಗಣೇಶ ಮೂರ್ತಿಗಳ ಮೆರವಣಿಗೆ ಸಾಗಿದ ಪ್ರಮುಖ ರಸ್ತೆಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿನದಾಗಿತ್ತು. ಡಿ.ಜೆ ಸಾಂಗ್ , ಡೊಳ್ಳು, ತಮಟೆ ಹಾಗೂ ವಿವಿಧ ವಾದ್ಯಗಳ ಸದ್ದು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಯುವಕರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಮಹಿಳೆಯರು ಮತ್ತು ಹಿರಿಯರೂ ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯುದ್ದಕ್ಕೂ ‘ಗಣಪತಿ ಬಪ್ಪಾ ಮೋರಿಯಾ’ ಸೇರಿದಂತೆ ವಿವಿಧ ಘೋಷಣೆಗಳು ಮೊಳಗಿದವು ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನೂ ಆಯೋಜಿಸಲಾಗಿತ್ತು. ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್ ಮಾಡಗೇರಿ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಮೆರವಣಿಗೆಯ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿ ಸಲಾಯಿತು.

ಐದು ದಿನಗಳ ಕಾಲ ಭಕ್ತಿ–ಶ್ರದ್ಧೆಯಿಂದ ಪೂಜಿಸಲ್ಪಟ್ಟ ವಿಘ್ನೇಶ್ವರನಿಗೆ ಅಂತಿಮ ಪೂಜೆ ಸಲ್ಲಿಸಿದ ಭಕ್ತರು ಪ್ರಾರ್ಥಿಸಿ ಭಾವಪೂರ್ಣವಾಗಿ ಬೀಳ್ಕೊಟ್ಟರು. ವಿಸರ್ಜನಾ ಮೆರವಣಿಗೆಯು ಪಟ್ಟಣ ದಾದ್ಯಂತ ಹಬ್ಬದ ವಾತಾವರಣ ಮೂಡಿಸಿತು.ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಶೇಷ ಅಂದ್ರೆ ಶ್ರೀ ಮುದಗಲ್ಲ :- ಶ್ರೀ ವಿನಾಯಕ ಗೆಳೆಯರ ಬಳಗ ಪೆಟ್ರೋಲ್ ಬಂಕ್ ಜನತಾ ಕಾಲೋನಿನಲ್ಲಿ ಗಣೇಶ ಮಂಡಳಿ ವತಿಯಿಂದ ಪುರಸಭೆ ಮಾಜಿ ಉಪಾಧ್ಯಕ್ಷರಾದ ಅಜ್ಮೀರ್ ಬೆಳ್ಳಿಕಟ್ ಹಾಗೂ ಸಂಜೆ ವಾಣಿ ದಿನಪತ್ರಿಕೆ ವರದಿಗಾರಾದ ಮಂಜುನಾಥ ಕುಂಬಾರ ಹಾಗೂ ಗಣೇಶ ಮಂಡಳಿಯ ಗಣ್ಯರಿಗೆ ಸನ್ಮಾನಿ ಸಲಾಯಿತು ಗಣೇಶ ವಿಸರ್ಜನಾ ಕಾರ್ಯಕ್ರಮವು ಶಾಂತಿಯುತ ವಾಗಿ ಸಂಪನ್ನಗೊಂಡಿತು

ವರದಿ:ಮಂಜುನಾಥ ಕುಂಬಾರ