ಮುದಗಲ್ಲ ವರದಿ
ಮುದಗಲ್ಲ:- ಪ್ರೇಕ್ಷಕರ ಮನಸೆಳೆದ ಮಿಮಿಕ್ರಿ..

ಮುದಗಲ್ : ದಸರಾ ಅಂಗವಾಗಿ ಪಟ್ಟಣದಲ್ಲಿ ಮಿಮಿಕ್ರಿ
ಕಲಾವಿದ ಗೋಪಿ ಹಾಗೂ ಇಂದುಮತಿ ಸಾಲಿಮಠ ಅವರ ತಂಡ ನೀಡಿದ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು…

ಮುದಗಲ್ಲ :-ಪಟ್ಟಣದ ಚಾವಡಿ ಕಟ್ಟೆ ಹತ್ತಿರ 2 ನೇ ವರ್ಷದ,
ದಸರಾ ಮಹೋತ್ಸವ ಅಂಗವಾಗಿ
ಸಾಂಸ್ಕೃತಿಕ ಕಾರ್ಯಕ್ರಮ 2ನೇ ದಿನದಂದು ಮಿಮಿಕ್ರಿ
ಕಲಾವಿದ ಗೋಪಿ ಹಾಗೂ ಇಂದುಮತಿ ಸಾಲಿಮಠ ಅವರ ತಂಡ ನೀಡಿದ ಪ್ರದರ್ಶನ ನಡೆಯಿತು

ಕಾಯ೯ಕ್ರಮದಲ್ಲಿ ಲಿಂಗಸಗೂರು ಶಾಸಕರಾದ ಮಾನಪ್ಪ ವಜ್ಜಲ್, ಮಾಜಿ ಶಾಸಕರಾದ ಡಿ. ಎಸ್ ಹುಲಿಗೇರಿ ಅವರು ಮುದಗಲ್ಲ ದಸರಾ ಮಹೋತ್ಸವ ಕುರಿತು ಮಾತನಾಡಿದ್ದರು ಹಾಗೂ ಮುದಗಲ್ಲ ನ ಜನತೆಗೆ ದಸರಾ ಶುಭಾಶಯಗಳು ಕೋರಿದ್ದರು

ಹೌದು, ಮುದಗಲ್ಲ 2ನೇ ವಷ೯ದ ದಸರಾ ಮಹೋತ್ಸವದ ಅಂಗವಾಗಿ ಅದ್ದೂರಿ ಮಿಮಿಕ್ರಿ ಕಾರ್ಯಕ್ರಮಗಳು ನಡೆಯಿತು
ಈ ಬಾರಿಯ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಖ್ಯಾತ ಮಿಮಿಕ್ರಿ ಕಲಾವಿದರಾದ ಮಿಮಿಕ್ರಿ ಗೋಪಿ ಅವರು ಹಾಗೂ ಇಂದುಮತಿ ಸಾಲಿಮಠ ಅವರ ತಂಡದವರು ಅವರ ಜನಪ್ರಿಯ ಡೈಲಾಗ್ಗಳನ್ನು ತಮ್ಮದೇ ಶೈಲಿಯಲ್ಲಿ ನಕಲು ಮಾಡಿ ನೆರೆದಿದ್ದ ಜನರನ್ನು ನಕ್ಕು ನಗಿಸಿದರು. ಇವರ ಅದ್ಭುತ ಟೈಮಿಂಗ್ಸ್ ಮತ್ತು ಹಾವಭಾವಗಳು ದಸರಾ ಕಾರ್ಯಕ್ರಮದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು.

ತಂಡದ ಸದಸ್ಯರು ಹಾಸ್ಯ, ಮಹಾದೇವ ಸತ್ತಿಗೇರಿ,ಶರಣು ಯಮನೂರು ಅವರು ಪ್ರದರ್ಶನವನ್ನೂ ಮಾಡಿದರು.

ಗೋಪಿಯವರು : ನಟರಾದ ಧೀರೇಂದ್ರ ಗೋಪಾಲ್, ಪ್ರಭಾಕರ್ ಹಾಗೂ ಸುಧೀರ್ ಅವರ ನಡುವಿನ ಸಂಭಾಷಣೆಯನ್ನು ಅನುಕರಿಸುತ್ತಾ ಮಾತು ಆರಂಭಿಸಿದ ಗೋಪಿ ಅವರು 2 ಗಂಟೆಗಳ ಕಾಲ ಕನ್ನಡ ಚಿತ್ರರಂಗದ ಖ್ಯಾತ ನಟರು ಹಾಗೂ ರಾಜಕೀಯ ಮುಖಂಡರ ಧ್ವನಿಗಳಲ್ಲಿ ಮಾತನಾಡಿ ಪ್ರೇಕ್ಷಕರನ್ನು ರಂಜಿಸಿದರು.

ಮಹಾದೇವ ಸತ್ತಿಗೇರಿ:-
ಹಿರಿಯ ನಟರಾದ ಬಾಲಕೃಷ್ಣ, ಎನ್.ಎಸ್.ರಾವ್, ದೊಡ್ಡಣ್ಣ, ಟೆನ್ನಿಸ್ ಕೃಷ್ಣ, ಅಂಬರೀಷ್, ಡಾ.ವಿಷ್ಣುವರ್ಧನ್, ಡಾ.ರಾಜಕುಮಾರ್, ಶಂಕರ್ ನಾಗ್, ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಸುದೀಪ್ ಹಾಗೂ ಯುವ ನಟ ಯಶ್ ಅವರ ಧ್ವನಿಗಳನ್ನು ಮಿಮಿಕ್ರಿ ಮಾಡಿ ಚಪ್ಪಾಳೆ ಗಿಟ್ಟಿಸಿದರು.

ಶರಣು ಯಮನೂರು ಅವರು :-ವಿಷ್ಣುವರ್ಧನ್ ಧ್ವನಿಯಲ್ಲಿ ರೈತರ ಸಮಸ್ಯೆಗಳನ್ನು ಬಿಚ್ಚಿಟ್ಟ ಅವರು, ರೈತರ ಕಷ್ಟಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ರಾಜಕುಮಾರ್ ಅವರ ಧ್ವನಿಯಲ್ಲಿ ಹುಟ್ಟೂರಿನ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದರು. ನಗೆಗಡಲಲ್ಲಿ ತೇಲಿಸಿದ ರಾಜಕಾರಣಿಗಳ ಧ್ವನಿ: ಗೋಪಿ ಅವರು ರಾಜಕಾರಣಿಗಳ ಧ್ವನಿಯನ್ನು ಅನುಕರಿಸಿದ್ದು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಯಿತು.

ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ, ವಾಟಾಳ್ ನಾಗರಾಜ್ ಹಾಗೂ ನರೇಂದ್ರ ಮೋದಿ ಅವರ ಧ್ವನಿಗಳನ್ನು ಹೊರ ಹೊಮ್ಮಿಸುತ್ತಿದ್ದರೇ, ಪ್ರೇಕ್ಷಕರು ಚಪ್ಪಾಳೆಯ ಮಳೆಯನ್ನೇ ಹರಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿರುವ ಭಾಷಾ ಶೈಲಿ, ಉಚ್ಚಾರಣೆಯನ್ನು ಪ್ರಸ್ತಾಪಿಸಿದ ಅವರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಶೈಲಿಯಲ್ಲಿ ಮಾತನಾಡಿದರು.

ರಾಘವೇಂದ್ರ ಕುದರಿ ಅವರು ಕಾರ್ಯಕ್ರಮ ನಿರೂಪಿಸಿದರು. ಜನಮೆಚ್ಚಿದ ನೃತ್ಯಗಳು ಜನಮೆಚ್ಚಿದ ನೃತ್ಯಗಳನ್ನು ಸ್ಥಳೀಯ ಎಸ್. ಪಿ ಅಕಾಡಮಿವಿ ದ್ಯಾರ್ಥಿಗಳ ನೃತ್ಯಗಳು, ಕೂಡ ಪ್ರೇಕ್ಷಕರ ಗಮನಸೆಳೆಯಿತು.
ಈ ಸಂದರ್ಭದಲ್ಲಿ ದಸರಾ ಸಮಿತಿಯ ಸದಸ್ಯರು ಹಾಗೂ ಸಹಸ್ರಾರು ಪ್ರೇಕ್ಷಕರು ಉಪಸ್ಥಿತರಿದ್ದರು..
ವರದಿ :ಮಂಜುನಾಥ ಕುಂಬಾರ