Post Views: 108
ಮುದಗಲ್ಲ ವರದಿ..
ಮುದಗಲ ದಸರಾ ಆರಂಭ : ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ..

ಮುದಗಲ್ಲ :-ಪಟ್ಟಣದ ಚಾವಡಿ ಕಟ್ಟೆ ಹತ್ತಿರ 2ನೇ ವರ್ಷದ, ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಅ18 ರಂದು ಸಂಜೆ ನಡೆಯಿತು ಜಾನಪದ ಸಂಭ್ರಮ ಕಾರ್ಯ ಕ್ರಮ ಉದ್ಘಾಟನೆ ಮಾಡಿದ ಗಣ್ಯರಾದ ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ್, ಸಿದ್ರಾಮಪ್ಪ ಸಾಹುಕಾರ್, ಶರಣಬಸವ ವ್ಯಾಕರನಾಳ ಮತ್ತು ಮುದಗಲ್ ಪೊಲೀಸ್ ಠಾಣೆಯ ಪಿಎಸ್ಐ ವೆಂಕಟೇಶ ಮಾಡಗಿರಿ,ಜಾನಪದ ಕವಿ ಗುರುರಾಜ ಹೊಸಕೋಟೆ, ಅವರು ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡದ ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ್ ಅವರು ಸಂಸ್ಕೃತಿ ಜನರ ಮನಸ್ಸನ್ನು ಉಲ್ಲಾಸ ಉಳಿಸುವುದರ ಜೊತೆಗೆ ಮಾನವೀಯ ಸಂಬಂಧವನ್ನು ಬೆಸೆಯುತ್ತದೆ ಎಂದು ಹೇಳಿದರು

ಮಲ್ಲಿಕಾರ್ಜುನ ಗೌಡರ (ಶಿಕ್ಷಕರು) ಕಾಯ೯ಕ್ರಮ ನಿರೂಪಣೆ ಮಾಡಿದ್ದರು
ಈ ಸಂಬಂಧದಲ್ಲಿ ಮಾಹಾಂತೇಶ ಪಾಟೀಲ್,ಶ್ರೀನಿವಾಸ ಕಂಪ್ಲಿ,,ನಂದಪ್ಪ ಕತ್ತಿ, ವೆಂಕಟೇಶ್ ಹೀರೇಮನಿ ,ರಾಘವೇಂದ್ರ ಕುದರಿ, ಸಂತೋಷ ಸುರಪುರ, ರಾಮು ಯಾದವ್, ಗ್ಸಾನಪ್ಪ ಹೊಳ್ಯಾಚಿ, ಮಾಹಾಂತೇಶ ಅಕ್ಷತಿ ಮಂಜುನಾಥ ಬನ್ನಿಗೋಳಕರ್ ,ಮಲ್ಲಪ್ಪ ಹೂಗಾರ, ವೀರಭದ್ರಪ್ಪ ಕೊಳ್ಳ, ಮಲ್ಲಪ್ಪ ಮಾಟೂರ, ಉಪಸ್ಥಿತರಿದ್ದರು
ವರದಿ :ಮಂಜುನಾಥ ಕುಂಬಾರ