ರಾಯರಡ್ಡಿಯವರಿಗೆ ಡಿಸಿಎಂ ಜೊತೆಗೆ ಹಣಕಾಸು ಖಾತೆ ನೀಡಿವಂತೆ : ಡಾ. ಮಲ್ಲಿಕಾರ್ಜುನ ಬಿನ್ನಾಳ ಒತ್ತಾಯ

ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ ರಾಯಡ್ಡಿಯವರಿಗೆ ಡಿಸಿಎಂ ನೀಡಬೇಕು ಅದರ ಜೊತೆಗೆ ಹಣಕಾಸು ಖಾತೆಯನ್ನು ನೀಡಬೇಕೆಂದು ಪಟ್ಟಣದಲ್ಲಿ ಕುಕನೂರು ತಾಲೂಕ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದ ಡಾ. ಮಲ್ಲಿಕಾರ್ಜುನ ಬಿನ್ನಾಳ ಒತ್ತಾಯ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು ೨೦೨೩ರ ಕರ್ನಾಟಕ ವಿಧಾನಸಭಾ ಚುನಾಚಣೆ ಮುಗಿದು ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಆಯ್ಕೆಯಾಗಿರುವುದು ಸಂತೋಷದ ವಿಷಯ.
ಅದರ ಜೊತೆಗೆ ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾದ ಮೂರು ಜನ ಶಾಸಕರ ಪೈಕಿ ಯಲಬುರ್ಗಾ ಕ್ಷೇತ್ರದ ಬಸವರಾಜ ರಾಯರಡ್ಡಿರವರು ಒಬ್ಬ ಅನುಭವಿ ರಾಜಕಾರಣಿಯಾಗಿದ್ದಾರೆ. ಅಲ್ಲದೇ ಅವರು ೬ ಬಾರಿ ಶಾಸಕರಾಗಿ, ಒಂದು ಸಲ ಲೋಕ ಸಭಾ ಸದಸ್ಯರಾಗಿ, ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಅಲ್ಲದೇ ವಸತಿ ಸಚಿವರಾಗಿ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ರಾಜ್ಯಕ್ಕೆ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಕುಕನೂರು ಪಟ್ಟಣಕ್ಕೆ ಆಗಮಿಸಿ ಸಂದರ್ಭದಲ್ಲಿ ಬಸವರಾಜ ರಾಯರಡ್ಡಿ ಹಣಕಾಸಿನಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಿದ್ದಾನೆ ಎಂದು ಸಿದ್ದರಾಮಯ್ಯನವರೇ ಹೇಳಿರುತ್ತಾರೆ. ಆದ್ದರಿಂದ ಬಸವರಾಜ ರಾಯರಡ್ಡಿಯವರಿಗೆ ಡಿಸಿಎಂ ಸ್ಥಾನದ ಜೊತೆಗೆ ಹಣಕಾಸು ಖಾತೆಯನ್ನು ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದು ಹೇಳಿದರು.

Leave a Reply

error: Content is protected !!