ಬೆಂಗಳೂರು : ರಾಜಧಾನಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಅಕ್ರಮ ಸಾಗಾಟ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಇದೀಗ ಹದ್ದಿನ ಕಣ್ಣನ್ನು ಇಟ್ಟಿದೆ. ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಈವರೆಗೆ ಬರೋಬ್ಬರಿ 117 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಪೊಲೀಸ್ ಇಲಾಖೆಯು, ಬೆಂಗಳೂರಿನ ವಿವಿಧೆಡೆ 6,261 ಕೆಜಿಯ ರೂ.117 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಲಾಗಿದೆ ಎಂದು ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿನ ವಿವಿಧ ಠಾಣೆಗಳಲ್ಲಿ ಈವರೆಗೆ 6,191 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, 117 ಕೋಟಿ ರೂ ಮೌಲ್ಯದ 6,261 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಅದೇ ರೀತಿಯಲ್ಲಿ ಬೆಂಗಳೂರಿನಲ್ಲಿ ಕಳೆದ ಒಂದು ವರ್ಷದಲ್ಲಿ 7,723 ಭಾರತೀಯರು, 159 ವಿದೇಶಿ ಪ್ರಜೆಗಳನ್ನು ಡ್ರಗ್ಸ್ ದಂಧೆಯಲ್ಲಿ ಬಂಧಿಸಲಾಗಿದೆ. ಅದು ಅಲ್ಲದೇ ವಿವಿಧ ಠಾಣೆಗಳಲ್ಲಿ 943 ಡ್ರಗ್ ಪೆಡ್ಲರ್ ವಿರುದ್ಧ ಕೇಸ್, 5248 ಮಂದಿ ವಿರುದ್ಧ ಡ್ರಗ್ ಸೇವನೆ ಕೇಸ್ ಗಳನ್ನು ದಾಖಲಾಗಿದೆ.