ಬೆಂಗಳೂರು : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪ್ರಸ್ತುತ ಪುನರ್ವಸತಿಯಲ್ಲಿರುವ ಟೀಮ್ ಇಂಡಿಯಾದ ಐದು ಜನ ಸ್ಟಾರ್ ಆಟಗಾರರ ಕುರಿತು ವೈದ್ಯಕೀಯ ಪರೀಕ್ಷೆಯ ಬಿಗ್ ಅಪ್‌ಡೇಟ್ ದೊರೆತ್ತಿದ್ದು, ಸ್ಟಾರ್ ಬೌಲರ್ಸ್ ಆದ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಹಾಗೂ ಸ್ಟಾರ್ ಬ್ಯಾಟರ್‌ಗಳಾದ ಕೆಎಲ್ ರಾಹುಲ್ ಮತ್ತು ಶ್ರೀ ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಅವರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವೈದ್ಯಕೀಯವು ಪರೀಕ್ಷೆಯ ವರದಿ ನೀಡಿದೆ.
ಸ್ಟಾರ್ ಬೌಲರ್ಸ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಂತಿಮ ಫಿಟ್ನೆಸ್ ಹಂತದಲ್ಲಿದ್ದಾರೆ ಅವರಿಬ್ಬರು ಈಗಾಗಲೇ ನೆಟ್ಸ್‌ನಲ್ಲಿ ಭರ್ಜರಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದು, ಈಗ ಕೆಲವು ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ. ಈ ಪಂದ್ಯಗಳನ್ನು NCA ಆಯೋಜಿಸುತ್ತದೆ. ಬಿಸಿಸಿಐ ವೈದ್ಯಕೀಯ ತಂಡವು ಅವರಿಬ್ಬರ ಫಿಟ್ನೆಸ್‌ಯಿಂದ ಸಂತಸಗೊಂಡಿದೆ. ಅಭ್ಯಾಸ ಪಂದ್ಯಗಳು ಮುಗದ ಬಳಿಕ ಅವರನ್ನು ಮೌಲ್ಯಮಾಪನ ಮಾಡಿದ ಬಳಿಕ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಎನ್‌ಸಿಎ ತಿಳಿಸಿದೆ.
ಅದೇ ರೀತಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ನೇಸ್ ವರದಿ ಹೀಗಿದೆ. ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಈಗಾಗಲೇ ಪುನರಾರಂಭಿಸಿದ್ದಾರೆ. ಇದೀಗ ಅವರಿಬ್ಬರು ಆಟಗಾರರು ಪ್ರಸ್ತುತ ಶಕ್ತಿ ಮತ್ತು ಫಿಟ್‌ನೆಸ್ ಡ್ರಿಲ್‌ಗಳಿಗೆ ಒಳಗಾಗುತ್ತಿದ್ದಾರೆ. ಅವರ ಈ ಪ್ರಗತಿಯಿಂದ ಬಿಸಿಸಿಐ ವೈದ್ಯಕೀಯ ತಂಡವು ಸಂತಸಗೊಂಡಿದೆ. ಮುಂಬರುವ ದಿನಗಳಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯ ಮತ್ತು ಕಂಡೀಷನಿಂಗ್ ಎರಡರಲ್ಲೂ ಅವರನ್ನು ಹೆಚ್ಚು ಗಮನಕೊಡುವುದಕ್ಕೆ ಬಿಸಿಸಿಐ ಸೂಚನೆ ನೀಡಿದೆ.
ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಎನ್‌ಸಿಎಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ಅದರ ಜೊತೆಗೆ ಬ್ಯಾಟಿಂಗ್ ಹಾಗೂ ಕೀಪಿಂಗ್ ನೆಟ್‌ನಲ್ಲಿ ಪ್ರಾರಂಭಿಸಿದ್ದಾರೆ. ಸಾಮರ್ಥ್ಯ, ನಮ್ಯತೆ ಮತ್ತು ಓಟವನ್ನು ಒಳಗೊಂಡಿರುವ ಫಿಟ್‌ನೆಸ್ ಪ್ರೋಗ್ರಾಂ ಅನ್ನು ಅವರು ಪ್ರಸ್ತುತ ಅನುಸರಿಸುತ್ತಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವರದಿ : ಚಂದ್ರು ಆರ್ ಭಾನಾಪೂರ್