BREAKING : ರಾಜ್ಯ ಸರ್ಕಾರದಿಂದ ಗ್ರಾಮೀಣ ಜನರಿಗೆ ಸಿಹಿ ಸುದ್ದಿ..!!

You are currently viewing BREAKING : ರಾಜ್ಯ ಸರ್ಕಾರದಿಂದ ಗ್ರಾಮೀಣ ಜನರಿಗೆ ಸಿಹಿ ಸುದ್ದಿ..!!

ಬೆಂಗಳೂರು : ರಾಜ್ಯ ಸರ್ಕಾರದಿಂದ ಗ್ರಾಮೀಣ ಜನರಿಗೆ ಸಿಹಿ ಸುದ್ದಿ ನೀಡಿದ್ದು, ಈ ಹಿಂದೆ ಜನನ, ಮರಣ ಪ್ರಮಾಣ ಪತ್ರವನ್ನು ಸಂಬಂಧಸಿದ ಕೆಲ ಇಲಾಖೆಯಲ್ಲಿ ನೀಡಲಾಗುತ್ತಿತ್ತು. ಇದೀಗ ಆ ಪದ್ದತಿಯ ತಿಲಾಂಜಲಿ ನೀಡಿರುವ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಗಳ ಕಚೇರಿಗಳಲ್ಲೇ ಜನನ ಮತ್ತು ಮರಣ ನೋಂದಣಿ ಪ್ರಮಾಣ ಪತ್ರಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಿ ಇಂದು ಸರ್ಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಯೋಜನೆ, ಕಾರ್ಯಕ್ರಮವನ್ನು ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದೀಗ ಗ್ರಾಮ ಪಂಚಾಯಿತ್‌ ಕಚೇರಿಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಬಹುದು ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿ ಒಂದೂವರೆ ವರ್ಷದ ಬಳಿಕ ಈ ಬೆಳವಣಿಗೆ ನಡೆದಿದೆ.

ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿ ಬಲಪಡಿಸಲು ಹಾಗೂ ಘಟಿಸುವ ಶೇ.100ರಷ್ಟು ಜನನ, ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಜನನ, ಮರಣ ನೋಂದಣಿ ಅಧಿನಿಯಮ 1969ರ ಪ್ರಕರಣ 7(5)ರನ್ವಯ ಜನನ, ಮರಣ ಘಟನೆಗಳು ಘಟಿಸಿದ ಮೂವತ್ತು ದಿನಗಳವರೆಗೆ ನೋಂದಾಯಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ಇದು ಅಲ್ಲದೇ ಪ್ರಕರಣ 7(1)ರ ಅನ್ವಯ ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳ ಬಳಿಕ ವಿಳಂಬ ನೋಂದಣಿಯಡಿಯಲ್ಲಿ ನೋಂದಾಯಿಸಲು ಗ್ರಾಮ ಲೆಕ್ಕಾಧಿಕಾರಿಗಳನ್ನು ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ವರದಿ : ಚಂದ್ರು ಆರ್‌. ಭಾನಾಪೂರ್‌
(ಮರು ಬರವಣಿಗೆ)

Leave a Reply

error: Content is protected !!