GOOD NEWS : ಚುನಾವಣೆಗೆ ಸ್ಪರ್ಧೆ : ಯುವಕ-ಯುವತಿಯರಿಗೆ ಸಿಹಿ ಸುದ್ದಿ..!

You are currently viewing GOOD NEWS : ಚುನಾವಣೆಗೆ ಸ್ಪರ್ಧೆ : ಯುವಕ-ಯುವತಿಯರಿಗೆ ಸಿಹಿ ಸುದ್ದಿ..!

ನವದೆಹಲಿ : ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸಿನ ಮಿತಿ ಕಡಿಮೆ ಮಾಡಲು ಸಂಸದೀಯ ಸಮಿತಿ ಸಲಹೆ ನೀಡಿದ್ದು, ಇದರಿಂದಾಗಿ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡಿದಂತಾಗುತ್ತದೆ ಎಂದು ಸಂಸದೀಯ ಸಮಿತಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಇನ್ನೂ ಮುಂಬರುವ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿಯನ್ನು 25 ರಿಂದ 18ಕ್ಕೆ ಇಳಿಸಲು ಆಗಸ್ಟ್ 04 (ಶುಕ್ರವಾರ) ಸಂಸದೀಯ ಸಮಿತಿ ಸಲಹೆ ನೀಡಿದೆ. ಬಿಜೆಪಿ ಸದಸ್ಯ ಸುಶೀಲ್ ಮೋದಿ ನೇತೃತ್ವದ ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯಿಂದ ಈ ಬಗ್ಗೆ ಶಿಫಾರಸ್ಸು ಮಾಡಲಾಗಿದೆ.

ಈಗಾಗಲೇ ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮೊದಲಾದ ದೇಶಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರೀಯ ಚುನಾವಣೆಗಳಲ್ಲಿ ನಾಮಪತ್ರ ಕನಿಷ್ಠ ವಯೋಮಿತಿ 18 ವರ್ಷಕ್ಕೆ ಇರಬೇಕು. ಇದರಿಂದ ಯುವಕರು ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡಿದೆ ಎಂದು ಹೇಳಲಾಗಿದೆ.

ನಮ್ಮ ದೇಶದಲ್ಲಿ ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ 25 ವರ್ಷ, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ 30 ವರ್ಷ, ಮತದಾರರಾಗಿ ನೋಂದಾಯಿಸಲು 18 ವರ್ಷ ಆಗಿರಬೇಕು ಎಂಬ ಸಂವಿಧಾನದಲ್ಲಿ ಈ ಕಾನೂನು ಇದೆ.

Leave a Reply

error: Content is protected !!